Latest

ಬೈಕ್‌ನಲ್ಲಿ ಬಂದು, ಲಾಂಗ್, ಮಚ್ಚು, ಡ್ರಾಗನ್, ರಾಡುಗಳನ್ನು ತೋರಿಸಿ ದರೋಡೆ ಮಾಡಿದ್ದ ಆರೋಪಿಗಳ ಬಂಧನ

ಮೈಸೂರು ನಗರ, ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಗಂಭೀರ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೈಸೂರು ನಗರ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ದರೋಡೆಕೋರರನ್ನು ಬಂಧಿಸಲು ಪೊಲೀಸರಿಗೆ ಯಶಸ್ಸು ಲಭಿಸಿದೆ.

ಪ್ರಕರಣದ ಸಂಕ್ಷಿಪ್ತ ವಿವರ:
ಪಿರ್ಯಾದಿದಾರರಾದ ಎಂ.ಎನ್. ಗಿರೀಶ್ ಬಿನ್ ನಾಗಶೆಟ್ಟಿ (44 ವರ್ಷ), ಎಲೆಕ್ಟ್ರಿಕಲ್ ಕೆಲಸಗಾರರು, ಎಸ್.ವಿ.ಪಿ. ನಗರ, ಮೈಸೂರು, ದಿನಾಂಕ: 13/03/2025 ರಂದು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ, “ರಾತ್ರಿ ಸುಮಾರು 9-00 ಗಂಟೆಗೆ ನಾಲ್ಕು ಮಂದಿ ದರೋಡೆಕೋರರು, ಎರಡು ಬೈಕ್‌ಗಳಲ್ಲಿ ಬಂದು, ಲಾಂಗ್, ಮಚ್ಚು, ಡ್ರಾಗನ್, ರಾಡುಗಳನ್ನು ತೋರಿಸಿ, ನನ್ನ ಹೆಂಡತಿ ಮತ್ತು ಮಕ್ಕಳಿಗೆ ಬೆದರಿಕೆ ಮಾಡಿ, ಮಚ್ಚುಗಳಿಂದ ಗಾಯಗೊಳಿಸಿ, ನನ್ನ 23 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ” ಎಂದು ತಿಳಿಸಿದ್ದಾರೆ. ಈ ದೂರಿನ ಮೇಲೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊ.ನಂ: 23/2025, ಕಲಂ: 309(6), 329(4), 310(2) ಬಿ.ಎನ್.ಎಸ್ ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಯಿತು.

ಪೊಲೀಸರಿಂದ ಕೈಗೊಳ್ಳಲಾದ ಕಾರ್ಯಾಚರಣೆ:
ಮಾನ್ಯ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಐ.ಪಿ.ಎಸ್. ರವರ ನಿರ್ದೇಶನದಲ್ಲಿ, ಉಪ ಪೊಲೀಸ್ ಆಯುಕ್ತರು (ಕೇಂದ್ರಸ್ಥಾನ ಅಪರಾಧ ಮತ್ತು ಸಂಚಾರ ವಿಭಾಗ) ಶ್ರೀಮತಿ ಜಾಹ್ನವಿ.ಎಸ್., ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ, ದೇವರಾಜ ವಿಭಾಗದ ಎ.ಸಿ.ಪಿ. ಶ್ರೀ ರಾಜೇಂದ್ರ ನೇತೃತ್ವದಲ್ಲಿ, ಆಲನಹಳ್ಳಿ ಠಾಣೆಯ ಪಿ.ಐ. ಶ್ರೀಮತಿ ಸ್ವರ್ಣ.ಜಿ.ಎಸ್., ಎಸ್.ಐ. ಗಂಗಾಧರ್ ಹಾಗೂ ಸಿಬ್ಬಂದಿಗಳಾದ ಚೇತನ, ಕಿರಣ್ ರಾಥೋಡ್, ಲಿಂಗರಾಜಪ್ಪ, ಮಂಜುನಾಥ್ ಗದಗೈಗೋಳ, ಮಲ್ಲಿಕಾರ್ಜುನ, ಸಂತೋಷ್ ಕುಮಾರ್, ಶಾಜಿಯಾ ಬಾನು, ಅಭಿಷೇಕ್ ಮತ್ತು ಆಟೋಮಿಷನ್ ಸೆಂಟರ್‌ನ ಎಸ್.ಐ. ಚಂದ್ರಶೇಖರ್ ರಾವ್, ಸಿಬ್ಬಂದಿಗಳಾದ ಪ್ರದೀಪ್, ಶಿವಕುಮಾರ್ ಹಾಗೂ ಸಿ.ಡಿ.ಆರ್ ವಿಭಾಗದ ಕುಮಾರ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

ಬಂಧಿತ ಆರೋಪಿಗಳು:

1. ಯೋಗಾನಂದ @ ಯೋಗ @ ಆನಂದ @ ದಡಿಯಾ @ ಉಪೇಂದ್ರ ಬಿನ್ ಕೃಷ್ಣಗೌಡ (34 ವರ್ಷ), ಆಟೋ ಚಾಲಕ, ಮಾರಸಿಂಗನಹಳ್ಳಿ, ಮದ್ದೂರು, ಮಂಡ್ಯ ಜಿಲ್ಲೆ.

2. ಅಭಿಷೇಕ್ @ ಬ್ಯಾಡ್ರಾಯನಪುರ ಅಭಿ, ಆಟೋ ಚಾಲಕ, ಬ್ಯಾಟರಾಯನಪುರ, ಮೈಸೂರು ರಸ್ತೆ, ಬೆಂಗಳೂರು.

3. ಮನು ಕುಮಾರ್ ಬಿನ್ ವೀರಯ್ಯ (27 ವರ್ಷ), ಬಿತ್ತರಿ ನೀರಿನ ಕ್ಯಾನ್ ಡಿಲಿವರಿ ಕೆಲಸ, ಕಣ್ಣೂರು, ಕೊಳ್ಳೆಗಾಲ ತಾಲ್ಲೂಕು, ಚಾಮರಾಜನಗರ.

4. ಆಕಾಶ್ ಬಿನ್ ನಾಗರಾಜು (26 ವರ್ಷ), ಟ್ಯಾಟೂ ಕಲಾವಿದ, ಕಣ್ಣೂರು, ಕೊಳ್ಳೆಗಾಲ, ಚಾಮರಾಜನಗರ.

5. ವೆಂಕಟೇಶ್.ಎಸ್ @ ಗಜ ಬಿನ್ ಶಿವಣ್ಣ (26 ವರ್ಷ), ಕಾರು ಚಾಲಕ, ಗುಂಡಶೆಟ್ಟಿಹಳ್ಳಿ, ಚನ್ನರಾಯಪಟ್ಟಣ, ಹಾಸನ.

ವಶಪಡಿಸಿದ ಮಾಲುಗಳು:

23 ಗ್ರಾಂ ತೂಕದ ಚಿನ್ನದ ಸರ

2 ಮಚ್ಚುಗಳು

2 ಡ್ರಾಗನ್‌ಗಳು

2 ರಾಡುಗಳು

ಮಾಸ್ಕ್, ಕೈಕವಚಗಳು, ಹೆಲ್ಮೆಟ್‌ಗಳು

ಬಜಾಜ್ ಪಲ್ಸರ್ 125 ಮತ್ತು ಬಜಾಜ್ ಪಲ್ಸರ್ 150 ಬೈಕ್‌ಗಳು
ಒಟ್ಟು ಮೌಲ್ಯ: ₹4,00,000

ಆರೋಪಿಗಳು ಬಳಸಿದ ವಾಹನಗಳ ವಿವರ:
ಈ ದರೋಡೆಕೋರರು ಬಳಸಿದ ಬೈಕ್‌ಗಳು ಮೈಸೂರಿನ ಘಟನೆಗೆ ಮೊದಲೇ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೋಷಿತ ಪ್ರಕರಣಗಳಾಗಿ ದಾಖಲಾಗಿವೆ:

1. ಗಿರಿನಗರ ಪೊಲೀಸ್ ಠಾಣೆ FIR ಸಂಖ್ಯೆ: 23/2025, ಕಲಂ 303(2) ಬಿ.ಎನ್.ಎಸ್.

2. ಗಿರಿನಗರ ಪೊಲೀಸ್ ಠಾಣೆ FIR ಸಂಖ್ಯೆ: 57/2025, ಕಲಂ 303(2) ಬಿ.ಎನ್.ಎಸ್.

 
ಆಲನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯ ಶ್ರಮದ ಫಲವಾಗಿ ಪ್ರಕರಣ ಬೆರಿಸಿದ್ದು. ಮಾನ್ಯ ಪೊಲೀಸ್ ಆಯುಕ್ತರು ಈ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ. ವರದಿ: ಬಸವಣ್ಣ

nazeer ahamad

Recent Posts

ಸಿದ್ದರಾಮಯ್ಯ ನಮ್ಮ ನಾಯಕ, 2028ಕ್ಕೆ ಡಿಕೆಶಿ ಸಿಎಂ ಆಗಲಿ: ಸತೀಶ್ ಜಾರಕಿಹೊಳಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…

22 hours ago

ಅಟ್ಟಿಕಾ ಗೋಲ್ಡ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ: 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಶೋಧ; ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ, ₹7.52 ಲಕ್ಷ ನಗದು ಜಪ್ತಿ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…

1 day ago

ಇಬ್ಬರು ಮಕ್ಕಳ ತಾಯಿಗೆ ವಂಚನೆ ಆರೋಪ: ಖಾಸಗಿ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್; ₹9 ಲಕ್ಷ ಪಡೆದ ಟ್ಯಾಟೂ ಆರ್ಟಿಸ್ಟ್ ಅರ್ಜುನ್? ಎಂದು ಮಹಿಳೆ ಆರೋಪ.

ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…

2 days ago

ಖಾಲಿ ಸೈಟ್ ಸ್ವಚ್ಛಗೊಳಿಸಲು ಹೋದಾಗ ಬಯಲಾಯ್ತು ಕೊಲೆ ರಹಸ್ಯ: ಪತ್ನಿಯನ್ನು ಕೊಂದು ಶವ ಎಸೆದಿದ್ದ ಪತಿ ಬಂಧನ

ಬೆಂಗಳೂರು: ಜಿಬಿಎ ನೋಟಿಸ್‌ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…

2 days ago

₹30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…

2 days ago

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

3 days ago