ಮೈಸೂರು ನಗರದಲ್ಲಿ ಇತ್ತೀಚೆಗೆ ಮಾದಕ ವಸ್ತುಗಳ ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮೈಸೂರು ನಗರದ ಸಿ.ಸಿ.ಬಿ.ಘಟಕದ ಹೆಚ್ & ಬಿ ವಿಭಾಗದ ಪೊಲೀಸರು ಮತ್ತು ಸೆನ್ ಕ್ರೆöÊಂ ಪೊಲೀಸರು ದಿನಾಂಕ ೧೫/೧೦/೨೦೨೨ ರಂದು ಜಂಟಿಯಾಗಿ ಮೈಸೂರು ನಗರದ ಬೋಗಾದಿ, ಎಸ್.ಬಿ.ಎಂ ಬಡಾವಣೆ, “ಎ” ಬ್ಲಾಕ್ ಹರಿ ವಿದ್ಯಾಲಯ ಶಾಲೆ ಬಳಿ ಇರುವ ಮನೆಯೊಂದರೆ ಮೇಲೆ ದಾಳಿ ಮಾಡಿ, ೩ ಜನ ಆರೋಪಿಗಳನ್ನು ವಶಕ್ಕೆ ಪಡೆದು ಒಟ್ಟು ಸುಮಾರು ೧,೨೦,೦೦೦/-ರೂ ಮೌಲ್ಯ ಬೆಲೆ ಬಾಳುವ ೨೪ ಗ್ರಾಂ ತೂಕದ ಮಾದಕ ವಸ್ತು ಎಂ.ಡಿ.ಎಂ.ಎ., ತೂಕ ಮಾಡುವ ಎಲೆಕ್ಟ್ರಾನಿಕ್ ಯಂತ್ರ, ೨ ದ್ವಿಚಕ್ರವಾಹನ, ೨ ಲ್ಯಾಪ್‌ಟಾಪ್ ಹಾಗೂ ೫ ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಂಡಿರುತ್ತಾರೆ. ಈ ಸಂಬಂಧ ಸೆನ್ ಕ್ರೆöÊಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಆರೋಪಿತರು ಮೈಸೂರಿನ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ಬೆಂಗಳೂರಿನಲ್ಲಿ ವಾಸವಿರುವ ಕೇರಳ ಮೂಲದ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಮಾದಕವಸ್ತು ಎಂ.ಡಿ.ಎಂ.ಎ.ಅನ್ನು ಖರೀದಿಸಿ ತಂದು ಮೈಸೂರು ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರೆಂದು ವಿಚಾರಣೆಯಿಂದ ತಿಳಿದು ಬಂದಿರುತ್ತದೆ.
ಈ ದಾಳಿ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ., ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ ವಿಭಾಗರವರಾದ ಶ್ರೀಮತಿ ಗೀತ. ಎಂ.ಎಸ್., ಐ.ಪಿ.ಎಸ್.ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಎ.ಸಿ.ಪಿ.ರವರಾದ ಶ್ರೀ ಸಿ.ಕೆ.ಅಶ್ವತ್ಥನಾರಾಯಣರವರ ನೇತೃತ್ವದಲ್ಲಿ ಸಿ.ಸಿ.ಬಿ. ಘಟಕದ ಹೆಚ್&ಬಿ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್‌ರವರಾದ ಶ್ರೀ ಜಿ.ಶೇಖರ್, ಸೆನ್ ಕ್ರೆöÊ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್‌ರವರಾದ ಶ್ರೀ ಜಯಕುಮಾರ್ ಸಿಬ್ಬಂದಿಗಳಾದ ಸಲೀಂಖಾನ್, ಲಕ್ಷ್ಮೀಕಾಂತ.ಪಿಎನ್, ಪ್ರಕಾಶ್.ಟಿ ಹಾಗೂ ಸೆನ್ ಕ್ರೆöÊ ಪೊಲೀಸ್ ಠಾಣೆಯ ಸಿಬ್ಬಂದಿರವರುಗಳು ನಡೆಸಿರುತ್ತಾರೆ.
ಈ ದಾಳಿ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ: ಚಂದ್ರಗುಪ್ತ, ಐ.ಪಿ.ಎಸ್. ರವರು ಪ್ರಶಂಸಿಸಿರುತ್ತಾರೆ.
ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…
ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…
ಮಂಡ್ಯ: ಮದ್ದೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಹಾಸ್ಟೆಲ್ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್…
ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೊರವಲಯದಲ್ಲಿ ಒಂದೂವರೆ ವರ್ಷದ ಕಂದಮ್ಮನ ಎದುರೇ 26 ವರ್ಷದ ಗೃಹಿಣಿ ಸ್ನೇಹಾ ಎಂಬಾಕೆಯ ಬರ್ಬರ…
ಬಿಹಾರದ ನವಾಡಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮುಖ್ಯಶಿಕ್ಷಕನೊಬ್ಬ 8ನೇ ತರಗತಿಯ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ…
ಕಲಬುರಗಿ: ನಿಗದಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ರಾಜೇಶ್ವರಿ ಅವರ…