Latest

ನಾಲ್ಕು ತಿಂಗಳ ಹಿಂದೆ ನಡೆದ ಕೊಲೆ ಬೆದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಬಂಗಾರಪೇಟೆ ಪೊಲೀಸ್

ನಾಲ್ಕು ತಿಂಗಳ ಹಿಂದೆ ನಡೆದ ಕೊಲೆ ಬೆದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಬಂಗಾರಪೇಟೆ ಪೊಲೀಸರಿಗೆ ಪ್ರಶಂಸೆ ವ್ಯಕ್ತಪಡಿಸಿದ ಕೆ.ಜೆ.ಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ. ಧರಣಿ ದೇವಿ. ಐಪಿಎಸ್.

ದಿನಾಂಕ 22/04/2022 ರಂದು ಶ್ರೀ ವೆಂಕಟೇಶ್ .ಸಿ ಬಿನ್ ಲೇಟ್ ಚಿನ್ನಪ್ಪ ಕೆರೆಕೋಡಿ ಬಂಗಾರಪೇಟೆ ರವರು ಬಂಗಾರಪೇಟೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶದಲ್ಲಿ ತನ್ನ ಮಗನಾದ ಹರೀಶ್ ಅಲಿಯಾಸ್ ಕಬಾಬ್ ಎಂಬಾತನನ್ನು ಬಂಗಾರಪೇಟೆಯ ಕಾರಹಳ್ಳಿ ಗ್ರಾಮದ ರುದ್ರ ಭೂಮಿ ಸ್ಮಶಾನದ ಬಳಿ ಯಾರೊ ದುಷ್ಕರ್ಮಿಗಳು ಕೊಲೆ ಮಾಡಿದ್ದು ಈ ಬಗ್ಗೆ ನೀಡಿದ ದೂರಿನ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿತ್ತು.

ಪ್ರಕರಣದಲ್ಲಿ ಮೃತನಾದ ಹರೀಶ್ ಅಲಿಯಾಸ್ ಕಬಾಬ್ ಎಂಬಾತನನ್ನು ಕೊಲೆ ಮಾಡಿರುವ ಆರೋಪಿ ಯಾರೆಂದು ಗೊತ್ತಿಲ್ಲದೆ ಇದ್ದು ನಂತರ ಕೇಸಿನಲ್ಲಿ ಆರೋಪಿಯನ್ನು ಪತ್ತೆ ಮಾಡಲು ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ. ಧರಣಿ ದೇವಿ ಐಪಿಎಸ್ ರವರ ಆದೇಶದ ಮೇರೆಗೆ ಪೊಲೀಸ್ ಉಪಾಧೀಕ್ಷಕರಾದ ವಿ.ಎಲ್ ರಮೇಶ್ ರವರ ಮಾರ್ಗದರ್ಶನದಲ್ಲಿ ಬಂಗಾರಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸಂಜೀವ್ ರಾಯಪ್ಪ ಹಾಗೂ ಪಿ.ಎಸ್.ಐ ಸುನಿಲ್ ಹಾಗೂ ಸಿಬ್ಬಂದಿಯವರಾದ ಅನಿಲ್ ಕುಮಾರ್, ರಾಮಕೃಷ್ಣ ರೆಡ್ಡಿ, ಮಂಜುನಾಥ್ ರೆಡ್ಡಿ, ನಾಗೇಶ್ ಮತ್ತು ಮುನಾವರ್ ಪಾಷಾ ರವರನ್ನು ನೇಮಿಸಿದ್ದರು. ಅದರಂತೆ ಬಾತ್ಮಿ ದಾರದಿಂದ ಮಾಹಿತಿಯನ್ನು ಪಡೆದು ಪತ್ತೆ ಕಾರ್ಯ ಕೈಗೊಂಡಿದ್ದು ಮಾಹಿತಿಯ ಮೇರೆಗೆ ಆರೋಪಿ ಸೂರ್ಯ ಅಲಿಯಾಸ್ ಗೋವಿಂದ ಬಿನ್ ಲೇಟ್ ವಿಜಯ್ ಕುಮಾರ್ ವಯಸ್ಸು 23 ಪೇಂಟಿಂಗ್ ಕೆಲಸ ಮಾಡುತ್ತಿದ್ದ ಕೆರೆ ಕೋಡಿ ಗ್ರಾಮ ಬಂಗಾರಪೇಟೆಯ ವಾಸಿತ ಆರೋಪಿಯನ್ನು ದಿನಾಂಕ 15/09/2022 ರಂದು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಿದಾಗ ತಾನು ಹರೀಶ್ ಅಲಿಯಾಸ್ ಕಬಾಬ್ ನನ್ನ ಒಡೆಯಲು ಕರೆದುಕೊಂಡು ಹೋಗಿ ಮಧ್ಯವನ್ನು ಕುಡಿಸಿ ಸಾಯಿಸುವ ಉದ್ದೇಶದಿಂದ ಕೆಳಗೆ ತಳ್ಳಿ ಪಕ್ಕದಲ್ಲಿಯೇ ಇದ್ದ ದೊಡ್ಡ ಗಾತ್ರದ ಕಲ್ಲನ್ನು ಎತ್ತಿ ತಲೆಯ ಮೇಲೆ ಹಾಕಿ ನಂತರ ಕುಡಿಯಲು ತಂದಿದ್ದ ಬೀರ್ ಬಾಟಲ್ ಹೊಡೆದು ಬಾಟಲ್ ಚೂಪಾದ ಗಾಜಿನಿಂದ ಕಬಾಬ್ ಎಂಬಾತನ ಕುತ್ತಿಗೆಗೆ ತಿವಿದು ಕೊಲೆ ಮಾಡಿರುವುದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು ನಂತರ ದಸ್ತಗಿರಿ ಮಾಡಿರುತ್ತಾರೆ.

ಈ ಕೊಲೆ ಪ್ರಕರಣದಲ್ಲಿ ಆರೋಪಿಯು ಯಾರೆಂದು ಖಚಿತವಾಗಿ ತಿಳಿಯದೆ ಇದ್ದರೂ ಸಹ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿರುವುದನ್ನು ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ. ಧರಣಿ ದೇವಿ ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವರದಿ -ರೋಶನ್

ಭ್ರಷ್ಟರ ಬೇಟೆ

Recent Posts

ಮುಂಡಗೋಡದ ಇಬ್ಬರು ಭ್ರಷ್ಟರಿಗೆ ಲೋಕಾಯುಕ್ತ ಶಾಕ್!

ಮುಂಡಗೋಡ:ತಾಲೂಕಿನ ಹೆಸ್ಕಾಂ ಉಪವಿಭಾಗದ ಎಇಇ ಧರ್ಮರಾಜ ಬೆಡಸಗಾಂವ್ ಹಾಗೂ ಕಂದಾಯ ನಿರೀಕ್ಷಕ ಬಸವರಾಜ ಬಿಸನಾಳ ಅವರು ಪ್ರತ್ಯೇಕ ಪ್ರಕರಣಗಳಲ್ಲಿ ಲೋಕಾಯುಕ್ತ…

31 minutes ago

ಇಬ್ಬರು ಪತ್ನಿಯರಿದ್ದರೂ ಅಪ್ರಾಪ್ತೆಯ ಮೇಲೆ ಅತ್ಯಾಚಾರ ವ್ಯಸಗಿ ಮದುವೆಯಾದ: 45 ವರ್ಷದ ವ್ಯಕ್ತಿ ಪೋಕ್ಸೋ ಅಡಿಯಲ್ಲಿ ಬಂಧನ

ತಮಿಳುನಾಡಿನ Kanchipuram ಜಿಲ್ಲೆಯ ಉತ್ತಿರಮೇರೂರು ಸಮೀಪ ಮಾನವೀಯತೆಯನ್ನೇ ನಾಚಿಸುವ ಘಟನೆ ಬೆಳಕಿಗೆ ಬಂದಿದೆ. 15 ವರ್ಷದ ಶಾಲಾ ಬಾಲಕಿಯನ್ನು ಪ್ರಲೋಭನೆ…

35 minutes ago

2025-26ನೇ ಸಾಲಿನ ಡಿಜಿ-ಐಜಿಪಿ ಪ್ರಶಂಸನಾ ಪದಕ ಘೋಷಣೆ: ರಾಜ್ಯದ 200 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಗೌರವ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 200 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ 2025-26ನೇ ಸಾಲಿನ ಪ್ರತಿಷ್ಠಿತ…

20 hours ago

ಗೆಳತಿಯ ಲವ್ ಮ್ಯಾರೇಜ್ ಎಡವಟ್ಟು: ಮಾಡದ ತಪ್ಪಿಗೆ ಯುವಕ ಆತ್ಮಹತ್ಯೆ

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕುಡ್ಲೂರು ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದ್ದು, ಸ್ನೇಹಿತೆಯೊಬ್ಬಳ ಪ್ರೇಮ ವಿವಾದದ ನಡುವೆ ಅಮಾಯಕ ಯುವಕನೊಬ್ಬ…

1 day ago

ಮದುವೆಯಾಗಿ ನಾಲ್ಕೇ ತಿಂಗಳಲ್ಲಿ ನವವಿವಾಹಿತೆಯ ಸಾವು: ಪತಿ ವಿರುದ್ಧ ಕೊಲೆ, ವರದಕ್ಷಿಣೆ ಕಿರುಕುಳ ಆರೋಪ

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗುಳೇದಹಟ್ಟಿ ತಾಂಡದಲ್ಲಿ ನವವಿವಾಹಿತೆಯೊಬ್ಬರ ಅನುಮಾನಾಸ್ಪದ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮದುವೆಯಾಗಿ ಕೇವಲ ನಾಲ್ಕು…

1 day ago

ಪೊಲೀಸರ ಎದುರೇ ರಂಪಾಟ ನಡೆಸಿದ್ದ ‘ಮಚ್ ಮಂಜ’ ಬಂಧನ; ಮಹಾರಾಷ್ಟ್ರದಲ್ಲಿ ಸೆರೆ, ನ್ಯಾಯಾಂಗ ಬಂಧನಕ್ಕೆ ಒಪ್ಪಿಗೆ

ಹಳಿಯಾಳ: ಪಟ್ಟಣದ ಮೌರ್ಯ ಹೋಟೆಲ್ ಸಮೀಪ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿ, ಕರ್ತವ್ಯ ನಿರ್ವಹಣೆಗೆ ಬಂದಿದ್ದ ಪೊಲೀಸರ ಎದುರೇ ರಂಪಾಟ ನಡೆಸಿ…

1 day ago