ತುಮಕೂರು ಜಿಲ್ಲೆಯ ಶಿರಾ ಸಮೀಪ ನಡೆದ ಭೀಕರ ಕೊಲೆ ಪ್ರಕರಣವೊಂದು ಜನರನ್ನು ಬೆಚ್ಚಿಬೀಳಿಸಿದೆ. ಹಣದಾಸೆಗೆ ಮನುಷ್ಯ ಎಷ್ಟರ ಮಟ್ಟಿಗೆ ಕ್ರೂರನಾಗಬಹುದು ಎಂಬುದಕ್ಕೆ ಈ ಘಟನೆ ಜೀವಂತ ಉದಾಹರಣೆಯಾಗಿದೆ. ಎಲ್‌ಐಸಿ ವಿಮೆಯ ಹಣ ಪಡೆಯುವ ಉದ್ದೇಶದಿಂದ ಸ್ವಂತ ತಮ್ಮನನ್ನೇ ಅಮಾನುಷವಾಗಿ ಹತ್ಯೆಗೈದು, ಅದನ್ನು ರಸ್ತೆ ಅಪಘಾತದಂತೆ ಬಿಂಬಿಸಲು ಯತ್ನಿಸಿದ್ದ ಅಣ್ಣ ಹಾಗೂ ಆತನ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಮಡಕಶಿರಾ ತಾಲೂಕಿನ ನಿದ್ರಗಟ್ಟ ಗ್ರಾಮದ ನಿವಾಸಿ ರಮೇಶ್ (35) ಕೊಲೆಯಾದ ವ್ಯಕ್ತಿ. ಈತನ ಅಣ್ಣ ಹನುಮಂತರಾಜು @ ರಾಜು ತನ್ನ ತಮ್ಮನ ಹೆಸರಿನಲ್ಲಿ ₹15 ಲಕ್ಷ ಮೌಲ್ಯದ ಎಲ್‌ಐಸಿ ಪಾಲಿಸಿ ಮಾಡಿಸಿದ್ದ. ಅಪಘಾತದಲ್ಲಿ ಸಾವು ಸಂಭವಿಸಿದರೆ ಹೆಚ್ಚುವರಿ ವಿಮೆ ಹಣ ಸಿಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಹಲವು ವರ್ಷಗಳಿಂದಲೇ ಕೊಲೆ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಧಿ ಪೂಜೆ ನೆಪದಲ್ಲಿ ಕರೆಸಿಕೊಂಡ ಆರೋಪಿಗಳು
ರಮೇಶ್ ತಂತ್ರ-ಮಂತ್ರ ಹಾಗೂ ಬ್ಲಾಕ್ ಮ್ಯಾಜಿಕ್‌ನಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಇದೇ ವಿಚಾರವನ್ನು ದುರುಪಯೋಗಪಡಿಸಿಕೊಂಡ ಹನುಮಂತರಾಜು, “ಶಿರಾ ಬಳಿ ನಿಧಿ ಪೂಜೆ ಇದೆ” ಎಂದು ನಂಬಿಸಿ ಜೂನ್ 19ರಂದು ರಮೇಶನನ್ನು ಕರೆಸಿಕೊಂಡಿದ್ದಾನೆ.
ಅಮಾನುಷವಾಗಿ ಹತ್ಯೆ
ಶಿರಾ-ಅಮರಾಪುರ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದ ಬಳಿಕ ಆರೋಪಿಗಳು ಮೊದಲು ರಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಕಾರನ್ನು ಹಲವು ಬಾರಿ ದೇಹದ ಮೇಲೆ ಹತ್ತಿಸಿ ಕ್ರೌರ್ಯ ಮೆರೆದಿದ್ದಾರೆ. ಆದರೂ ರಮೇಶ್ ಬದುಕಿದ್ದನ್ನು ಕಂಡು ಕೊನೆಗೆ ಬ್ಯಾಟರಿ ಜಂಪ್ ವೈರ್ ಬಳಸಿ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಅಪಘಾತದ ನಾಟಕ
ಕೊಲೆ ನಂತರ ಪ್ರಕರಣವನ್ನು ಮರೆಮಾಚಲು ಆರೋಪಿಗಳು ರಮೇಶ್‌ನ ಬೈಕ್‌ನ್ನು ರಸ್ತೆ ಬದಿಯಲ್ಲಿ ಬಿಟ್ಟು, ಮೃತದೇಹವನ್ನು ಅದರ ಪಕ್ಕದಲ್ಲೇ ಎಸೆದು ರಸ್ತೆ ಅಪಘಾತದಂತೆ ತೋರಿಸಲು ಯತ್ನಿಸಿದ್ದರು. ಆದರೆ ಘಟನೆ ಸ್ಥಳ ಪರಿಶೀಲಿಸಿದ ಪೊಲೀಸರಿಗೆ ಅನುಮಾನ ಮೂಡಿದ್ದು, ಸವಿಸ್ತಾರ ತನಿಖೆ ಆರಂಭಿಸಿದರು.
12 ಗಂಟೆಯಲ್ಲೇ ಕೇಸ್ ಭೇದಿಸಿದ ಪೊಲೀಸರು
ಶಿರಾ ಡಿವೈಎಸ್ಪಿ ಜಿ.ಶೇಖರ್ ಮಾರ್ಗದರ್ಶನದಲ್ಲಿ ಪಟ್ಟನಾಯಕನಹಳ್ಳಿ ಪೊಲೀಸರು ತನಿಖೆ ನಡೆಸಿ, ಕೇವಲ 12 ಗಂಟೆಯೊಳಗೆ ಇಡೀ ಕೊಲೆ ಸಂಚನ್ನು ಬಯಲಿಗೆಳೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹನುಮಂತರಾಜು, ಲಕ್ಷ್ಮೀಕಾಂತ, ನವೀನ್ ಕುಮಾರ್ ಹಾಗೂ ಎಂಡಿ ಜಿಲಾನ್ ಸೇರಿ ನಾಲ್ವರನ್ನು ಬಂಧಿಸಲಾಗಿದೆ.
ಹಣದಾಸೆಯ ದುರಂತ ಅಂತ್ಯ
ಸ್ವಂತ ತಮ್ಮನ ಜೀವವನ್ನೇ ಹಣಕ್ಕಾಗಿ ಕಸಿದುಕೊಂಡಿರುವ ಈ ಘಟನೆ ಜನರನ್ನು ಬೆಚ್ಚಿಬೀಳಿಸಿದೆ. ದುಡ್ಡಿನ ಹಪಾಹಪಿಯಿಂದ ಕುಟುಂಬವೇ ನಾಶವಾಗುವಂತಹ ಪರಿಸ್ಥಿತಿ ಉಂಟಾಗುತ್ತದೆ ಎಂಬುದಕ್ಕೆ ಈ ಪ್ರಕರಣ ಮತ್ತೊಂದು ಉದಾಹರಣೆಯಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…
ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…
ಮಂಡ್ಯ: ಮದ್ದೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಹಾಸ್ಟೆಲ್ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್…
ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೊರವಲಯದಲ್ಲಿ ಒಂದೂವರೆ ವರ್ಷದ ಕಂದಮ್ಮನ ಎದುರೇ 26 ವರ್ಷದ ಗೃಹಿಣಿ ಸ್ನೇಹಾ ಎಂಬಾಕೆಯ ಬರ್ಬರ…
ಬಿಹಾರದ ನವಾಡಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮುಖ್ಯಶಿಕ್ಷಕನೊಬ್ಬ 8ನೇ ತರಗತಿಯ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ…
ಕಲಬುರಗಿ: ನಿಗದಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ರಾಜೇಶ್ವರಿ ಅವರ…