ಉಳ್ಳಾಲ, ಜುಲೈ 12: ದೇರಳಕಟ್ಟೆ ಪ್ರದೇಶದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪಾದಚಾರಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಅಪಘಾತದಲ್ಲಿ ಮೃತೆಯಾಗಿ ಗುರುತಿಸಲಾದವರು ಕೇರಳ ಮೂಲದ 58 ವರ್ಷದ ಶ್ರೀಮತಿ ಕಮಲ.
ಘಟನೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ಸಮೀಪದಲ್ಲಿ ಸಂಭವಿಸಿದ್ದು, ಶ್ರೀಮತಿ ಕಮಲ ಅವರು ಅಪಾರ್ಟ್‌ಮೆಂಟ್‌ಗೆ ತೆರಳಲು ರಸ್ತೆ ದಾಟುತ್ತಿದ್ದ ವೇಳೆ ಅತೀ ವೇಗದಲ್ಲಿ ಬಂದ ಬೊಲೆರೊ ವಾಹನವೊಂದು ಅವರನ್ನು ಢಿಕ್ಕಿ ಹೊಡೆದು ನೀಡಿದೆ. ಅಪಘಾತದ ತೀವ್ರತೆಗೆ ಅವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತೆಯ ಪುತ್ರಿ ಮೀರ, ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ನೀಡುತ್ತಿದ್ದಾರೆ. ತಾಯಿ ಮತ್ತು ಪುತ್ರಿ ಇಬ್ಬರೂ ಸ್ಥಳೀಯ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು ಎನ್ನಲಾಗಿದೆ.
ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಾಹನ ಮತ್ತು ಚಾಲಕನ ವಿವರ ಶೋಧನೆ ಮುಂದುವರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಯಾದಗಿರಿ: ಪ್ರಯಾಣಿಕರ ಪಯಣಕ್ಕೆ ಅವಶ್ಯಕವಾದ ಟಿಕೆಟ್ ನೀಡದೆ, ಸಾರ್ವಜನಿಕ ಸೇವೆಯ ಹೊಣೆಗಾರಿಕೆಯನ್ನು ಕಡೆಗಣಿಸಿದ ಘಟನೆಯೊಂದು ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಬೆಳಕಿಗೆ…
ಪಾಟ್ನಾ, ಜುಲೈ 31 – ಬಿಹಾರ ರಾಜಧಾನಿ ಪಾಟ್ನಾದ ಜಾನಿಪುರ ಪ್ರದೇಶದಲ್ಲಿ ನಡೆದಿರುವ ಒಂದು ಕ್ರೂರ ಮತ್ತು ಮನುಷ್ಯತ್ವವಿರೋಧಿ ಘಟನೆ…
ಚೆನ್ನೈ: ಕಲಾವಿದರ ಜಗತ್ತಿನಲ್ಲಿ ಒಂದು ದುಃಖದ ಸುದ್ದಿ – ಹಿರಿಯ ನಟಿ, ನಿರ್ಮಾಪಕಿ ಮತ್ತು ರಾಜಕಾರಣಿ ರಾಧಿಕಾ ಶರತ್ ಕುಮಾರ್…
ತುಮಕೂರು: ಖಾಸಗಿ ಕಾಲೇಜಿನ ಪ್ರಿನ್ಸಿಪಾಲ್ ಎನ್ನುವವನು ವಿದ್ಯಾರ್ಥಿನಿಯೊಬ್ಬಳಿಗೆ ಅಶ್ಲೀಲ ಸಂದೇಶ ಕಳುಹಿಸಿ, “ನಾನು 10 ಸಾವಿರ ರೂಪಾಯಿ ಕೊಡ್ತೀನಿ, ಬಾ”…
ಬೆಂಗಳೂರು: ಮನೆಗೂಟದ ಕಲಹ, ಆರ್ಥಿಕ ಸಂಕಷ್ಟಗಳು ಇನ್ನೊಂದು ಭೀಕರ ಘಟನೆಗೆ ಕಾರಣವಾಗಿವೆ. ತಾಯಿಯೊಬ್ಬಳು ತನ್ನ ಮಗುಗೂ ಸಹ ಇಲಿ ಪಾಷಾಣ…
ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಒಂದು ಭೀಕರ ಘಟನೆ ಬೆಳಕಿಗೆ ಬಂದಿದೆ. ವಿವಾಹೇತರ ಸಂಬಂಧದ ಹಿನ್ನೆಲೆಯಲ್ಲಿ ನಡೆದ ಈ ಹತ್ಯೆ ಪ್ರಕರಣದ ಹಿಂದೆ…