Categories: Latest

ಗರುಡಾ ಗ್ಯಾಂಗ್’ನ ಕ್ಯಾಪ್ಟನ್ ಸಹಿತ ಮೂವರನ್ನು ಅರೆಸ್ಟ್ ಮಾಡಿದ ಭಟ್ಕಳ ಪೊಲೀಸರು

ಭಟ್ಕಳ: ರಸ್ತೆಯಲ್ಲಿ ದರೋಡೆಮಾಡುವ ‘ಗರುಡಾ ಗ್ಯಾಂಗ್’ಗೆ ಭಟ್ಕಳ ಪೊಲೀಸರು ತೀವ್ರ ಪಾಠ ಕಲಿಸಿದ್ದಾರೆ. ಬೆಳಗಿನ ಜಾವ ನಡೆಸಿದ ತಾಂತ್ರಿಕ ಕಾರ್ಯಾಚರಣೆಯಲ್ಲಿ ಗ್ಯಾಂಗ್‌ನ ಕ್ಯಾಪ್ಟನ್ ಸೇರಿ ಮೂವರನ್ನು ಬಂಧಿಸಲಾಗಿದೆ, ಇನ್ನಿಬ್ಬರು ಪರಾರಿಯಾಗಿದ್ದಾರೆ.

ಮೇ 28ರ ನಸುಕಿನ 3 ಗಂಟೆ. ಭಟ್ಕಳದ ಸಾಗರ ರಸ್ತೆಯ ಬಿಲಾಲ್‌ಖಂಡ ಬಳಿ ಐವರು ಯುವಕರು ಮಂಕಿ ಟೋಪಿ ಹಾಕಿಕೊಂಡು ಕಾರಿನಲ್ಲಿ ಕಾವಲು ಹಿಡಿದಿದ್ದರು. ದರೋಡೆ ಸಂಚು ಸ್ಪಷ್ಟ. ಅವರ ಬಳಿ ಚಾಕು, ಕಾರಪುಡಿ, ಬೆಲ್ಟ್, ಮೊಬೈಲ್, ಹಣ ಎಲ್ಲವೂ ಸಿದ್ದ.

ಸಂದೇಹಕ್ಕೆ ಸ್ಥಳಕ್ಕೆ ಬಂದ ಪಿಎಸ್‌ಐ ರನ್ನಗೌಡ ಪಾಟೀಲ್ ಅವರನ್ನು ಕಂಡ ತಕ್ಷಣ ಗ್ಯಾಂಗ್ ಓಡಲು ಯತ್ನಿಸಿತು. ಇನೋವಾ ಕಾರು ಹಿಮ್ಮುಖವಾಗಿ ಓಡಿಸಲು ಯತ್ನಿಸಿದಾಗ ಗಟಾರಕ್ಕೆ ಬಿದ್ದಿತು. ಈ ದರ್ಬಾರದಲ್ಲಿ ಇಬ್ಬರು ಆರೋಪಿಗಳು – ಭಟ್ಕಳದ ಜಿಶಾನ್ ಮತ್ತು ನಬೀಲ್ ಪರಾರಿಯಾಗಿದರು.

ಮೂವರನ್ನು ಹಿಡಿಯಲು ಪಿಎಸ್‌ಐ ರನ್ನಗೌಡ ಪಾಟೀಲ್ ನೇತೃತ್ವದ ತಂಡ ನಿರಂತರ ಹೋರಾಟ ನಡೆಸಿತು. ಕೊನೆಗೆ ಮೂರು ಬೇಟೆ! ಬಂಧಿತರು: ಮಂಗಳೂರಿನ ಜಲೀಲ್ ಹುಸೈನ್ (11 ಅಪರಾಧ ಪ್ರಕರಣಗಳ ಆರೋಪಿ), ಭಟ್ಕಳದ ನಾಶೀರ್ ಹಕಿಂ (2 ಪ್ರಕರಣ), ಮತ್ತು ಒಬ್ಬ ಅಪ್ರಾಪ್ತ.

ಪೊಲೀಸರು ಕಾರು, 1500 ರೂ. ನಗದು, ಮೊಬೈಲ್, ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರು ಪರಾರಿಯಾದವರಿಗಾಗಿ ವಿಶೇಷ ತಂಡ ರಚನೆಯಾಗಿದೆ. ಈ ಕಾರ್ಯಾಚರಣೆಗೆ ಎಸ್ಪಿ ಎಂ. ನಾರಾಯಣ, ಎಡ್ಎಸ್ಪಿ ಕೃಷ್ಣಮೂರ್ತಿ, ಡಿವೈಎಸ್ಪಿ ಮಹೇಶ್ ಎಂ.ಕೆ ಬೆನ್ನೆಲುಬಾಗಿ ನಿಂತಿದ್ದರು.

ವರದಿ: ಕುಮಾರ್ ನಾಯಕ್

nazeer ahamad

Recent Posts

ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ; ಬೇಸತ್ತು ಚರಂಡಿ ಸ್ವಚ್ಛಗೊಳಿಸಿದ ಮಹಿಳೆ.

ಕೊಟ್ಟೂರು:- ತಾಲ್ಲೂಕಿನ ಕೆ. ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹರಾಳು ಗ್ರಾಮದ ದುಮ್ಮಾಡಿ ಕೆಂಚಮ್ಮ ಎಂಬ ಮಹಿಳೆಯೋರ್ವರು ತಮ್ಮ…

3 hours ago

ಬಸವನ ಬಾಗೇವಾಡಿಯಲ್ಲಿ ಅಕ್ರಮ LPG ರೀಫಿಲ್ಲಿಂಗ್ ಆರೋಪ: ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಆಕ್ರೋಶ

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ನಗರದಲ್ಲಿ ಗೃಹಬಳಕೆಯ LPG ಸಿಲಿಂಡರ್‌ಗಳಿಂದ ಆಟೋಗಳಿಗೆ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡಲಾಗುತ್ತಿದೆ ಎಂಬ ಆರೋಪ…

10 hours ago

ಸಿದ್ದರಾಮಯ್ಯ ನಮ್ಮ ನಾಯಕ, 2028ಕ್ಕೆ ಡಿಕೆಶಿ ಸಿಎಂ ಆಗಲಿ: ಸತೀಶ್ ಜಾರಕಿಹೊಳಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…

2 days ago

ಅಟ್ಟಿಕಾ ಗೋಲ್ಡ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ: 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಶೋಧ; ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ, ₹7.52 ಲಕ್ಷ ನಗದು ಜಪ್ತಿ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…

2 days ago

ಇಬ್ಬರು ಮಕ್ಕಳ ತಾಯಿಗೆ ವಂಚನೆ ಆರೋಪ: ಖಾಸಗಿ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್; ₹9 ಲಕ್ಷ ಪಡೆದ ಟ್ಯಾಟೂ ಆರ್ಟಿಸ್ಟ್ ಅರ್ಜುನ್? ಎಂದು ಮಹಿಳೆ ಆರೋಪ.

ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…

2 days ago

ಖಾಲಿ ಸೈಟ್ ಸ್ವಚ್ಛಗೊಳಿಸಲು ಹೋದಾಗ ಬಯಲಾಯ್ತು ಕೊಲೆ ರಹಸ್ಯ: ಪತ್ನಿಯನ್ನು ಕೊಂದು ಶವ ಎಸೆದಿದ್ದ ಪತಿ ಬಂಧನ

ಬೆಂಗಳೂರು: ಜಿಬಿಎ ನೋಟಿಸ್‌ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…

2 days ago