ಯಾದಗಿರಿ: ಅಂಗನವಾಡಿ ಸಹಾಯಕಿಯ ಗೈರುಹಾಜರಿಯನ್ನು ಸಕ್ರಮಗೊಳಿಸಲು ಲಂಚ ಬೇಡಿದ ಪ್ರಕರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾ ಅಧಿಕಾರಿ (ಸಿಡಿಪಿಓ) ವನಜಾಕ್ಷಿ ಅವರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಏಕೆ ಲಂಚದ ಬೇಡಿಕೆ?
ನಗರದ ಯಾದಗಿರಿ ಬಸ್ ನಿಲ್ದಾಣದ ಬಳಿ ನಡೆದ ಈ ದಾಳಿಯಲ್ಲಿ, ವನಜಾಕ್ಷಿ ಅವರು 80,000 ರೂಪಾಯಿ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಮೂಲಗಳ ಪ್ರಕಾರ, ಗೈರು ಹಾಜರಿಯನ್ನು ಕಾನೂನುಬದ್ದವಾಗಿ ಪರಿಗಣಿಸಿ, ಅದರಿಂದ ವೇತನ ಬಿಡುಗಡೆ ಮಾಡಲು ಅವರು ಒಂದು ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು.
ಲೋಕಾಯುಕ್ತರ ದಾಳಿ
ಯಾದಗಿರಿ ಲೋಕಾಯುಕ್ತ ಡಿವೈಎಸ್ಪಿ ಜೆ.ಹೆಚ್. ಇನಾಮದಾರ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪಿಐ ಸಿದ್ದರಾಯ, ಸಂಗಮೇಶ ಹಾಗೂ ಇತರ ಲೋಕಾಯುಕ್ತ ಅಧಿಕಾರಿಗಳು ಭಾಗವಹಿಸಿದ್ದರು. ಪ್ರಮುಖ ದಾಖಲೆಗಳ ಜಪ್ತಿ ಬಳಿಕ ಆರೋಪಿಯ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಲಂಚ ಪ್ರಕರಣಗಳು ಮತ್ತಷ್ಟು ಬೆಳಕು ನೋಡುತ್ತಿವೆಯೇ?
ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರ ಹೊರಬಿದ್ದ ಘಟನೆಗಳಲ್ಲಿ ಇದು ಮತ್ತೊಂದು ಪ್ರಕರಣ. ಅಧಿಕಾರಿಗಳು ತಮ್ಮ ಹುದ್ದೆಯ ದುರ್ಬಳಕೆ ಮಾಡಿಕೊಂಡು ಸಾರ್ವಜನಿಕ ಸೇವೆಯನ್ನು ಲಂಚದ ಆಧಾರದ ಮೇಲೆ ನಿರ್ವಹಿಸುತ್ತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…
ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…
ಬೆಂಗಳೂರು: ಜಿಬಿಎ ನೋಟಿಸ್ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…
ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…
ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…