Crime

ತಲೆಯ ಸೂಪ್ ಕುಡಿದ ನರಭಕ್ಷಕನಿಗೆ ಜೀವಾವಧಿ ಶಿಕ್ಷೆ: ಮಾನವ ಮಾಂಸದ ರಹಸ್ಯ ಬಯಲಾಗಿದೆಯಾ?

ಲಕ್ನೋ: ದೇಶದ ಇತಿಹಾಸದಲ್ಲಿಯೇ ಅತಿಭಯಾನಕ ಮತ್ತು ವಿಕೃತ ಮನಸ್ಥಿತಿಯ ಸರಣಿ ಕೊಲೆಗಾರನೊಬ್ಬನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದು, ಈ ಪ್ರಕರಣ ಮತ್ತೊಂದು ನೈಜ ಜೀವಂತ ರಕ್ತಚಂಡ ಕಥೆಯಂತೆ ಓದುಗರನು ಅಲುಗಿಸಿದೆ.

ನರಭಕ್ಷಕ ಎಂಬ ಕರಾಳ ಹೆಸರು ಪಡೆದ ರಾಮ್ ನಿರಂಜನ್ ಅಲಿಯಾಸ್ ರಾಜಾ ಕೊಲಂದರ್ ಮತ್ತು ಆತನ ಸಹಚರ ವಾಚ್ ರಾಜ್ ಎಂಬವರಿಗೆ ಲಕ್ನೋ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ಘೋಷಿಸಿದೆ.

ರಾಜಾ ಕೊಲಂದರ್ 14 ಜನರನ್ನು ನಿಷ್ಠುರವಾಗಿ ಕೊಂದು, ಅವರ ದೇಹ ಭಾಗಗಳನ್ನು ಕಡಿಯುತ್ತಿದ್ದ, ತಲೆಯನ್ನು ಕತ್ತರಿಸಿ ಅದರಿಂದ ಸೂಪ್ ತಯಾರಿಸಿ ಕುಡಿಯುತ್ತಿದ್ದನು ಎಂಬ ಮಾಹಿತಿ ನ್ಯಾಯಾಲಯದ ಮುಂದಿಟ್ಟಾಗ ಅದು ಭಯಾನಕ ಸತ್ಯವಾಗಿ ಹೊರಬಂದಿತು. ತನಗೆ ಮಾನವರ ತಲೆಯ ಸೂಪ್ ಕುಡಿದರೆ ಮೆದುಳಿನ ಕಾರ್ಯಕ್ಷಮತೆ ಹೆಚ್ಚಾಗುತ್ತದೆ ಎಂಬ ವಿಕೃತ ನಂಬಿಕೆಯಲ್ಲಿ ಈತ ಈ ಕೃತ್ಯಗಳನ್ನು ಎಸಗುತ್ತಿದ್ದನೆಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ.

ನ್ಯಾಯಮೂರ್ತಿಗಳು ತೀರ್ಪು ಪ್ರಕಟಿಸುತ್ತಿದ್ದಾಗ ಕೂಡಾ, ರಾಜಾ ಕೊಲಂದರ್ ಯಾವುದೇ ಪಶ್ಚಾತಾಪವಿಲ್ಲದೆ, ನಿರ್ಲಕ್ಷ್ಯಭಾವದಿಂದ ಮಂದಹಾಸ ಬೀರುತ್ತಿದ್ದನೆಂಬುದು ಸಂತ್ರಸ್ತ ಕುಟುಂಬಗಳಿಗೆ ಇನ್ನಷ್ಟು ನೋವು ತಂದಿದೆ.

ಅತಿಕೃೂರ ಹಾಗೂ ಮಾನವೀಯತೆಯ ಎಲ್ಲ ಮಿತಿ ದಾಟಿದ ಈ ಕೊಲೆ ಪ್ರಕರಣದಲ್ಲಿ ರಾಜಾ ಕೊಲಂದರ್‌ಗಿಂತಲೂ ದೊಡ್ಡ ಪಾತ್ರ ವಾಚ್ ರಾಜ್ ಎಂಬಾತನದ್ದು ಎಂದು ಪ್ರಾಸಿಕ್ಯೂಷನ್ ವಾದಿಸಿದೆ. ಈತನ ಸಹಾಯದಿಂದಲೇ ರಾಜಾ ಹಲವು ಜನರನ್ನು ಅಪಹರಿಸಿ, ಕೊಂದು, ಅವರ ದೇಹವನ್ನು ಭಕ್ಷಿಸುತ್ತಿದ್ದ

nazeer ahamad

Recent Posts

ಸಿದ್ದರಾಮಯ್ಯ ನಮ್ಮ ನಾಯಕ, 2028ಕ್ಕೆ ಡಿಕೆಶಿ ಸಿಎಂ ಆಗಲಿ: ಸತೀಶ್ ಜಾರಕಿಹೊಳಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…

14 hours ago

ಅಟ್ಟಿಕಾ ಗೋಲ್ಡ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ: 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಶೋಧ; ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ, ₹7.52 ಲಕ್ಷ ನಗದು ಜಪ್ತಿ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…

1 day ago

ಇಬ್ಬರು ಮಕ್ಕಳ ತಾಯಿಗೆ ವಂಚನೆ ಆರೋಪ: ಖಾಸಗಿ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್; ₹9 ಲಕ್ಷ ಪಡೆದ ಟ್ಯಾಟೂ ಆರ್ಟಿಸ್ಟ್ ಅರ್ಜುನ್? ಎಂದು ಮಹಿಳೆ ಆರೋಪ.

ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…

1 day ago

ಖಾಲಿ ಸೈಟ್ ಸ್ವಚ್ಛಗೊಳಿಸಲು ಹೋದಾಗ ಬಯಲಾಯ್ತು ಕೊಲೆ ರಹಸ್ಯ: ಪತ್ನಿಯನ್ನು ಕೊಂದು ಶವ ಎಸೆದಿದ್ದ ಪತಿ ಬಂಧನ

ಬೆಂಗಳೂರು: ಜಿಬಿಎ ನೋಟಿಸ್‌ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…

1 day ago

₹30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…

2 days ago

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

2 days ago