Categories: Latest

ಚಾಲಕನ ಸಮಯಪ್ರಜ್ಞೆ: ಮರಕ್ಕೆ ಡಿಕ್ಕಿ ಹೊಡೆಸಿ 16 ಪ್ರಯಾಣಿಕರ ಪ್ರಾಣ ಉಳಿಸಿದ ಕೆಕೆಆರ್‌ಟಿಸಿ ಬಸ್ ಚಾಲಕ

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಪಿಂಜಾರ್ ಹೆಗ್ಡಾಳ್ ಗ್ರಾಮದ ಹೊರವಲಯದ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಕೆಕೆಆರ್‌ಟಿಸಿ ಬಸ್ ಅಪಘಾತಕ್ಕೀಡಾದರೂ, ದೊಡ್ಡ ಅನಾಹುತವನ್ನು ಚಾಲಕನ ಸಮಯಪ್ರಜ್ಞೆ ತಪ್ಪಿಸಿದೆ.

ಪಟ್ಟಣದಿಂದ ರಾಯಚೂರಿಗೆ ತೆರಳುತ್ತಿದ್ದ ಬಸ್ಸಿನಲ್ಲಿ ಒಟ್ಟು 16 ಮಂದಿ ಪ್ರಯಾಣಿಕರಿದ್ದರು. ಪ್ರಯಾಣದ ವೇಳೆ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಗ್ಗಿನತ್ತ ಸಾಗುತ್ತಿದ್ದಾಗ, ಚಾಲಕ ಶಂಕರಲಿಂಗ ಅವರು ತಕ್ಷಣದ ನಿರ್ಧಾರ ತೆಗೆದುಕೊಂಡು ಬಸ್ ಅನ್ನು ಮರಕ್ಕೆ ಡಿಕ್ಕಿ ಹೊಡೆಸಿದರು. ಇದರಿಂದ ಬಸ್ ಮಗುಚಿ ಬೀಳುವ ಅಪಾಯ ತಪ್ಪಿತು ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದಲ್ಲಿ ಚಾಲಕ ಶಂಕರಲಿಂಗ ಹಾಗೂ ನಿರ್ವಾಹಕ ಹನುಮಂತಪ್ಪ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ನಂತರ ಎಲ್ಲ ಪ್ರಯಾಣಿಕರನ್ನು ಮತ್ತೊಂದು ಬಸ್ ಮೂಲಕ ಗಮ್ಯಸ್ಥಾನಕ್ಕೆ ಕಳುಹಿಸಲಾಗಿದೆ ಎಂದು ಡಿಪೋ ಅಧಿಕಾರಿ ಕೆ. ಸಂತೋಷ್ ಕುಮಾರ್ ತಿಳಿಸಿದ್ದಾರೆ.

ಭ್ರಷ್ಟರ ಬೇಟೆ

Recent Posts

ಅಕ್ರಮ ಸಿಲಿಂಡರ್ ದಂಧೆ ಬಯಲು: ಅಧಿಕಾರಿಗೆ ಪ್ರಭಾವಿಗಳ ಒತ್ತಡ, ವೈರಲ್ ವಿಡಿಯೋದಿಂದ ಸಂಚಲನ

ಬೆಂಗಳೂರು ನಗರದ ಯಲಹಂಕ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 350 ಅಡುಗೆ ಅನಿಲ ಸಿಲಿಂಡರ್‌ಗಳನ್ನು ಅಧಿಕಾರಿಗಳು ಪತ್ತೆಹಚ್ಚಿದ ಪ್ರಕರಣಕ್ಕೆ ಹೊಸ ತಿರುವು…

5 hours ago

ವಿವಾಹಿತೆಯೊಂದಿಗೆ ಸಂಬಂಧ: ಆಕೆಯನ್ನೇ ಕೊಂದು ಫ್ರಿಡ್ಜ್ ನಲ್ಲಿಟ್ಟ ನೌಕಾಪಡೆ ಉದ್ಯೋಗಿ.

ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಗಾಜುವಾಕದಲ್ಲಿ ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ, ತನ್ನೊಂದಿಗೆ ವಿವಾಹೇತರ…

5 hours ago

ತನ್ನ ಸ್ನೇಹಿತೆಯೊಂದಿಗೂ ಸಂಬಂಧ ಬೆಳೆಸು ಪತ್ನಿ ಒತ್ತಾಯ: ಬೆಂಗಳೂರಿನಲ್ಲಿ ಪತಿಯಿಂದ ದೂರು ದಾಖಲು.

ಬೆಂಗಳೂರು ನಗರದಲ್ಲಿ ಪತ್ನಿಯ ಮಾನಸಿಕ ಹಾಗೂ ಲೈಂಗಿಕ ಕಿರುಕುಳದಿಂದ ಬೇಸತ್ತ ಪತಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಳಕಿಗೆ ಬಂದಿದೆ.…

5 hours ago

ಚಿನ್ನ-ಹಣ ವಾಪಸ್ ಕೇಳಿದ್ದಕ್ಕೆ ದ್ವೇಷ: ಕುಡಿಸಿ ಸ್ನೇಹಿತೆಯನ್ನೇ ಕೊಂದ ಮಾಜಿ ಕೆಲಸದಾಕೆ

ಗುಜರಾತ್‌ನ ಪಾಲನ್‌ಪುರದಲ್ಲಿ ಮಹಿಳೆಯೊಬ್ಬಳನ್ನು ಆಕೆಯೇ ವಿಶ್ವಾಸಿಸಿದ್ದ ಮಾಜಿ ಕೆಲಸದಾಕೆ ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಶಾಂತಿಬೆನ್…

6 hours ago

ಲೇಡಿ ಡಾನ್‌ಗೆ ಅಶ್ಲೀಲ ಮೆಸೇಜ್ ಪ್ರಕರಣ: ಬೆಂಗಳೂರು ಇನ್ಸ್‌ಪೆಕ್ಟರ್ ಕಳಿಸಿದ್ದ ಸಂದೇಶಗಳು ಬಯಲು.

ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿರುವ ಘಟನೆಯೊಂದರಲ್ಲಿ, ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ರೌಡಿ ಶೀಟರ್ ಪಟ್ಟಿಯಲ್ಲಿರುವ ಮಹಿಳೆಗೆ ಅಶ್ಲೀಲ ಸಂದೇಶಗಳನ್ನು…

6 hours ago

ಸರ್ಕಾರಿ ಆಸ್ಪತ್ರೆಗಳಲ್ಲಿ 1500ಕ್ಕೂ ಹೆಚ್ಚು ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳ ಭರ್ತಿ: ಸಚಿವ ದಿನೇಶ್ ಗುಂಡೂರಾವ್ ಘೋಷಣೆ

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ 1500ಕ್ಕೂ ಹೆಚ್ಚು ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞರ (ಲ್ಯಾಬ್ ಟೆಕ್ನಿಷಿಯನ್) ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ…

6 hours ago