ಕೋಲಾರ ಫೆ.2 : ಟೇಕಲ್ ರೈಲ್ವೆ ನಿಲ್ದಾಣದಲ್ಲಿ ರಾಕೇಶ್ ಎಂಬ ಕಾರು ಚಾಲಕ ಶನಿವಾರ ತಡರಾತ್ರಿ ಕಂಠಪೂರ್ತಿ ಕುಡಿದು ತನ್ನ ಮಾರುತಿ ಸ್ವಿಫ್ಟ್ ಡಿಸೈರ್ ಕಾರ್ (KA52-B-7105) ನಿಯಂತ್ರಣ ಕಳೆದುಕೊಂಡು ಕಾರನ್ನು ಟೇಕಲ್ ರೈಲ್ವೆ ಸ್ಟೇಷನ್ ಒಳಗೆ ನುಗ್ಗಿಸಿದ್ದಾನೆ. ರೈಲ್ವೆ ಸ್ಟೇಷನ್ ಒಳಗೆ ನುಗ್ಗಿದ ಕಾರು ನೇರವಾಗಿ ಪ್ಲಾಟ್ ಫಾರ್ಮ್ ಮೇಲಿಂದ ಚಲಿಸಿ ನಂತರ ರೈಲ್ವೆ ಹಳಿಗಳ ಮೇಲೆ ಅಪ್ಪಳಿಸಿದೆ. ಇದರ ಪರಿಣಾಮ ಕಾರು ಮತ್ತು ರೈಲ್ವೆ ಹಳಿಗಳಿಗೆ ಹಾನಿ ಉಂಟಾಗಿದ್ದು, ಆ ಸಮಯದಲ್ಲಿ ಯಾವುದೇ ರೈಲು ಬಾರದ ಕಾರಣ ಆಗಬಹುದಾದ ಭಾರಿ ಅನಾಹುತದಿಂದ ಪಾರದ ಘಟನೆ ನಡೆದಿದೆ.

ದಿಗಿಲುಗೊಂಡ ರೈಲ್ವೆ ಸಿಬ್ಬಂದಿಗಳ : ರೈಲ್ವೇ ಸಿಬ್ಬಂದಿಗಳು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಗಾಬರಿಗೊಂಡರು, ಅವರ ಸಮಯ ಪ್ರಜ್ಞೆಯಿಂದ ಕೂಡಲೇ ಎಚ್ಚೆತ್ತಿಕೊಂಡು ರೈಲ್ವೆ ಪೊಲೀಸರು ಮತ್ತು ಅಧಿಕಾರಿಗಳು ಜೆಸಿಬಿ ಸಹಾಯದಿಂದ ಕಾರನ್ನು ರೈಲ್ವೆ ಹಳಿಗಳಿಂದ ಹೊರತೆಗೆದಿದ್ದಾರೆ.

ಬೆಂಗಳೂರು-ಚೆನ್ನೈ ನಡುವೆ ಅನೇಕ ರೈಲುಗಳು ಟೇಕಲ್ ಮುಖಾಂತರವಾಗಿ ಸಂಚರಿಸುತ್ತಿದ್ದು ಘರೈಲ್ವೆಟನೆ ನಡೆದ ವೇಳೆ ರೈಲು ಬಂದಿದ್ದರೆ ದೊಡ್ಡ ಅನಾಹುತವೇ ಜರುಗುತ್ತಿತ್ತು, ಅದೃಷ್ಟವಶ ಘಟನೆ ನಡೆದ ಸಮಯದಲ್ಲಿ ಯಾವುದೇ ರೈಲು ಭಾರದಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಕಂಠಪೂರ್ತಿ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ ರಾಕೇಶ್ ಈ ಅವಾಂತರ ಸೃಷ್ಟಿಸಿದ್ದಾನೆ, ರೈಲ್ವೆ ಪೊಲೀಸರು ಕಾರು ಚಾಲಕ ರಾಕೇಶ್‌ನನ್ನು ವಶಕ್ಕೆ ಪಡೆದು ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಕಾರನ್ನು ವಶಕ್ಕೆ ಪಡೆದು ರಾಕೇಶ್ ನನ್ನು ಬಂಧಿಸಿದ್ದಾರೆ. ವರದಿ: ರೋಶನ್ ಜಮೀರ್

Related News

error: Content is protected !!