Latest

ಅಂಬೇಡ್ಕರ್, ವಾಲ್ಮೀಕಿ ಪ್ರತಿಮೆ ನಿರ್ಮಿಸುವ ವಿಚಾರದ ಎರಡು ಗುಂಪುಗಳ ನಡುವೆ ಸಂಘರ್ಷ. ವಿಚಾರವಾಗಿ 144 ಸೆಕ್ಷನ್ ಜಾರಿ

ಗೌರಿಬಿದನೂರು : ತಾಲ್ಲೂಕಿನ ಹಂಪಸಂದ್ರ ಗ್ರಾಮದಲ್ಲಿ, ಸಿದ್ದಗಂಗಮ್ಮ ಎಂಬುವವರು ವಾಲ್ಮೀಕಿ ಸಮುದಾಯಕ್ಕೆ ಸೇರಿದ ಶನಿಮಹಾತ್ಮ ದೇವಸ್ಥಾನಕ್ಕೆ ದಾನ ನೀಡಿದ್ದ ಖಾಲಿ ನಿವೇಶನದಲ್ಲಿ ಪರಿಶಿಷ್ಟ ಜಾತಿಯವರು ರಾತ್ರೋರಾತ್ರಿ ಅಂಬೇಡ್ಕರ್ ಪುತ್ತಳಿ ಪ್ರತಿಷ್ಟಾಪನೆ ಮಾಡಿದ್ದಾರೆ, ಎಂದು ವಾಲ್ಮೀಕಿ ಸಮುದಾಯದವರು
ಭಾನುವಾರ ಬೆಳಗ್ಗೆ ಇದೇ ಅಂಬೇಡ್ಕರ್ ಪುತ್ತಳಿ ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿಯ ಬಾವಚಿತ್ರವಿರುವ ನಾಮಫಲಕವನ್ನು ತಂದು ನಿಲ್ಲಿಸಿದ ಪರಿಣಾಮ, ಎರಡು ಗುಂಪುಗಳ ಮದ್ಯೆ ಘರ್ಷಣೆ ಉಂಟಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಅಂಬೇಡ್ಕರ್ ಪುತ್ತಳಿ ಅನಾವರಣ ಮಾಡಲು, ಮಹರ್ಷಿ ವಾಲ್ಮೀಕಿ ನಾಮಫಲಕ ಅಡ್ಡವಿರುವುದರಿಂದ ಅದನ್ನು ಅಂಬೇಡ್ಕರ್ ಪಕ್ಕದಲ್ಲಿ ನಿಲ್ಲಿಸಲು ಪರಿಶಿಷ್ಟ ಜಾತಿ ಮುಖಂಡರು ಮನವಿ ಮಾಡಿದರು, ಶನಿಮಹಾತ್ಮ ದೇವಸ್ಥಾನದ ಟ್ರಸ್ಟ್ ಗೆ ಧಾನವಾಗಿ ನೀಡಿರುವ ಜಾಗಗದಲ್ಲಿ ಅಂಬೇಡ್ಕರ್ ಪುತ್ತಳಿ ನಿರ್ಮಾಣ ಮಾಡಲಾಗಿದೆ, ಎಂದು ಪರಿಶಿಷ್ಟ ವರ್ಗದ ಜನಾಂಗದವರು ಪಟ್ಟು ಹಿಡಿದ ಪರಿಣಾಮ ಪರಿಸ್ಥಿತಿ ಉದ್ವಿಗ್ನ ಸ್ಥಿತಿಗೆ ತಲುಪಿದೆ, ಆಗ ತಹಶೀಲ್ದಾರ್ ಮಹೇಶ್ ಎಸ್ ಪತ್ರಿ ಮತ್ತು ಸಿಬ್ಬಂದಿ ಮಹರ್ಷಿ ವಾಲ್ಮೀಕಿ ನಾಮಫಲಕವನ್ನು, ಅಂಬೇಡ್ಕರ್ ಪುತ್ತಳಿಯ ಪಕ್ಕದಲ್ಲಿ ನಿಲ್ಲಿಸಿ, ಎರಡಕ್ಕೂ ಮಾಲಾರ್ಪಣೆ ಮಾಡಿದರು.

ವಾಲ್ಮೀಕಿ ಫಲಕ ಅಳವಡಿಕೆ

ಒಂದೆಡೆ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿದರೆ ಇನ್ನೊಂದೆಡೆ ವಾಲ್ಮೀಕಿ ಸಮುದಾಯದವರು ಅದೇ ಜಾಗದಲ್ಲಿ ಭಾನುವಾರ ಬೆಳಗ್ಗೆ ವಾಲ್ಮೀಕಿ ನಾಮಫಲಕ ಅನಾವರಣಗೊಳಿಸಿದ್ದಾರೆ. ಇದು ಜಟಾಪಟಿಗೆ ಕಾರಣವಾಗಿದೆ.
ಅಂಬೇಡ್ಕರ್ ಅವರ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಆದರೆ ಕ್ಷುಲ್ಲಕ ಕಾರಣಕ್ಕೆ ದೇವಾಲಯದ ಆವರಣದ ಜಾಗವನ್ನು ಒತ್ತುವರಿ ಮಾಡಿಕೊಂಡು ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿರುವುದು ಸರಿಯಲ್ಲ. ಗ್ರಾಮದಲ್ಲಿ ಅಶಾಂತಿ ಸೃಷ್ಠಿಸುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದೇ ವಿಚಾರಕ್ಕೆ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಕೊನೆಗೆ ಕಲ್ಲು ತೂರಾಟ ನಡೆಸುವ ಹಂತಕ್ಕೆ ತಲುಪಿದೆ. ಎರಡೂ ಗುಂಪಿನ ಮಹಿಳೆಯರೂ ಕೂಡ ಸಂಘರ್ಷದಲ್ಲಿ ಪಾಲ್ಗೊಂಡಿದ್ದಾರೆ. ಇದರಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಏರ್ಪಟ್ಟಿದೆ.

ವಿಷಯ ತಿಳಿಯುತ್ತಿದ್ದಂತೆಎಸ್ ಪಿ ಕುಶಾಲ್ ಚೌಕ್ಸೆ, ಡಿವೈಎಸ್ಪಿ, ಶಿವಕುಮಾರ್, ವೃತ ನಿರೀಕ್ಷಕ ಸತ್ಯನಾರಾಯಣ, ಸಶಸ್ತ್ರ ಮೀಸಲುಪಡೆಯೊಂದಿಗೆ ತೆರಳಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಎರಡೂ ಗುಂಪುಗಳ ಮುಖಂಡರ ಸಭೆ ಕರೆದು ಮಾತುಕತೆ ನಡೆಸಿದ್ದಾರೆ, ಮಾತುಕತೆ ವಿಫಲವಾಗಿದೆ, ನಾಳೆ ಎರಡು ಸಮುದಾಯಗಳ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಿ ಮುಂದಿನ ನಿರ್ಧಾರ ಕೈ ಗೊಳ್ಳುವುದಾಗಿ ಅಧಿಕಾರಿಗಳು ಮುಖಂಡರ ಮನವೊಲಿಸಿದ್ದಾರೆ.

ತಹಸೀಲ್ದಾರ್ ಭೇಟಿ

ತಹಸೀಲ್ದಾರ್ ಮಹೇಶ್ ಎಸ್.ಪತ್ರಿ ಸ್ಥಳಕ್ಕೆ ಭೇಟಿ ನೀಡಿ, ಜಾಗದ ದಾಖಲೆಗಳ ಪರಿಶೀಲನೆ ನಡೆಸಿದರು.
ರಾತ್ರಿ ಅಂಬೇಡ್ಕರ್ ಜಯಂತಿ ಆಚರಣೆಯ ಸಂದರ್ಭದಲ್ಲಿ ಡಿ.ಜೆ ಗೆ ಅನುಮತಿ ನೀಡಬೇಕೆಂದು ಯುವಕರು ಒತ್ತಾಯಿಸಿದ್ದಾರೆ. ಆದರೆ ಯಾವುದೇ ರೀತಿ ಅನುಮತಿ ನೀಡುವುದಿಲ್ಲ. ಸಿದ್ದಗಂಗಮ್ಮಗೆ ಗ್ರಾಮ ಪಂಚಾಯಿತಿಯಿಂದ ಜಾಗ ಮಂಜೂರಾಗಿದೆ. ಈಗಾಗಲೆ ಆಕೆಗೆ ವಸತಿಯಿರುವ ಕಾರಣಕ್ಕೆ ಆ ಜಾಗವನ್ನು ಶನಿಮಹಾತ್ಮ ದೇವಾಲಯಕ್ಕೆ ಬಿಟ್ಟಕೊಟ್ಟಿದ್ದಾರೆ. ಈ ಬಗ್ಗೆ ಸೂಕ್ತವಾಗಿ ಪರಿಶೀಲಿಸಿ ಮುಂದಿನ ಕ್ರಮ ಕೈ ಗೊಳ್ಳಲಾಗುವುದು. ಎರಡೂ ಸಮುದಾಯಗಳು ಗ್ರಾಮದಲ್ಲಿ ಶಾಂತಿ ಕಾಪಾಡಬೇಕು. ಅಂಬೇಡ್ಕರ್ ಅವರ ಆಶಯಗಳನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು ಎಂದರು.
ಮೀಸಲು ಪಡೆ ನಿಯೋಜನೆ
ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ಮನೆ ಮಾಡಿರುವ ಕಾರಣ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾವುದೇ ಕಾರಣಕ್ಕೂ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಸ್ಥಳದಲ್ಲಿ ಕೆ ಎಸ್ ಆರ್ ಪಿ ತುಕಡಿ ಸೇರಿದಂತೆ, 150 ಕ್ಕೂ ಹೆಚ್ಚು ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದು, 144 ಸೆಕ್ಷನ್ ಜಾರಿಗೊಳಿಸಿದ್ದಾರೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡoತಿದೆ.

                                                                                                 ***
ಗ್ರಾಮದಲ್ಲಿ 3 ಎಕರೆ ಗುಂಡು ತೋಪಿನಲ್ಲಿ ಈ ಹಿಂದೆ ಗ್ರಾಮ ಪಂಚಾಯತಿಯಲ್ಲಿ 33 ಮನೆಗಳನ್ನು ನಿರ್ಮಿಸಿಕೊಳ್ಳಲು ಹಕ್ಕು ಪತ್ರಗಳನ್ನು ನೀಡಲಾಗಿತ್ತು. ಆ ಪೈಕಿ ಐದು ನಿವೇಶನಗಳಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳದೆ ಖಾಲಿ ಬಿಡಲಾಗಿತ್ತು. ಅದರಲ್ಲಿ ನಿವೇಶನದ ಹಕ್ಕು ಪತ್ರ ಪಡೆದಿದ್ದ ಸಿದ್ದಗಂಗಮ್ಮ ಎಂಬುವವರು ಗ್ರಾಮದಲ್ಲಿ ಶನಿಮಹಾತ್ಮ ಸ್ವಾಮಿ ದೇವಾಲಯದ ಟ್ರಸ್ಟ್ ಗೆ ದೇವಾಲಯ ನಿರ್ಮಾಣ ಮಾಡಲು ತಮಗೆ ಮಂಜೂರಾಗಿದ್ದ ನಿವೇಶನದ ಜಾಗವನ್ನು ದಾನವಾಗಿ ಉಯಿಲು ಬರೆದು ಕೊಟ್ಟಿದ್ದಾರೆ. ಈ ಖಾಲಿ ನಿವೇಶನದಲ್ಲಿ ಶನಿವಾರ ರಾತ್ರಿ ಇದ್ದಕ್ಕಿದ್ದಂತೆ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿರುವುದು ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಗಿದೆ.
ತಹಶೀಲ್ದಾರ್ ಮಹೇಶ್ ಎಸ್ ಪತ್ರಿ.

ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಕಾರಣ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ. ಒಂದು ಕೆ ಎಸ್ ಆರ್ ಪಿ ತುಕಡಿ, 150 ಪೊಲೀಸ್ ಸಿಬ್ಬಂದಿ,
ಡಿ ವೈ ಎಸ್ ಪಿ, ವೃತ್ತ ನಿರೀಕ್ಷಕ, 3 ಪಿ ಎಸ್ ಐ ಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಎಸ್ ಪಿ ಕುಶಾಲ್ ಚೌಕ್ಸೆ ಎಚ್ಚರಿಕೆ ನೀಡಿದ್ದಾರೆ. ವರದಿ: ಅವಿನಾಶ್ 

nazeer ahamad

Recent Posts

ಮೊರಾರ್ಜಿ ವಸತಿ ಶಾಲೆಯ ಬಾಲಕಿ ಗರ್ಭಿಣಿ! ವರ್ಷಪೂರ್ತಿ ಅತ್ಯಾಚಾರ: ಕಾಮುಕನ ವಿರುದ್ಧ ಪೋಕ್ಸೋ ಕೇಸ್

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನಕಲುಕುವ ಘಟನೆ ಬೆಳಕಿಗೆ ಬಂದಿದ್ದು, ಮೊರಾರ್ಜಿ ವಸತಿ ಶಾಲೆಯಲ್ಲಿ…

3 hours ago

ಮನೆ ಮಾಲೀಕರಿಗೇ ಶಾಕ್ ಕೊಟ್ಟ ಬಾಡಿಗೆದಾರರು! ಮನೆ ಖಾಲಿ ಇದ್ದ ವೇಳೆ 45 ಗ್ರಾಂ ಚಿನ್ನ ದೋಚಿದ ದಂಪತಿ ಅರೆಸ್ಟ್

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಮದಲ್ಲಿ ನಿವೃತ್ತ ಶಿಕ್ಷಕರ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಬೈಲುಕೊಪ್ಪ ಪೊಲೀಸರು ಭೇದಿಸಿದ್ದು,…

3 hours ago

ಅಸ್ಸಾಂಗೆ ಮಾಹಿತಿ ನೀಡದೆ ತೆರಳಿದ ಪ್ರಕರಣ: ಹುಳಿಯಾರು ಠಾಣೆಯ ಮೂವರು ಪೊಲೀಸ್ ಸಿಬ್ಬಂದಿ ಅಮಾನತು

ತುಮಕೂರು ಜಿಲ್ಲೆಯ ಹುಳಿಯಾರು ಪೊಲೀಸ್ ಠಾಣೆಯ ಪಿಎಸ್ಐ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯ ಲೋಪದ ಆರೋಪದಡಿ ಅಮಾನತುಗೊಳಿಸಲಾಗಿದೆ. ವಂಚನೆ…

13 hours ago

ರಾಜಾಜಿನಗರದಲ್ಲಿ ಭೀಕರ ಅವಘಡ: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರದ ಕೊಂಬೆ, ಸವಾರ ಕೋಮಾದಲ್ಲಿ

ಬೆಂಗಳೂರು ನಗರದಲ್ಲಿ ರಸ್ತೆ ಬದಿಯ ಅಪಾಯಕಾರಿ ಮರಗಳ ನಿರ್ವಹಣೆಯ ಕೊರತೆಯಿಂದ ಮತ್ತೊಂದು ಗಂಭೀರ ಅವಘಡ ಸಂಭವಿಸಿದೆ. ರಾಜಾಜಿನಗರದ ರಾಮಮಂದಿರ ರಸ್ತೆಯಲ್ಲಿ…

13 hours ago

ವೈರಲ್ ವಿಡಿಯೋ ಕುರಿತು ಸ್ಪಷ್ಟನೆ: ಮಗುವಿಗೆ ಹೊಡೆದ ಮಹಿಳೆ ಅಂಗನವಾಡಿ ಕಾರ್ಯಕರ್ತೆ ಅಲ್ಲ, ಮಗುವಿನ ತಾಯಿಯೇ ಎಂಬ ಮಾಹಿತಿ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪುಟ್ಟ ಮಗುವಿಗೆ ಮಹಿಳೆಯೊಬ್ಬರು ಕಾಲಿನಿಂದ ಒದ್ದಿರುವ ವಿಡಿಯೋ ವೈರಲ್ ಆಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ವಿಡಿಯೋವನ್ನು…

13 hours ago

ವೃದ್ಧ ದೂರುದಾರನ ಎದುರು ಮೇಜಿನ ಮೇಲೆ ಕಾಲು: ಮಹಿಳಾ ಕಾನ್‌ಸ್ಟೇಬಲ್ ಅಮಾನತು, ವೈರಲ್ ಫೋಟೋಗೆ ಇಲಾಖೆ ಕಂಗಾಲು

ರಾಜಸ್ಥಾನದ ಡುಂಗರಪುರ ಜಿಲ್ಲೆಯ ಬಿಚ್ಚಿವಾಡ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವೃದ್ಧ ದೂರುದಾರನ…

13 hours ago