Latest

ಪತ್ನಿ ಮತ್ತು ಕುಟುಂಬದ ಕಿರುಕುಳದಿಂದ ಎಂಜಿನಿಯರ್ ಆತ್ಮಹತ್ಯೆ.

ಉದ್ಯೋಗದ ನಿಮಿತ್ತ ಹೋಟೆಲ್‌ನಲ್ಲಿ ವಾಸಿಸುತ್ತಿದ್ದ ಫೀಲ್ಡ್ ಎಂಜಿನಿಯರ್ ಮೋಹಿತ್ ಕುಮಾರ್ ಆತ್ಮಹತ್ಯೆಗೆ ಶರಣಾಗಿರುವ ದುಃಖದ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮೋಹಿತ್ ತಮ್ಮ ಪತ್ನಿ ಹಾಗೂ ಆಕೆಯ ಕುಟುಂಬದಿಂದ ಮಾನಸಿಕ ಹಿಂಸೆ ಅನುಭವಿಸುತ್ತಿರುವುದನ್ನು ವಿವರಿಸಿದ ಎಮೋಷನಲ್ ವಿಡಿಯೋ ಸಂದೇಶವೊಂದನ್ನು ರೆಕಾರ್ಡ್ ಮಾಡಿದ್ದಾರೆ.

ವೀಡಿಯೋದಲ್ಲಿ ಭಾವುಕರಾಗಿ ಮಾತನಾಡಿರುವ ಮೋಹಿತ್, “ಈ ವಿಡಿಯೋ ನಿಮಗೆ ಸಿಗುವ ಹೊತ್ತಿಗೆ ನಾನು ಈ ಲೋಕದಲ್ಲಿರಲ್ಲ. ಪುರುಷರಿಗೂ ಪ್ರತ್ಯೇಕವಾಗಿ ಕಾನೂನು ಇದ್ದಿದ್ದರೆ, ಬಹುಶಃ ನಾನು ಈ ತೀರ್ಮಾನ ತೆಗೆದುಕೊಳ್ಳುತ್ತಿರಲಿಲ್ಲ,” ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ಆಸ್ತಿಗೆ ಒತ್ತಡ, ಸುಳ್ಳು ಆರೋಪದ ಬೆದರಿಕೆ
ಮೋಹಿತ್ ತಮ್ಮ ಪತ್ನಿ ಪ್ರಿಯಾ ಯಾದವ್ ಹಾಗೂ ಆಕೆಯ ತಾಯಿ–ಮಾಮರಿಂದ ಆಸ್ತಿಯನ್ನು ಅವರ ಹೆಸರಿಗೆ ವರ್ಗಾಯಿಸಲು ಒತ್ತಡ ಬಂದಿದ್ದು, ಹಾಗಿಲ್ಲದಿದ್ದರೆ ದೂರು ನೀಡುವ ಬೆದರಿಕೆ ಬಂದಿತ್ತನ್ನೂ ಹೇಳಿದ್ದಾರೆ. “ನನ್ನ ಹೆಂಡತಿ ಮತ್ತು ಅವಳ ತಾಯಿ ನನ್ನ ಮನಸ್ಸನ್ನು ಕುಗ್ಗಿಸುತ್ತಿದ್ದರು. ಅವರು ಎಲ್ಲಾ ಆಭರಣಗಳು ಹಾಗೂ ಸೀರೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಮನೆ ಮತ್ತು ಆಸ್ತಿಯನ್ನು ಅವರ ಹೆಸರಿಗೆ ಮಾಡದಿದ್ದರೆ, ನನ್ನ ಮೇಲೆ ಹಾಗೂ ನನ್ನ ಕುಟುಂಬದ ಮೇಲೆ ಸುಳ್ಳು ವರದಕ್ಷಿಣೆ ಪ್ರಕರಣ ದಾಖಲಿಸುವುದಾಗಿ ಬೆದರಿಸುತ್ತಿದ್ದರು,” ಎಂದು ಮೋಹಿತ್ ವಿಡಿಯೋದಲ್ಲಿ ಆರೋಪಿಸಿದ್ದಾರೆ.

ಪತ್ನಿಯ ವೈವಹಿಕ ಜೀವನದ ಬದಲಾವಣೆ
ಮೂಲತಃ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಿಂದಾದ ಮೋಹಿತ್, ಬಹು ವರ್ಷಗಳ ಪ್ರೇಮ ಸಂಬಂಧದ ಬಳಿಕ ಪ್ರಿಯಾ ಯಾದವ್ ಅವರನ್ನು ಮದುವೆಯಾಗಿದ್ದರು. ಪ್ರಿಯಾ ಬಿಹಾರದ ಸಮಷ್ಟಿಪುರದಲ್ಲಿ ಶಿಕ್ಷಕಿಯಾಗಿ ಕೆಲಸ ಆರಂಭಿಸಿದ ನಂತರ ಅವರ ವರ್ತನೆ ಬದಲಾಗಿದೆ ಎಂದು ಮೋಹಿತ್ ಕುಟುಂಬದವರು ಆರೋಪಿಸಿದ್ದಾರೆ. ಪ್ರಿಯಾ ತನ್ನ ತಾಯಿ ಮತ್ತು ಸಹೋದರನ ಪ್ರಭಾವದಿಂದ ಮೋಹಿತ್‌ನ್ನು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಳು ಎಂದು ತಿಳಿಸಲಾಗಿದೆ.

ಗರ್ಭಪಾತಕ್ಕೂ ಒತ್ತಡ?
ಮೋಹಿತ್ ತಮ್ಮ ವಿಡಿಯೋದಲ್ಲಿ ಮತ್ತೊಂದು ಗಂಭೀರ ಆರೋಪ ಮಾಡಿದ್ದು, “ನನ್ನ ಹೆಂಡತಿಯ ತಾಯಿ ನನ್ನ ಹೆಂಡತಿಯ ಗರ್ಭಪಾತಕ್ಕೆ ಒತ್ತಡ ಹೇರಿದಳು,” ಎಂಬುದಾಗಿದೆ.

ಈ ಘಟನೆ ಭಾರೀ ಚರ್ಚೆಗೆ ಕಾರಣವಾಗಿದ್ದು, ಪುರುಷರಿಗೂ ತಕ್ಕ ನ್ಯಾಯ ವ್ಯವಸ್ಥೆ ಇರುವ ಅಗತ್ಯತೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮೂಡಿಸಿದೆ. ಪೊಲೀಸರು ಈ ಪ್ರಕರಣದ ಸಂಬಂಧ ತನಿಖೆ ಆರಂಭಿಸಿದ್ದಾರೆ.

nazeer ahamad

Recent Posts

ಸಿದ್ದರಾಮಯ್ಯ ನಮ್ಮ ನಾಯಕ, 2028ಕ್ಕೆ ಡಿಕೆಶಿ ಸಿಎಂ ಆಗಲಿ: ಸತೀಶ್ ಜಾರಕಿಹೊಳಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…

19 hours ago

ಅಟ್ಟಿಕಾ ಗೋಲ್ಡ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ: 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಶೋಧ; ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ, ₹7.52 ಲಕ್ಷ ನಗದು ಜಪ್ತಿ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…

1 day ago

ಇಬ್ಬರು ಮಕ್ಕಳ ತಾಯಿಗೆ ವಂಚನೆ ಆರೋಪ: ಖಾಸಗಿ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್; ₹9 ಲಕ್ಷ ಪಡೆದ ಟ್ಯಾಟೂ ಆರ್ಟಿಸ್ಟ್ ಅರ್ಜುನ್? ಎಂದು ಮಹಿಳೆ ಆರೋಪ.

ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…

1 day ago

ಖಾಲಿ ಸೈಟ್ ಸ್ವಚ್ಛಗೊಳಿಸಲು ಹೋದಾಗ ಬಯಲಾಯ್ತು ಕೊಲೆ ರಹಸ್ಯ: ಪತ್ನಿಯನ್ನು ಕೊಂದು ಶವ ಎಸೆದಿದ್ದ ಪತಿ ಬಂಧನ

ಬೆಂಗಳೂರು: ಜಿಬಿಎ ನೋಟಿಸ್‌ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…

2 days ago

₹30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…

2 days ago

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

2 days ago