ಅಪ್ರಾಪ್ತ ಬಾಲಕಿಯೊಬ್ಬಳಿಗೆ ಬಲವಂತವಾಗಿ ಕಿಸ್ ಮಾಡಿ ರ‍್ಯಾಗಿಂಗ್ ಮಾಡಿದ ಘಟನೆ ಒಡಿಶಾದಲ್ಲಿ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆದ ನಂತರ ಇಬ್ಬರು ಅಪ್ರಾಪ್ತರು ಸೇರಿದಂತೆ ಐವರು ವಿದ್ಯಾರ್ಥಿಗಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡೊದ್ದಾರೆ. ಗುಂಜನ್ ಜಿಲ್ಲೆಯ ಕಾಲೇಜಿನಲ್ಲಿ ಈ ಘಟನೆ ಸಂಬಂಧಿಸಿದಂತೆ 12 ಮಂದಿ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ.
ಕಳೆದ ತಿಂಗಳು ಸರ್ಕಾರಿ ಕಾಲೇಜಿಗೆ ಸೇರಿದ್ದ ಪ್ರಥಮ ವರ್ಷದ ವಿದ್ಯಾರ್ಥಿನಿಗೆ ಅಪ್ರಾಪ್ತ ಬಾಲಕನೋರ್ವ ಹಿರಿಯ ವಿದ್ಯಾರ್ಥಿಗಳ ಪ್ರಚೋದನೆಯ ಮೇರೆಗೆ ಮೈದಾನದಲ್ಲಿ ಬಲವಂತವಾಗಿ ಮುತ್ತಿಟ್ಟಿದ್ದಾನೆ. ಅವಳು ಹೊರಡಲು ಎದ್ದು ನಿಂತಾಗ, ಸೀನಿಯರ್ ವಿದ್ಯಾರ್ಥಿಯೊಬ್ಬ ಅವಳ ಕೈ ಹಿಡಿದು ತಡೆದಿದ್ದಾನೆ. ಆತ ಕೈಯಲ್ಲಿ ದೊಣ್ಣೆ ಹಿಡಿದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಆಶ್ಚರ್ಯವೆಂಬಂತೆ ಈ ಘಟನೆಯು ಕಾಲೇಜಿನ ಇತರ ಹುಡುಗಿಯರ ಸಮ್ಮುಖದಲ್ಲೇ ನಡೆದಿದೆ. ಆದರೆ ದೈಹಿಕ ಕಿರುಕುಳದ ವಿರುದ್ಧ ಪ್ರತಿಭಟಿಸುವ ಬದಲು ಅವರು ಪ್ರೋತ್ಸಾಹ ನೀಡುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.
ಘಟನೆಯಲ್ಲಿ ಭಾಗಿಯಾದವರನ್ನು ನಾವು ಗುರುತಿಸಿದ್ದೇವೆ. ಅಲ್ಲದೆ ಅವರನ್ನು ಕಾಲೇಜಿನಿಂದ ಹೊರ ಹಾಕಿದ್ದೇವೆ. ಮುಂದೆ ಅವರಿಗೆ ಪರೀಕ್ಷೆ ಬರೆಯಲೂ ಅವಕಾಶ ನೀಡುವುದಿಲ್ಲ ಎಂದು ಕಾಲೇಜಿನ ಪ್ರಿನ್ಸಿಪಾಲ್ ಹೇಳಿದ್ದಾರೆ. ಇದು ಕೇವಲ ರ‍್ಯಾಗಿಂಗ್ ಪ್ರಕರಣವಲ್ಲ, ಆದರೆ ದೈಹಿಕ ಕಿರುಕುಳಕ್ಕೆ ಸಮಾನವಾಗಿದೆ ಎಂದು ಬರ್ಹಾಂಪುರದ ಪೊಲೀಸ್ ಅಧೀಕ್ಷಕ ಸರಬನ್ ವಿವೇಕ್ ಹೇಳಿದ್ದಾರೆ.

Related News

error: Content is protected !!