ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನಲ್ಲಿ ಇಂದು ಬೆಳಗ್ಗೆ ಭೀಕರ ಅಪಘಾತವೊಂದು ಸಂಭವಿಸಿದ್ದು, ಬೈಕ್ ಸವಾರನು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕುಸುಗಲ್ ಗ್ರಾಮದ ಹತ್ತಿರದ ಹಳ್ಳದ ಬಳಿ ಈ ದಾರುಣ ಘಟನೆ ನಡೆದಿದೆ.
ಅಳಗವಾಡಿ ಗ್ರಾಮದ ಯುವಕನೊಬ್ಬ, ಬ್ಯಾಹಟ್ಟಿ ಗ್ರಾಮದಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಸರ್ಕಾರಿ ಬಸ್ ಅನ್ನು ಓವರ್ ಟೆಕ್ ಮಾಡುವ ವೇಳೆ ನಿಯಂತ್ರಣ ತಪ್ಪಿದ್ದಾನೆ. ಈ ಸಂದರ್ಭ ಬೈಕ್ ಸ್ಕಿಡ್ ಆಗಿ ಬಸ್‌ನ ಹಿಂದಿನ ಚಕ್ರ ಸವಾರನ ತಲೆಯ ಮೇಲೆ ಹರಿದಿದೆ. ಪರಿಣಾಮವಾಗಿ ಆತ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.
ಘಟನೆ ಸ್ಥಳಕ್ಕೆ ತಕ್ಷಣವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ವ್ಯಕ್ತಿಯ ಗುರುತು ಹಾಗೂ ಮೂಲ ಸ್ಥಳ ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ವರದಿ: ಶಿವು ಪಿ.ಆರ್.
ಬೆಂಗಳೂರು, ಜುಲೈ 30: ಹಿರಿಯ ನಟ ಹಾಗೂ ನಿರ್ದೇಶಕ ಎಸ್. ನಾರಾಯಣ ಅವರು ತಮ್ಮ ಹೆಸರಿನಲ್ಲಿ ನಕಲಿ ಸಾಮಾಜಿಕ ಜಾಲತಾಣ…
ತ್ರಿಶೂರ್, ಜುಲೈ 30: ಗರ್ಭಿಣಿ ಮಹಿಳೆ ಮನೆಯ ಟೆರೇಸ್‌ನಲ್ಲಿ ನೇಣು ಬಿಗಿದು ಮೃತಪಟ್ಟಿರುವ ಪ್ರಕರಣವೊಂದು ಗಂಭೀರ ತಿರುವು ಪಡೆದಿದ್ದು, ಪತಿ…
ಬೆಂಗಳೂರು: ದೇವದುರ್ಗದ ಶಾಸಕಿ ಕರೆಮ್ಮ ನಾಯಕ್ ಟೋಲ್ ಗೇಟ್ ಸಮಸ್ಯೆ ಕುರಿತು ತಮ್ಮ ಅಸಮಾಧಾನವನ್ನು ಬಿಚ್ಚಿಡುತ್ತಲೇ ಭಾವುಕರಾದರು. ವಿಧಾನಸೌಧದ ಸಭಾಂಗಣದಲ್ಲಿ…
ಬೆಂಗಳೂರು: ನಟಿ ರಮ್ಯಾ ಅವರನ್ನು ಉದ್ದೇಶಿಸಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ ಪ್ರಕರಣದಲ್ಲಿ ತೀವ್ರ ತಿರುವು ಕಂಡಿದೆ. ದರ್ಶನ್ ಅಭಿಮಾನಿಗಳಾದ ಸಾಮಾಜಿಕ…
ಧರ್ಮಸ್ಥಳ: ಪ್ರಖ್ಯಾತ ಧಾರ್ಮಿಕ ಕೇಂದ್ರವಾದ ಧರ್ಮಸ್ಥಳದಲ್ಲಿ ಶವ ಹೂತು ಪ್ರಕರಣ ಸಂಬಂಧ ಸತತ ನಾಲ್ಕನೇ ದಿನವೂ ಶೋಧ ಕಾರ್ಯ ತೀವ್ರವಾಗಿಯೇ…
ಆಂಧ್ರಪ್ರದೇಶದ ಅಂಬೇಡ್ಕರ್ ಕೊನಸೀಮಾ ಜಿಲ್ಲೆಯ ಮಾಚವರಂ ಗ್ರಾಮದಲ್ಲಿ ಮಾನವೀಯತೆಯನ್ನು ತಲೆಕುರುಳಾಗಿಸುವ ಪೈಶಾಚಿಕ ಕೃತ್ಯವೊಂದು ಬೆಳಕಿಗೆ ಬಂದಿದೆ. ಖಾಸಗಿ ಶಾಲೆಯ ಪ್ರಾಂಶುಪಾಲನು…