Latest

ನೈಕಿ, ಪೂಮಾ ಹೆಸರಿನಲ್ಲಿ ನಕಲಿ ಬಟ್ಟೆ ದಂಧೆ: ಸಿದ್ದಾಪುರದಲ್ಲಿ ಬೃಹತ್ ದಾಳಿ

ಬೆಂಗಳೂರು: ನಗರದ ಸಿದ್ದಾಪುರದಲ್ಲಿ ಹೆಸರಾಂತ ಬ್ರ್ಯಾಂಡ್‌ಗಳ ನಕಲಿ ಬಟ್ಟೆಗಳ ದಂಧೆ ಬೆಳಕಿಗೆ ಬಂದಿದೆ. ನೈಕಿ ಮತ್ತು ಪೂಮಾ ಸಂಸ್ಥೆಗಳ ಹೆಸರಿನಲ್ಲಿ ನಕಲಿ ಬಟ್ಟೆ ಮಾರಾಟ ಮಾಡುತ್ತಿದ್ದ ದೊಡ್ಡ ಮಾಪದಾರದ ಗೋಡೌನ್ ಮೇಲೆ ಸಿದ್ದಾಪುರ ಪೊಲೀಸರು ದಾಳಿ ನಡೆಸಿದ್ದು, ಲಕ್ಷಾಂತರ ಮೌಲ್ಯದ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ.

ಆಧಿಕೃತ ಮಾಹಿತಿಯಂತೆ, ಸಿದ್ದಾಪುರದ ಭೈರಸಂದ್ರದಲ್ಲಿರುವ ಗೋಡೌನ್‌ನಲ್ಲಿ ನೈಕಿ, ಪೂಮಾ ಬ್ರ್ಯಾಂಡ್ ಹೆಸರು ಬಳಸಿ ಶರ್ಟ್, ಪ್ಯಾಂಟ್, ಟೀ-ಶರ್ಟ್, ಟ್ರಾಕ್ ಪ್ಯಾಂಟ್, ಒಳಉಡುಪು ಸೇರಿದಂತೆ ವಿವಿಧ ಬಟ್ಟೆಗಳನ್ನು ನಕಲಿ ರೂಪದಲ್ಲಿ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ಸುಮಾರು ₹8,000 ಮೌಲ್ಯದ ಬಟ್ಟೆಗಳನ್ನು ಕೇವಲ ₹2,000ಕ್ಕೆ ಸೇಲ್ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಈ ದಂಧೆ ಹಿಂದಿರುವ ವ್ಯಕ್ತಿಯಾಗಿ ಅವಿನಾಶ್ ಎಂಬುವವರನ್ನು ಗುರುತಿಸಲಾಗಿದೆ. ದೆಹಲಿಯಿಂದ ನಕಲಿ ಬಟ್ಟೆಗಳನ್ನು ಸಾಗತ್ತಿಸಿ, ಬೆಂಗಳೂರಿನಲ್ಲಿ ಅವುಗಳನ್ನು ಪಕ್ಕಾ ಬ್ರ್ಯಾಂಡ್‌ಗಳ ಲುಕ್‌ನಲ್ಲಿಗೆ ತಂದು ಮಾರಾಟ ಮಾಡುತ್ತಿದ್ದತನಕ ಮಾಹಿತಿ ಲಭ್ಯವಾಗಿದೆ.

ನೈಕಿ ಹಾಗೂ ಪೂಮಾ ಕಂಪನಿಗಳ ಪ್ರತಿನಿಧಿ ಶ್ರೀಜಿತ್ ಅವರು ನೀಡಿದ ದೂರಿನ ಮೇಲೆ ಸಿದ್ದಾಪುರ ಪೊಲೀಸರು ತಕ್ಷಣದ ಕ್ರಮವಾಗಿ ದಾಳಿ ನಡೆಸಿದ್ದು, ನಕಲಿ ಬಟ್ಟೆಗಳಿಂದ ತುಂಬಿದ್ದ ಗೋಡೌನ್‌ನ್ನು ಸೀಜ್ ಮಾಡಿದ್ದಾರೆ. ಪ್ರಕರಣವನ್ನು ಕಾಫಿರೈಟ್ಸ್ ಕಾಯ್ದೆಯಡಿ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಈ ಘಟನೆ ಸಿಟಿಯಲ್ಲಿ ನಕಲಿ ಬ್ರ್ಯಾಂಡ್ ದಂಧೆಯ ಅಸ್ತಿತ್ವವನ್ನು ಮತ್ತೊಮ್ಮೆ ದೃಢಪಡಿಸಿದ್ದು, ಗ್ರಾಹಕರು ಹೆಚ್ಚಿನ ಜಾಗೃತೆಯಿಂದ ಶಾಪಿಂಗ್ ಮಾಡಬೇಕಾದ ಅವಶ್ಯಕತೆ ಎತ್ತಿಹಿಡಿದಿದೆ.

nazeer ahamad

Recent Posts

ರೀಲ್ಸ್ ಹುಚ್ಚಾಟದ ದುರಂತ: ಹುಬ್ಬಳ್ಳಿಯಲ್ಲಿ ಬಾಲಕ ಸಾವು – ಇಬ್ಬರ ಬಂಧನ

ಹುಬ್ಬಳ್ಳಿಯಲ್ಲಿ ರೀಲ್ಸ್ ಮಾಡುವ ಹುಚ್ಚಾಟದಿಂದ ಸಂಭವಿಸಿದ ಭೀಕರ ಅಪಘಾತದಲ್ಲಿ 15 ವರ್ಷದ ಬಾಲಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು…

34 minutes ago

ಮೂಡಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಮತ್ತೊಂದು ಆರೋಪ: 2018 ರಿಂದ 2023 ರವರೆಗೆ ಮುಖ್ಯ ಶಿಕ್ಷಕಿಯ ಮೇಲೆ ಲೈಂಗಿಕ ದೌರ್ಜನ್ಯ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಸಂದೇಶ್…

14 hours ago

ರಾಜ್ಯದಲ್ಲಿ ಪಾರ್ಲೆ-ಜಿ ಉತ್ಪಾದನೆ ಸ್ಥಗಿತ, ಬಿಸ್ಕೆಟ್ ಅಭಾವದ ಆತಂಕ

Iran-Israel ಸಂಘರ್ಷದ ಪರೋಕ್ಷ ಪರಿಣಾಮವಾಗಿ ರಾಜ್ಯದಲ್ಲಿ ಬಿಸ್ಕೆಟ್ ಅಭಾವದ ಭೀತಿ ಎದುರಾಗಿದೆ. ವಿಶೇಷವಾಗಿ ಮಕ್ಕಳಿಗೆ ಹೆಚ್ಚು ಬಳಸುವ Parle-G ಬಿಸ್ಕೆಟ್‌ಗಳ…

15 hours ago

ನವಲಗುಂದದಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಮುಖ್ಯಶಿಕ್ಷಕ ಬಂಧನ

ಧಾರವಾಡ ಜಿಲ್ಲೆಯ Navalgund ತಾಲೂಕಿನ ಒಂದು ಗ್ರಾಮದಲ್ಲಿ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಶಾಲೆಯ ಮುಖ್ಯಶಿಕ್ಷಕನ ವಿರುದ್ಧ 10 ವರ್ಷದ…

1 day ago

ಮೇಲಾಧಿಕಾರಿ ಕಿರುಕುಳ ಆರೋಪ: ಪಾವಗಡದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಆತ್ಮಹತ್ಯೆ

ತುಮಕೂರು ಜಿಲ್ಲೆಯ Pavagada ಪಟ್ಟಣದಲ್ಲಿ ಹೃದಯ ಕಲುಕುವ ಘಟನೆ ನಡೆದಿದೆ. ಮೇಲಾಧಿಕಾರಿಗಳ ಕಿರುಕುಳದಿಂದ ಮನನೊಂದು ಅಧಿಕಾರಿಯೊಬ್ಬರು ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು…

1 day ago

14ರ ಬಾಲಕನಿಂದ ಇಬ್ಬರು ಅಪ್ರಾಪ್ತ ಬಾಲಕಿಯರು ಗರ್ಭಿಣಿ? ವೈರಲ್ ವಿಡಿಯೋಗೆ ಆಕ್ರೋಶ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. X ನಲ್ಲಿ ವೈರಲ್ ಆಗಿರುವ ಈ ವಿಡಿಯೋ…

1 day ago