ಬೆಂಗಳೂರು: ‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ ವಿರುದ್ಧ ಆಕ್ಷೇಪಾರ್ಹವಾಗಿ ಮಾತನಾಡಿರುವ ಆಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ನಟ ಮಡೆನೂರು ಮನು ಇದೀಗ ಸಂಕಟದ ಸ್ಥಿತಿಗೆ ತಲುಪಿದ್ದಾರೆ.
ಆಡಿಯೋ ವೈರಲ್ ಆದ ಬಳಿಕ ಶಿವರಾಜ್ ಅಭಿಮಾನಿಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮನು ವಿರುದ್ಧ ಆಕ್ರೋಶದ ಸುರಿಮಳೆ ಸುರಿದಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮನು, “ಆ ವಿಡಿಯೋ ನನ್ನದ್ದಲ್ಲ. ಯಾರೋ ಕುಯುಕ್ತ ಉದ್ದೇಶದಿಂದ ಎಡಿಟ್ ಮಾಡಿದ ಆಡಿಯೋ ಅದು,” ಎಂದು ತಮ್ಮ ವಿರುದ್ಧದ ಆರೋಪವನ್ನು ತಳ್ಳಿಹಾಕಿದ್ದಾರೆ.
ಇದೀಗ, ವಿವಾದಕ್ಕೆ ತೆರೆ ಹಾಕಲು ಮನು ಮೆಚ್ಚಿನ ಹೀರೋ ಶಿವರಾಜ್‌ಕುಮಾರ್ ಅವರಲ್ಲಿ ನೇರವಾಗಿ ಕ್ಷಮೆ ಕೇಳಲು ಮುಂದಾಗಿದ್ದಾರೆ. ಆದರೆ ಅವರು ಶಿವಣ್ಣನನ್ನು ಭೇಟಿಯಾಗಲು ವಿಫಲವಾಗಿದ್ದಾರೆ.
ಅದರಿಂದ ಇಂದು ಬೆಳಿಗ್ಗೆಯಿಂದಲೇ ಮನು ಕುಟುಂಬ ಸಮೇತರಾಗಿ ಶಿವಣ್ಣ ನಿವಾಸದ ಎದುರು ಕಾಯುತ್ತಿದ್ದಾರೆ. “ನಾನು ಅವ್ರ ಫ್ಯಾನ್, ಅವರ ವಿರುದ್ಧ ನಾನೇನು ತಪ್ಪು ಮಾತು ಮಾತನಾಡಿಲ್ಲ. ಆದರೆ ಅವರ ಭಾವನೆಗೆ ಗಾಯವಾಗಿದೆ ಎಂದಾದರೆ ಕ್ಷಮೆ ಕೇಳುತ್ತೇನೆ,” ಎಂದು ಮಾಧ್ಯಮದವರೊಡನೆ ಮನು ಮಾತನಾಡಿದ್ದಾರೆ.
ಈ ಸಂಪೂರ್ಣ ಘಟನೆಯ ವಿಡಿಯೋ ಈಗ ವೈರಲ್ ಆಗಿದ್ದು, ಮನು ಕುಟುಂಬದ ತೀವ್ರ ಸಂಕಟ ಹಾಗೂ ಮಾನಸಿಕ ಒತ್ತಡವನ್ನೂ ಬಿಚ್ಚಿಡುತ್ತಿದೆ. ಆದರೆ ಈ ಕುರಿತು ಶಿವರಾಜ್‌ಕುಮಾರ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…
ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…
ಬೆಂಗಳೂರು: ಜಿಬಿಎ ನೋಟಿಸ್ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…
ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…
ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…