ಕೊಟ್ಟೂರು ತಾಲೂಕಿನ ಮೊತಿಕಲ್ ತಾಂಡ ಗ್ರಾಮದ ಮನೋಜ್ ನಾಯ್ಕ್ (32) ಅವರನ್ನು ಅಪರಿಚಿತ ಆಟೋ ಡಿಕ್ಕಿ ಹೊಡೆದು, ಅವರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ನಡೆದಿದೆ.
ಘಟನೆ ವಿವರ:
ಮನೋಜ್ ನಾಯ್ಕ್ ತಮ್ಮ ಗ್ರಾಮದಿಂದ ಮಡ್ರಳ್ಳಿ ಗ್ರಾಮದ ತೇರಿಗೆ ತೆರಳಿ, ಪೂಜೆ ಮುಗಿಸಿಕೊಂಡು ವಾಪಸ್ಸು ತಮ್ಮ ಗ್ರಾಮದತ್ತ ಮೋಟರ್‌ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದರು. ತೂಲಹಳ್ಳಿ ಮಾರ್ಗವಾಗಿ ಚಿನ್ನನಹಳ್ಳಿ ರಸ್ತೆಯ ಮಂಗನಹಳ್ಳಿ ಕ್ರಾಸ್ ಬಳಿ, ಎದುರುಗಡೆಯಿಂದ ಬಂದ ಅಜಾಗರೂಕ ಆಟೋ ಚಾಲಕ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ.
ಬಲವಾದ ಪೆಟ್ಟು ಮತ್ತು ತೀವ್ರ ರಕ್ತಗಾಯಗೊಂಡ ಮನೋಜ್ ನಾಯ್ಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಆಟೋ ಚಾಲಕ ಪರಾರಿಯಾಗಿದ್ದಾನೆ
ಡಿಕ್ಕಿ ಹೊಡೆಸಿದ ಆಟೋ ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದೆ. ಮಗನ ಸಾವಿಗೆ ಕಾರಣವಾದ ಆಟೋ ಪತ್ತೆ ಮಾಡಿ, ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೃತನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅಪರಿಚಿತ ಆಟೋ ಮತ್ತು ಚಾಲಕನ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.
ವರದಿ: ಬಿ. ಮಣಿಕಂಠ
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…
ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…
ಬೆಂಗಳೂರು: ಜಿಬಿಎ ನೋಟಿಸ್ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…
ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…
ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…
ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…