Latest

ಚನ್ನಪಟ್ಟಣದಲ್ಲಿ ಡಿಜಿಟಲ್ ಅರೆಸ್ಟ್ ಬಲಿ: ಸೈಬರ್ ವಂಚನೆಗೆ ಸಿಲುಕಿದ ವ್ಯಕ್ತಿಯ ಆತ್ಮಹತ್ಯೆ

ಚನ್ನಪಟ್ಟಣ: ರಾಜ್ಯದಲ್ಲಿ ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಸೈಬರ್ ವಂಚನೆ ಪ್ರಕರಣಗಳು ಆತಂಕ ಉಂಟುಮಾಡುತ್ತಿವೆ. ಇತ್ತೀಚಿಗೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೆಲಗೆರೆ ಗ್ರಾಮದಲ್ಲಿ ನಡೆದೊಂದು ದುರಂತ ಘಟನೆ ಈ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.

ಕೆ. ಕುಮಾರ್ (48) ಎಂಬವರು ಡಿಜಿಟಲ್ ಮೋಸಕಾರರ ಬಲೆಗೆ ಬಿದ್ದು ಸೋಮವಾರ ತನ್ನ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಬೆಸ್ಕಾಂನಲ್ಲಿ ಔಟ್‌ಸೋರ್ಸ್ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಅವರು ಪತ್ನಿ ಮತ್ತು ಮಗನೊಂದಿಗೆ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಿದ್ದವರು.

ಕುಮಾರ್ ಸಾವಿಗೆ ಕಾರಣವಾಯ್ತು ಎಂಬುದಾಗಿ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದ್ದು — ‘ವಿಕ್ರಮ್ ಗೋಸ್ವಾಮಿ’ ಎಂಬಾತ ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡು, “ನಿಮ್ಮ ವಿರುದ್ಧ ಅರೆಸ್ಟ್ ವಾರಂಟ್ ಇದೆ” ಎಂದು ಹೆದರಿಸಿ, ಪ್ರಕರಣವೊಂದರಲ್ಲಿ ಬಂಧಿಸುವ ಬೆದರಿಕೆ ನೀಡಿ ಹಣ ಪೀಡಿಸಿದ್ದರು. ಮೊದಲು 1.95 ಲಕ್ಷ ರೂ. ಖಾತೆಗೆ ಹಾಕುವಂತೆ ಮಾಡಿದ್ದಾನೆ. ಬಳಿಕ ಹಂತ ಹಂತವಾಗಿ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ 11 ಲಕ್ಷ ರೂ. ವರೆಗೆ ಹಣ ವರ್ಗಾಯಿಸಲಾಗಿತ್ತು. ಕೊನೆಗೆ ಇನ್ನೂ 2.75 ಲಕ್ಷ ರೂ. ಪಾವತಿಸಲು ಒತ್ತಡ ತರಲಾಗುತ್ತಿತ್ತು.

ಈ ಆರ್ಥಿಕ ಒತ್ತಡ, ಮಾನಸಿಕ ತೊಂದರೆಗಳಿಂದ ಬೇಸತ್ತ ಕುಮಾರ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಚನ್ನಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಸೈಬರ್ ಅಪರಾಧಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿರುವುದು ಇಂತಹ ಘಟನೆಗಳಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ.

nazeer ahamad

Recent Posts

“ರಾಕ್ಷಸೀ ಕೃತ್ಯ: ಪ್ರೇಮದ ಹೆಸರಿನಲ್ಲಿ ಮಹಿಳೆಯ ಹತ್ಯೆ, ಬಳಿಕ ಖಾಸಗಿ ಭಾಗ ಹರಿದು ಕರುಳು ಹೊರತೆಗೆದ ಕ್ರೂರಿ!”

ಉತ್ತರ ಪ್ರದೇಶದ ಫತೇಪುರ ಜಿಲ್ಲೆಯಲ್ಲಿ ನರ್ಬಯಾ ಪ್ರಕರಣವನ್ನು ನೆನಪಿಸುವಂತೆಯೇ ಒಂದು ಹೃದಯವಿದ್ರಾವಕ ಅಪರಾಧ ಬೆಳಕಿಗೆ ಬಂದಿದೆ. ಯುವಕನೊಬ್ಬ ತನ್ನ ಪ್ರೇಮಿಕೆಯನ್ನು…

5 hours ago

40 ವರ್ಷದ ವ್ಯಕ್ತಿಯ ಜೊತೆ 13 ವರ್ಷದ ಬಾಲಕಿಯ ಮದುವೆ.!

ಹೈದರಾಬಾದ್, ಜುಲೈ 31: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಬಾಲ್ಯವಿವಾಹದ ಸಂಸ್ಕೃತಿಯ ಕುರಿತಂತೆ ಆತಂಕ ಹೆಚ್ಚಿಸುವ ಘಟನೆ ಬೆಳಕಿಗೆ ಬಂದಿದೆ. ಕೇವಲ…

6 hours ago

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಶುಂಠಿ,ಮಾವು,ಅಡಿಕೆಗೆ ಅವಕಾಶ

ಮುಂಡಗೋಡ: ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ 2025 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ…

6 hours ago

ಪೈಪ್ ನಲ್ಲಿ ಸಿಕ್ಕಿಕೊಂಡಿದ್ದ ನಾಗರ ಹಾವನ್ನು ರಕ್ಷಿಸಿದ ಗಸ್ತು ವನಪಾಲಕ ಮುತ್ತುರಾಜ

ಮುಂಡಗೋಡ: ತಾಲೂಕಿನ ಕಾತೂರ ವಲಯದ ಓರಲಗಿ ಗಸ್ತಿನ ಮಾಲತೇಶ ಗೊಂದಿ ಅವರ ಹೊಲದಲ್ಲಿ ಪೈಪ್ ನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತಿದ್ದ ನಾಗರಹಾವನ್ನು…

6 hours ago

ಸಿನಿಮಾ ಕ್ಷೇತ್ರದಲ್ಲಿ ಬಿರುಕು ಬಿಡಬೇಡಿ: ರಮ್ಯಾ–ದರ್ಶನ್ ಅಭಿಮಾನಿ ವಿವಾದಕ್ಕೆ ರಾಕ್‌ಲೈನ್ ವೆಂಕಟೇಶ್ ಗಂಭೀರ ಎಚ್ಚರಿಕೆ”

ಬೆಂಗಳೂರು – ನಟಿ ರಮ್ಯಾ ಮತ್ತು ನಟ ದರ್ಶನ್ ಅವರ ಅಭಿಮಾನಿಗಳ ನಡುವಿನ ಸಾಮಾಜಿಕ ಮಾಧ್ಯಮ ಜಟಾಪಟಿಗೆ ಸಂಬಂಧಿಸಿದಂತೆ ಇದೀಗ…

7 hours ago

ಅಭಿಮಾನಿಗಳ ಮಾತಿಗೆ ಸಂಯಮ ತರಲು ದರ್ಶನ್ ಜೊತೆ ಮಾತನಾಡುತ್ತೇನೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ”

ಮಂಡ್ಯ, ಜುಲೈ 31: "ನಟ ದರ್ಶನ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬೇಜವಾಬ್ದಾರಿತನದ ಮೂಲಕ ಕೆಟ್ಟ ಕಾಮೆಂಟ್‌ಗಳು ಮಾಡುತ್ತಿರುವುದು ಅನಾವಶ್ಯಕ.…

8 hours ago