Latest

ಧರ್ಮಸ್ಥಳದಲ್ಲಿ ಶವ ಪತ್ತೆ ಶೋಧನಾ ಕಾರ್ಯಾಚರಣೆ ವಿಳಂಬ: ಅಸ್ತಿಪಂಜರ ಪತ್ತೆಯಾಗದ ಹಿನ್ನೆಲೆ ಮುಂದೂಡಿದ ಎಸ್ಐಟಿ

ಧರ್ಮಸ್ಥಳ, ದಕ್ಷಿಣ ಕನ್ನಡ: ಧರ್ಮಸ್ಥಳ ಗ್ರಾಮದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ ನೀಡಿದ ಅಹವಾಲಿನ ನಂತರ, “ನಾನು ಹಲವಾರು ಮೃತದೇಹಗಳನ್ನು ಹೂತುಹಾಕಿದ್ದೇನೆ” ಎಂಬ ಗಂಭೀರ ಆರೋಪದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಹತ್ವದ ಶೋಧನಾ ಕಾರ್ಯಾಚರಣೆಗೆ ಮುಂದಾಗಿದೆ.

ಆ ದೂರು ಆಧರಿಸಿ, ಎಸ್‌ಐಟಿ ತಂಡ ಕಳೆದ ಕೆಲವು ದಿನಗಳಿಂದ ತನಿಖೆ ಆರಂಭಿಸಿದ್ದು, ಆರೋಪಿಯು ಗುರುತಿಸಿದ್ದ 13 ಸ್ಥಳಗಳಿಗೆ ಸಂಖ್ಯೆಗಳನ್ನು ನೀಡಲಾಗಿದ್ದು, ಪ್ರವೇಶ ನಿರ್ಬಂಧ ಜಾರಿಯಲ್ಲಿರಿಸಲಾಗಿದೆ. ಈ ಸ್ಥಳಗಳಿಗೆ ಕಾವಲು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ.

ಮೂರೂ ಕಡೆ ಸಮಕಾಲೀನ ಅಗೈಕೆಯ ತೀರ್ಮಾನ
ಬುಧವಾರ ಧರ್ಮಸ್ಥಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೇ ಸಮಯದಲ್ಲಿ ಮೂರು ಕಡೆಗಳಲ್ಲಿ ಭೂಮಿಯನ್ನು ಅಗೆದು ಶವಗಳ ಬಗ್ಗೆ ಪತ್ತೆಹಚ್ಚುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಕಾರ್ಯಾಚರಣೆಗೆ ಮೂರು ತಹಸೀಲ್ದಾರ್‌ಗಳು ನೇತೃತ್ವವಹಿಸುತ್ತಿದ್ದು, ಎಸ್‌ಐಟಿ ಮೂರು ವಿಭಿನ್ನ ತಂಡಗಳನ್ನು ರಚಿಸಿದ್ದು, ಸಮಕಾಲೀನವಾಗಿ ಕೆಲಸ ನಡೆಯಲಿದೆ.

ಮಂಗಳವಾರದ ಕಾರ್ಯಾಚರಣೆ ವಿಫಲ
ನಿನ್ನೆ ಎಸ್‌ಐಟಿ ತಂಡ ಮಾರ್ಕ್ ಮಾಡಿರುವ ನಂಬರ್‌–1 ಸ್ಥಳದಲ್ಲಿ ಅಗೆಯುವ ಕಾರ್ಯ ಪ್ರಾರಂಭಿಸಿತು. ಆದರೆ ಅತಿವೃಷ್ಟಿಯಿಂದ ಭೂಮಿಯ ತಳಭಾಗದಲ್ಲಿ ನೀರು ತುಂಬಿದ ಕಾರಣ ಶೋಧನಾ ಕಾರ್ಯದಲ್ಲಿ ಅಡಚಣೆ ಉಂಟಾಯಿತು. ಇದರಿಂದಾಗಿ ಕಾರ್ಮಿಕರಿಂದಲೇ ಪ್ರಾರಂಭವಾದ ಅಗೆವು ನಂತರ ಮಿನಿ ಹಿಟಾಚಿ ಯಂತ್ರದ ಸಹಾಯದಿಂದ ಮುಂದುವರಿಸಲಾಯಿತು. ಆದರೂ ಸಂಜೆವರೆಗೆ ಯಾವುದೇ ಅಸ್ಥಿಪಂಜರ ಅಥವಾ ಶವದ ಪತ್ತೆಯಾಗದೇ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ಸ್ಥಳದಲ್ಲಿ ಬೃಹತ್ ನಿಯೋಜನೆ
ಕಾರ್ಯಾಚರಣೆಯ ಸಮಯದಲ್ಲಿ ಡಾಗ್ ಸ್ಕ್ವಾಡ್, ಪುತ್ತೂರು ಉಪವಿಭಾಗದ ಎ.ಸಿ. ಸ್ಟೆಲ್ಲಾ ವರ್ಗೀಸ್, ವಿಎಫ್‌ಎಸ್ ಮತ್ತು ಎಫ್‌ಎಸ್‌ಎಲ್ ಅಧಿಕಾರಿಗಳು, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಸಿಐಡಿ ಹಾಗೂ ಎಸ್‌ಐಟಿ ನ ಆಯಾ ವಿಭಾಗದ ಹಿರಿಯ ಅಧಿಕಾರಿಗಳು ಹಾಜರಿದ್ದರು.

ತೀವ್ರ ನಿರೀಕ್ಷೆ ಮುಂದುವರಿದಿದ್ದು, ಬುಧವಾರ ನಡೆಯಲಿರುವ ಅಗೈಕೆ ಕಾರ್ಯದಿಂದ ಯಾವುದೇ ಆಧಾರ ಸಿಗಬಹುದೆಂದು ಅಧಿಕಾರಿಗಳು ನಂಬಿಕೆ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಧರ್ಮಸ್ಥಳದ ಇತಿಹಾಸದಲ್ಲೇ ಅತ್ಯಂತ ಚರ್ಚಿತ ಪ್ರಕರಣಗಳಲ್ಲಿ ಒಂದಾಗುತ್ತಿರುವ ಈ ಬೆಳವಣಿಗೆ ಕುರಿತು ರಾಜ್ಯದ ಜನತೆಯಲ್ಲಿ ಭಾರೀ ಕುತೂಹಲ ನಿರ್ಮಾಣವಾಗಿದೆ.

nazeer ahamad

Recent Posts

ಹಾಡಹಗಲೇ ಪಡಿತರ ಅಕ್ಕಿ ಸಾಗಾಟ: ಆಹಾರ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ..!

ಬಾಗಲಕೋಟೆ: ಬಡ ಹಾಗೂ ಅರ್ಹ ಫಲಾನುಭವಿಗಳಿಗೆ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು…

18 hours ago

₹5 ಸಾವಿರಕ್ಕೆ ರೂಮ್‌ಗೆ ಬಂದ ಯುವತಿ; ಬಿಯರ್‌ನಲ್ಲಿ ಅಮಲು ಬೆರೆಸಿ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶಾಕ್!

ಪ್ರವಾಸಕ್ಕೆಂದು ಹೋಗಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೋಟೆಲ್‌ನಲ್ಲಿ ಯುವತಿಯೊಬ್ಬಳ ಮೋಸದ ಜಾಲಕ್ಕೆ ಸಿಲುಕಿ ಹಣ ಹಾಗೂ ಚಿನ್ನ ಕಳೆದುಕೊಂಡಿರುವ ಘಟನೆ…

24 hours ago

₹20 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪ್ರವಾಸೋದ್ಯಮ ಇಲಾಖೆ ಅಧಿಕಾರಿ!

ಹಾವೇರಿ: ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ಕೆಲಸ ಮಾಡಿಕೊಡಲು ₹20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಅಧಿಕಾರಿಯೊಬ್ಬರು ಲೋಕಾಯುಕ್ತ…

24 hours ago

ವಿವಾಹಿತ ಮಹಿಳೆ ಜೊತೆ ಬಾಯ್‌ಫ್ರೆಂಡ್‌ ಪರಾರಿ? ಕಣ್ಣೀರಿಟ್ಟ ದೆಹಲಿ ಬ್ಲಾಗರ್; “ನನ್ನನ್ನು ಬಿಟ್ಟು ಆಕೆಯಲ್ಲೇನಿತ್ತು?”

ನವದೆಹಲಿ: ತನ್ನ ಪ್ರಿಯಕರ ಮತ್ತೊಬ್ಬ ಮಹಿಳೆಯೊಂದಿಗೆ ತೆರಳಿದ್ದಾನೆ ಎಂದು ಆರೋಪಿಸಿ ದೆಹಲಿ ಮೂಲದ ಖ್ಯಾತ ಬ್ಲಾಗರ್ ಶ್ವೇತಾ ದ್ವಿವೇದಿ ಸಾಮಾಜಿಕ…

24 hours ago

ನಕಲಿ ಮಾಲೀಕರನ್ನು ನಿಲ್ಲಿಸಿ ₹1.08 ಕೋಟಿ ಮೌಲ್ಯದ ಜಮೀನು ಮಾರಾಟ: ನಾಲ್ವರ ವಿರುದ್ಧ FIR

ಬಳ್ಳಾರಿ: ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಿಜವಾದ ಜಮೀನು ಮಾಲೀಕರ ಹೆಸರನ್ನು ದುರುಪಯೋಗಪಡಿಸಿಕೊಂಡು ಸುಮಾರು ₹1.08 ಕೋಟಿ ಮೌಲ್ಯದ ಜಮೀನನ್ನು ವಂಚನೆಯಿಂದ…

1 day ago

ರೇಣುಕಾಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿ ಪ್ರದೋಷ್ ಹೇಳಿಕೆ ಮುಂದುವರಿಕೆ; ವಿಚಾರಣೆಯಲ್ಲಿ ಸ್ಫೋಟಕ ಅಂಶಗಳ ಉಲ್ಲೇಖ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಇದೀಗ ಮಹತ್ವದ ಹಂತ ತಲುಪಿದೆ. ಪ್ರಕರಣದಲ್ಲಿ 14ನೇ ಆರೋಪಿಯಾಗಿದ್ದ ಪ್ರದೋಷ್ ರಾವ್ ಮಾಫಿ…

2 days ago