ಕೋಲಾರದಲ್ಲಿ ಲಂಚ ಸ್ವೀಕರಿಸುವ ವೇಳೆ ನಡೆದ ಲೋಕಾಯುಕ್ತ ದಾಳಿ ಸಿನಿಮೀಯ ತಿರುವು ಪಡೆದುಕೊಂಡಿದ್ದು, ಪರಾರಿಯಾಗಲು ಯತ್ನಿಸಿದ ಸಹಾಯಕ ಔಷಧ ನಿಯಂತ್ರಕಿ ಕೊನೆಗೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಔಷಧ ಅಂಗಡಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಪರವಾನಗಿ ನೀಡುವ ಸಂಬಂಧ ₹35 ಸಾವಿರ ಲಂಚ ಕೇಳಲಾಗಿದೆ ಎಂಬ ಆರೋಪದ ಮೇಲೆ ಟೇಕಲ್‌ನ ಅಂಗಡಿ ಮಾಲೀಕ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಲೋಕಾಯುಕ್ತ ತಂಡ ಕಾರ್ಯಾಚರಣೆ ನಡೆಸಿತು.
ಲಂಚದ ಹಣವನ್ನು ಕಾರಿನಲ್ಲೇ ಸ್ವೀಕರಿಸುತ್ತಿದ್ದ ವೇಳೆ ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ಆ್ಯಂಟೊನಿ ಜಾನ್ ನೇತೃತ್ವದ ತಂಡ ದಾಳಿ ನಡೆಸಿತು. ದಾಳಿ ನಡೆಯುತ್ತಿದ್ದಂತೆಯೇ ಸಹಾಯಕ ಔಷಧ ನಿಯಂತ್ರಕಿ ಜೆ. ಶ್ಯಾಮಲಾ ಅವರು ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು. ತಮ್ಮೊಂದಿಗೆ ಕಚೇರಿಯ ‘ಡಿ’ ಗ್ರೂಪ್ ನಿವೃತ್ತ ನೌಕರ ಶ್ರೀನಿವಾಸ್ ಹಾಗೂ ಚಾಲಕನನ್ನು ಕರೆದುಕೊಂಡು ಕಾರಿನಲ್ಲಿ ಪರಾರಿಯಾಗಿದರು.
ಬಂಗಾರಪೇಟೆ ಕಡೆಗೆ ವೇಗವಾಗಿ ಸಾಗುತ್ತಿದ್ದ ಕಾರನ್ನು ಲೋಕಾಯುಕ್ತ ಪೊಲೀಸರು ಸುಮಾರು 15 ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿದರು. ಕೊನೆಗೆ ತಮ್ಮ ವಾಹನವನ್ನು ಆರೋಪಿಗಳ ಕಾರಿಗೆ ಅಡ್ಡ ನಿಲ್ಲಿಸಿ ಅವರನ್ನು ವಶಕ್ಕೆ ಪಡೆದರು.
ಈ ಘಟನೆಯಲ್ಲಿ ಜೆ. ಶ್ಯಾಮಲಾ, ಶ್ರೀನಿವಾಸ್ ಮತ್ತು ಕಾರಿನ ಚಾಲಕ ಮಹಾಂತೇಶ್ ಅವರನ್ನು ಮಂಗಳವಾರ ರಾತ್ರಿ ಬಂಧಿಸಲಾಗಿದೆ ಎಂದು ಅಧೀಕ್ಷಕ ಆ್ಯಂಟೊನಿ ಜಾನ್ ತಿಳಿಸಿದ್ದಾರೆ.
ಮುಂಡಗೋಡ ಪೊಲೀಸರು ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದ ಶಿರಸಿ ಹುಬ್ಬಳ್ಳಿ…
ಯಾದಗಿರಿ ಜಿಲ್ಲೆಯ ಗೋನಾಳ ಗ್ರಾಮದಲ್ಲಿ ನಡೆದ ವೃದ್ಧನ ಹತ್ಯೆ ಪ್ರಕರಣಕ್ಕೆ ಈಗ ಅಚ್ಚರಿ ಮೂಡಿಸುವ ತಿರುವು ಸಿಕ್ಕಿದೆ. 74 ವರ್ಷದ…
ಬೆಂಗಳೂರು ನಗರದ ಚಂದ್ರಾ ಲೇಔಟ್ ವ್ಯಾಪ್ತಿಯ ಗಂಗೊಂಡನಹಳ್ಳಿಯಲ್ಲಿ ಮಧ್ಯಾಹ್ನ ನಡೆದ ಭೀಕರ ಘಟನೆಯಲ್ಲಿ ವಿವಾಹಿತ ಮಹಿಳೆ ಫಿರ್ದೋಸ್ ಭಾನು ಹತ್ಯೆಯಾಗಿದ್ದಾಳೆ.…
ಮಹಾರಾಷ್ಟ್ರದಲ್ಲಿ ರಾಜಕೀಯ ಮುಖಂಡರ ಜ್ಯೋತಿಷ್ಯ ಹೇಳಿ ಖ್ಯಾತಿ ಪಡೆದಿದ್ದ ಸ್ವಯಂ ಘೋಷಿತ ಜ್ಯೋತಿಷಿ ‘ಕ್ಯಾಪ್ಟನ್’ ಅಶೋಕ್ ಖರತ್ ಇದೀಗ ಗಂಭೀರ…
ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ಉತ್ತಮ ಸಂಬಳದ ಉದ್ಯೋಗ ಪಡೆಯಲು ಬಯಸುವವರಿಗೆ ಮಹತ್ವದ ಅವಕಾಶ ಬಂದಿದೆ. ರಾಷ್ಟ್ರೀಯ ಜಲ ವಿದ್ಯುಚ್ಛಕ್ತಿ ನಿಗಮ…
ಕಾನೂನು ಪದವಿ ಪಡೆದ ನಂತರ ಉತ್ತಮ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಸಂತಸದ ಸುದ್ದಿ. ಕರ್ನಾಟಕ ಹೈಕೋರ್ಟ್‌ವು 2026ರ ನೇಮಕಾತಿಗಾಗಿ ಅಧಿಸೂಚನೆ…