Categories: Latest

110 ಕೆವಿ ಲೈನ್ ಕಾಮಗಾರಿ ವಿಳಂಬಕ್ಕೆ ರೈತರ ಆಕ್ರೋಶ, ಶೀಘ್ರ ಅನುಷ್ಠಾನಕ್ಕೆ ಒತ್ತಾಯ

ಶಿವಮೊಗ್ಗ: ಸಾಗರ ತಾಲೂಕಿನ ಉಳ್ಳೂರುದಿಂದ ತ್ಯಾಗರ್ತಿವರೆಗೆ ನಿರ್ಮಾಣಗೊಳ್ಳುತ್ತಿರುವ 110 ಕೆವಿ ವಿದ್ಯುತ್ ಲೈನ್ ಕಾಮಗಾರಿ ವಿಳಂಬವಾಗುತ್ತಿರುವುದನ್ನು ಖಂಡಿಸಿರುವ ರೈತರು ಮತ್ತು ಸಾರ್ವಜನಿಕರು, ಸರ್ಕಾರ ಈಗಾಗಲೇ ನಿಗದಿಪಡಿಸಿರುವ ಮಾರ್ಗದಲ್ಲಿಯೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ 33 ವಿದ್ಯುತ್ ಗೋಪುರಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ರೈತರು ಯಾವುದೇ ತಕರಾರು ಇಲ್ಲದೆ ತಮ್ಮ ಭೂಮಿಯನ್ನು ಒದಗಿಸಿದ್ದಾರೆ. ಇನ್ನೂ 10 ರಿಂದ 14 ಗೋಪುರಗಳ ನಿರ್ಮಾಣ ಬಾಕಿಯಿದ್ದು, ಕೆಲವು ರೈತರ ವಿರೋಧದಿಂದ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಆರೋಪಿಸಲಾಗಿದೆ.

ಈ ವಿಚಾರವು ನ್ಯಾಯಾಲಯದ ಮೆಟ್ಟಿಲೇರಿದ್ದು, ಜಿಲ್ಲಾಧಿಕಾರಿಗಳು 176 ರೈತರಿಗೆ ನೋಟಿಸ್ ನೀಡಿ, ಕಾಮಗಾರಿಗೆ ಅಡ್ಡಿಪಡಿಸಬಾರದು ಹಾಗೂ ಪೂರ್ವನಿರ್ಧರಿತ ಮಾರ್ಗದಲ್ಲಿಯೇ ಯೋಜನೆ ಜಾರಿಗೊಳಿಸಲಾಗುವುದು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ರೈತರು ಕಾಮಗಾರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದರೂ, ಸುಮಾರು 150 ರೈತರು ಯೋಜನೆಗೆ ಒಪ್ಪಿಗೆ ಸೂಚಿಸಿ ತಮ್ಮ ಭೂಮಿಯನ್ನು ಬಿಟ್ಟುಕೊಟ್ಟಿದ್ದಾರೆ. ಒಟ್ಟು 60 ರಿಂದ 70 ರೈತರು ಯಾವುದೇ ತೊಂದರೆ ನೀಡದೆ ಸಹಕರಿಸಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ವಿದ್ಯುತ್ ಲೈನ್ ಮಾರ್ಗವನ್ನು ಬದಲಾಯಿಸಬಾರದು. ಸರ್ಕಾರ ಈಗಾಗಲೇ ನಿಗದಿಪಡಿಸಿರುವ ಸ್ಥಳದಲ್ಲಿಯೇ ಕಾಮಗಾರಿ ಪೂರ್ಣಗೊಳ್ಳಬೇಕು. ಮಾರ್ಗ ಬದಲಾವಣೆ ಯತ್ನ ನಡೆದರೆ ದೊಡ್ಡ ಮಟ್ಟದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಾಮಗಾರಿಯನ್ನು ಯಾವುದೇ ಒತ್ತಡಕ್ಕೆ ಮಣಿಯದೆ ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕರ ಬಹುಕಾಲದ ಬೇಡಿಕೆಯನ್ನು ಈಡೇರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಕುಮಾರಸ್ವಾಮಿ ಗೌಡ (ಕೊಪ್ಪ), ಸೋಮಶೇಖರ ಹುತ್ತದಿಂಬ, ಕುಮಾರ್ ಕಾಗೋಡುದಿಂಬ, ಗಣೇಶ್ ಕಾಗೋಡುದಿಂಬ, ಸತ್ಯನಾರಾಯಣ ಕಾಗೋಡುದಿಂಬ, ಬೀರಪ್ಪ ಮಳ್ಳ, ರೇಣುಕಮ್ಮ ಮಳ್ಳ, ಸಾವಿತ್ರಮ್ಮ ಮಳ್ಳ, ಹಮೀದ್ ಖಾನ್ (ತ್ಯಾಗರ್ತಿ), ಲಿಂಗರಾಜು (ತ್ಯಾಗರ್ತಿ), ಪರಶುರಾಮ ಜಂಬಾನಿ, ರಾಮಪ್ಪ ಬರೂರು, ಟಾಕಪ್ಪ ಕುಂದೂರು ಸೇರಿದಂತೆ ಹಲವರು ಭಾಗವಹಿಸಿದ್ದರು.

ಭ್ರಷ್ಟರ ಬೇಟೆ

Recent Posts

ತೊಡೆಯ ಮೇಲೆ ಮಹಿಳೆಯನ್ನು ಕೂರಿಸಿಕೊಂಡು ಆಟೋ ಓಡಿಸಿದ ಅಪ್ರಾಪ್ತ! ವೈರಲ್ ಆದ ವಿಡಿಯೊದ ಅಸಲಿ ಸತ್ಯ ಬಹಿರಂಗ

ಹೈದರಾಬಾದ್‌ನ ಚಾದರ್‌ಘಾಟ್ ಸೇತುವೆಯಲ್ಲಿ ಅಪ್ರಾಪ್ತ ಬಾಲಕನೊಬ್ಬ ಮಹಿಳೆಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡೇ ಆಟೋರಿಕ್ಷಾ ಚಲಾಯಿಸುತ್ತಿರುವ ವಿಡಿಯೊ ಮತ್ತೊಮ್ಮೆ ಸಾಮಾಜಿಕ…

15 hours ago

ಪೊಲೀಸ್-ಪತ್ರಕರ್ತರ ಸೋಗಿನಲ್ಲಿ ₹60 ಸಾವಿರ ಸುಲಿಗೆ! ನಾಲ್ವರು ಯೂಟ್ಯೂಬರ್‌ಗಳು ಅಂದರ್

ಹುಕ್ಕೇರಿ ತಾಲ್ಲೂಕಿನಲ್ಲಿ ಪತ್ರಕರ್ತರು ಹಾಗೂ ಪೊಲೀಸರ ಸೋಗಿನಲ್ಲಿ ವ್ಯಕ್ತಿಯೊಬ್ಬರನ್ನು ಬೆದರಿಸಿ ಹಣ ಸುಲಿಗೆ ಮಾಡಿದ ಆರೋಪದಡಿ ನಾಲ್ವರು ಯೂಟ್ಯೂಬರ್‌ಗಳನ್ನು ಹುಕ್ಕೇರಿ…

15 hours ago

ವೇದಿಕೆಯಲ್ಲಿ ಪೊಲೀಸ್ ರಾಜೀನಾಮೆ ಘೋಷಣೆ ವೈರಲ್.. ಆದರೆ ಅಸಲಿ ಕಥೆ ಬೇರೆಯೇ!

ದೆಹಲಿ ಜಂತರ್ ಮಂತರ್‌ನಲ್ಲಿ ನೀಟ್ ಪರೀಕ್ಷೆ ಅಕ್ರಮದ ವಿರುದ್ಧ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ ವೇಳೆ ಪೊಲೀಸರು…

15 hours ago

ಎಸ್‌ಬಿಐ ಮ್ಯಾನೇಜರ್‌ಗೆ ಕಪಾಳಮೋಕ್ಷ? ಕರುಣಾನಿಧಿ ಮೊಮ್ಮಗಳು ಕಾಯಲ್ವಿಳಿ ವಿರುದ್ಧ ಎಫ್‌ಐಆರ್; ವೈರಲ್ ಆಯ್ತು ಸಿಸಿಟಿವಿ ವಿಡಿಯೋ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಮೊಮ್ಮಗಳು ಹಾಗೂ ಕೇಂದ್ರ ಸಚಿವ ಎಂ.ಕೆ. ಅಲಗಿರಿ ಅವರ ಪುತ್ರಿ ಕಾಯಲ್ವಿಳಿ…

16 hours ago

ಮಳೆಗಾಲದ ಸೊಬಗಿನಲ್ಲಿ ಮಿಂದೇಳಿದ ಕಪ್ಪತ್ತಗುಡ್ಡ: ಪರಿಸರ ಪ್ರಿಯರನ್ನು ಕೈಬೀಸಿ ಕರೆಯುತ್ತಿರುವ ಉತ್ತರ ಕರ್ನಾಟಕದ ಸಹ್ಯಾದ್ರಿ

ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಪ್ರಸಿದ್ಧಿ ಪಡೆದಿರುವ ಕಪ್ಪತ್ತಗುಡ್ಡ ಮಳೆಗಾಲದ ಆಗಮನದೊಂದಿಗೆ ಹಸಿರು ಹೊದಿಕೆ ತೊಟ್ಟು ಪ್ರಕೃತಿ ಪ್ರೇಮಿಗಳು,…

19 hours ago

ಹುಬ್ಬಳ್ಳಿಯಲ್ಲಿ ರೈಲ್ವೆ ಹಳಿ ಪಕ್ಕ ಯುವಕನ ಶವ ಪತ್ತೆ; ಪತ್ನಿಯೊಂದಿಗೆ ಕಲಹದ ಬಳಿಕ ವ್ಯಸನಕ್ಕೆ ಬಿದ್ದಿದ್ದ ಆರೋಪ

ಹುಬ್ಬಳ್ಳಿ: ನಗರದ ಲೋಕಪ್ಪನ ಹಕ್ಕಲ ರೈಲ್ವೆ ಸೇತುವೆ ಸಮೀಪ ರೈಲ್ವೆ ಹಳಿ ಪಕ್ಕದಲ್ಲಿ 25 ವರ್ಷದ ಯುವಕನ ಶವ ಪತ್ತೆಯಾಗಿದ್ದು,…

2 days ago