ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿಯಲ್ಲಿ ಇಂದು ಬೆಳಿಗ್ಗೆ ದಾರುಣ ಘಟನೆ ನಡೆದಿದೆ. ಕಳೆದ ವರ್ಷ ಹತ್ಯೆಯಾಗಿದ್ದ ಶಿಕ್ಷಕಿ ದೀಪಿಕಾ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಆಕೆಯ ತಂದೆ ವೆಂಕಟೇಶ್ ಇಂದು ಪ್ರತೀಕಾರದ ರೂಪದಲ್ಲಿ ಆರೋಪಿ ನಿತೀಶ್‌ನ ತಂದೆ ನರಸಿಂಹೇಗೌಡನನ್ನು ಹತ್ಯೆ ಮಾಡಿರುವ ಘಟನೆ ಅಕ್ಕಪಕ್ಕದ ಜನರಲ್ಲಿ ಆತಂಕ ಸೃಷ್ಟಿಸಿದೆ.
ಮಾಹಿತಿಯ ಪ್ರಕಾರ, ಒಂದು ವರ್ಷದ ಹಿಂದೆ ಟೀಚರ್ ದೀಪಿಕಾಳನ್ನು ಸ್ಥಳೀಯ ಯುವಕ ನಿತೀಶ್ ಹತ್ಯೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿತೀಶ್ ಕಾರಾಗೃಹಕ್ಕೆ ಹೋಗಿದ್ದರೂ, ಬಳಿಕ ಜಾಮೀನಿನಲ್ಲಿ ಹೊರಬಂದಿದ್ದನು. ಈ ವೇಳೆ ದೀಪಿಕಾಳ ತಂದೆ ವೆಂಕಟೇಶ್ ತಮ್ಮ ಮಗಳ ಹತ್ಯೆಗೆ ನ್ಯಾಯ ದೊರೆಯದೆ ಹೋಗಿರುವ ದುಗುಡದಲ್ಲಿದ್ದು, ಮನಸ್ಸಿನಲ್ಲಿ ಪ್ರತೀಕಾರವನ್ನು ಹೊತ್ತಿದ್ದರು.
ಇಂದು ಬೆಳಿಗ್ಗೆ ಸುಮಾರು 8.30ರ ಸುಮಾರಿಗೆ ನರಸಿಂಹೇಗೌಡ ಮಾಣಿಕ್ಯನಹಳ್ಳಿಯ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ವೆಂಕಟೇಶ್ ಅವರನ್ನು ಹಿಡಿದು ಹೊಟ್ಟೆ ಭಾಗಕ್ಕೆ ಚಾಕು ಇರಿದಿದ್ದಾರೆ. ತೀವ್ರ ಗಾಯಗಳಿಂದ ನರಸಿಂಹೇಗೌಡ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಹತ್ಯೆಯ ನಂತರ ವೆಂಕಟೇಶ್ ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಕುರಿತು ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಹತ್ಯೆ ಪ್ರಕರಣ ಪಾಂಡವಪುರ ತಾಲೂಕಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸ್ಥಳೀಯರ ಮಾತುಗಳ ಪ್ರಕಾರ, ಎರಡು ಕುಟುಂಬಗಳ ನಡುವೆ ಭೀಕರ ವೈಷಮ್ಯವಿದ್ದು, ಇದು ಇನ್ನಷ್ಟು ದುರ್ಘಟನೆಯೂ ಸಂಭವಿಸಬಹುದೆಂಬ ಆತಂಕವನ್ನು ಹುಟ್ಟಿಸಿದೆ.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…
ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…
ಬೆಂಗಳೂರು: ಜಿಬಿಎ ನೋಟಿಸ್ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…
ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…
ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…