Latest

ರೋಚಕ ಹನಿ ಟ್ರ್ಯಾಪ್ ಕಹಾನಿ; ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡ ಸುಂದರಿ!

ಟಿಕ್ ಟಾಕ್ ಬಂದ ನಂತರ ಸಾಕಷ್ಟು ಜನ ಸೆಲೆಬ್ರಿಟಿಗಳು ಹುಟ್ಟಿಕೊಂಡರು ಹಾಗೂ ಎಲ್ಲೋ ಮೂಲೆ ಮೂಲೆಯಲ್ಲಿರುವ ಸಾಕಷ್ಟು ಜನ ತಮ್ಮ ವಿಡಿಯೋಗಳನ್ನು ಟಿಕ್ ಟಾಕ್ ನಲ್ಲಿ ಹಾಕುವ ಮೂಲಕ ರಾತ್ರೋರಾತ್ರಿ ಸ್ಟಾರ್ಗಳಾಗಿ ಬೆಳದು ನಿಂತರು. ಅದೇ ರೀತಿ ಬೆಳೆದಂತಹ ಮಹಿಳೆಯೊಬ್ಬಳು ಹನಿ ಟ್ರ್ಯಾಪ್ ಮಾಡಿದಂತಹ ರೋಚಕ ಕಥೆ ಇದು.
ನಮ್ರ ಎಂಬಾಕೆ ರಿಲ್ಸ್ ಗಳನ್ನು ಹಾಗೂ ಟಿಕ್ ಟಾಕ್ ನಲ್ಲಿ ವಿಡಿಯೋಗಳನ್ನು ಮಾಡುವ ಮೂಲಕ ದೆಹಲಿಯಲ್ಲಿ ರಾತ್ರೋರಾತ್ರಿ ಸ್ಟಾರ್ ಅದಳು. ಈಕೆಯ ಇನ್ಸ್ಟಾಗ್ರಾಮ್ ನಲ್ಲೂ ಸಹ ಸಾಕಷ್ಟು ಫಾಲೋವರ್ಸ್ ಗಳು ಇದ್ದಾರೆ. ಈಕೆಯ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕುವ ಮೂಲಕ ಸ್ಟಾರ್ ಆಗಿ ಬೆಳೆದು ನಿಂತಳು.

ಈಕೆಯನ್ನು ಹುಡುಕಿಕೊಂಡು ಜಾಹೀರಾತುಗಳು ಬರಲು ಮುಂದಾದವು. ಇದರಿಂದ ಈಕೆಗೆ ಹೆಸರು ಮತ್ತು ಹಣ ಎರಡು ಲಭ್ಯವಾಯಿತು. ಮನುಷ್ಯನಿಗೆ ಎಷ್ಟಿದ್ದರೂ ಸಾಲದು ಆಸೆ ಎಂಬುದು ಯಾರನ್ನು ಬಿಡುವುದಿಲ್ಲ ಎಂಬುದಕ್ಕೆ ಈಕೆ ಒಂದು ಉದಾಹರಣೆ. ಪ್ರಸಿದ್ಧಿ ಪಡೆದರು ಕೈ ತುಂಬಾ ಹಣ ಬಂದರೂ ಇನ್ನೂ ಹೆಚ್ಚು ಹಣಕ್ಕಾಗಿ ನೀಚ ಕೆಲಸಕ್ಕೆ ಮುಂದಾಗುತ್ತಾಳೆ.

ಕೆಲವು ದಿನಗಳ ಹಿಂದೆ ಉದ್ಯಮಿ ಒಬ್ಬರು ಜಾಹೀರಾತನ್ನು ಕೊಡುವುದಕ್ಕಾಗಿ ಈಕೆಯನ್ನು ಭೇಟಿಯಾಗುತ್ತಾರೆ. ಆತ ಹಣವಂತ ಎಂದು ತಿಳಿದ ನಂತರ ನಮ್ರ ಆತನ ವಿರುದ್ಧ ಸ್ಕೆಚ್ ಅನ್ನು ಹಾಕುತ್ತಾಳೆ.  ಸಲುಗೆಯಿಂದ ಮಾತನಾಡಿಸಿಕೊಂಡು ಆತನನ್ನು ಹೋಟೆಲ್ ಒಂದಕ್ಕೆ ಕರೆಸಿಕೊಳ್ಳುತ್ತಾಳೆ. ಹೋಟೆಲ್ ನಲ್ಲಿ ಆತನಿಗೆ ಕಂಠಪೂರ್ತಿ ಕುಡಿಸಿ ಆತ ಮಲಗಿದ ನಂತರ ಈಕೆಯೂ ಸಹ ಪಕ್ಕದಲ್ಲಿ ಮಲಗಿ ವಿಡಿಯೋಗಳನ್ನು ಚಿತ್ರಿಸಿಕೊಂಡಿರುತ್ತಾಳೆ. ಇಂತಹ ಸಂದರ್ಭದಲ್ಲಿ ನಮ್ರಾಳಿಗೆ ಆಕೆಯ ಗಂಡನೇ ಸಹಾಯ ಮಾಡಿರುತ್ತಾನಂತೆ.

ಚಿತ್ರಿಸಿಕೊಂಡಿರುವ ವಿಡಿಯೋಗಳನ್ನು ಇಟ್ಟುಕೊಂಡು ಈಕೆ ತನ್ನ ಅಸಲಿ ಕಹಾನಿಯನ್ನು ಶುರು ಮಾಡುತ್ತಾಳೆ. ಮೊದಲಿಗೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುತ್ತೇನೆ ಎಂದು ಹೇಳಿ ಲಕ್ಷ ಲಕ್ಷ ಹಣ ಕ್ಕೆ ಬೇಡಿಕೆ ಇಡುತ್ತಾಳೆ. ಗಾಬರಿಗೊಂಡ ಉದ್ಯಮಿ ಹಣ ನೀಡಿರುತ್ತಾನೆ. ಇನ್ನೂ ಹೆಚ್ಚು ಹಣ ಬೇಕೆಂಬ ಆಸೆಗೆ ಬಿದ್ದ ನಮ್ರ ಮತ್ತು ಆಕೆಯ ಗಂಡ ಮತ್ತೆ ಉದ್ಯಮಿಯ ಬಳಿ ಹಣಕ್ಕೆ ಬೇಡಿಕೆ ಇಡಲು ಮುಂದಾಗುತ್ತಾರೆ ಕೊಡದಿದ್ದಲ್ಲಿ ವಿಡಿಯೋ ಆಧಾರದ ಮೇಲೆ ರೇಪ್ ಕೇಸ್ ದಾಖಲಿಸುವುದಾಗಿ ಬೆದರಿಸಿರುತ್ತಾರೆ.

ಈ ಸಂದರ್ಭದಲ್ಲಿ ಅವರು ಕೇಳಿರುವುದು 80 ಲಕ್ಷವಾಗಿರುತ್ತದೆ. ಗಾಬರಿಗೊಂಡ ಉದ್ಯಮಿ ದಿಕ್ಕು ತೋಚದೆ ಠಾಣೆಯ ಮೆಟ್ಟಿಲೇರುತ್ತಾನೆ. ಉದ್ಯಮಿ ನಡೆದ ಎಲ್ಲಾ ಘಟನೆಯನ್ನು ಪೊಲೀಸರ ಬಳಿ ವಿವರಿಸಿ ತನಗಾಗಿರುವ ಅನ್ಯಾಯದ ಬಗ್ಗೆ ಹಾಗೂ ಈತನು ಈಗಾಗಲೇ ನೀಡಿರುವ ಹಣದ ಬಗ್ಗೆ ಮತ್ತು ಆಕೆ ನಡೆಸಿರುವ ಹನಿ ಟ್ರ್ಯಾಪ್ ನ ಸಂಪೂರ್ಣ ಕಹಾನಿಯನ್ನು ವಿವರಿಸಿರುತ್ತಾನೆ. ಈತನ ದೂರಿನ ಆಧಾರದ ಮೇಲೆ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸುತ್ತಾರೆ ಆಗಲೇ ಇನ್ನಷ್ಟು ಅಚ್ಚರಿಯ ವಿಚಾರಗಳು ಹೊರ ಬೀಳುತ್ತವೆ.

ಅದೇನೆಂದರೆ ಈಕೆ ಹನಿ ಟ್ರ್ಯಾಪ್ ಮಾಡಿರುವುದು ಈ ಉದ್ಯಮಿಗೆ ಮೊದಲೇನಲ್ಲ. ಈಕೆಯ ಫೋನಿನಲ್ಲಿ ಸಾಕಷ್ಟು ಉದ್ಯಮಿಗಳ ವಿಡಿಯೋಗಳು ಸಹ ಇವೆ ಎಂದು ತನಿಕೆಯಲ್ಲಿ ಬೆಳಕಿಗೆ ಬಂದಿರುತ್ತದೆ.
ಸದ್ಯ ಪೋಲೀಸರು ನಮ್ರ ವಿರುದ್ಧ ದೂರನ್ನು ದಾಖಲಿಸಿ, ಈಕೆಯನ್ನು ಜೈಲಿಗೆಟ್ಟಿದ್ದಾರೆ ಹಾಗೂ ಈಕೆಗೆ ಸಾತ್ ನೀಡುತ್ತಿದ್ದ ಈಕೆಯ ಗಂಡನ ವಿರುದ್ಧ ದೂರು ದಾಖಲಾಗಿದ್ದು ಆತ ತಲೆಮರಿಸಿಕೊಂಡಿರುತ್ತಾನೆ.

ಭ್ರಷ್ಟರ ಬೇಟೆ

Recent Posts

ಜೈಲಿನಲ್ಲೇ ಮಹಿಳಾ ಕೈದಿ ಗರ್ಭಿಣಿ! ಹೋಟ್‌ವಾರ್ ಜೈಲಿನಲ್ಲಿ ಭಾರೀ ಸಂಚಲನ; ಭದ್ರತಾ ಲೋಪದ ಬಗ್ಗೆ ತನಿಖೆ

ರಾಂಚಿ: ಜೈಲಿನೊಳಗೆ ಮಹಿಳಾ ಕೈದಿಯೊಬ್ಬರು ಗರ್ಭಿಣಿಯಾಗಿರುವ ಆಘಾತಕಾರಿ ಘಟನೆ ಜಾರ್ಖಂಡ್‌ನ ಹೋಟ್‌ವಾರ್ ಕೇಂದ್ರ ಕಾರಾಗೃಹದಲ್ಲಿ ಬೆಳಕಿಗೆ ಬಂದಿದೆ. ಶಿಕ್ಷೆ ಅನುಭವಿಸುತ್ತಿದ್ದ…

2 days ago

ಪ್ರೀತಿಯ ಬಲೆಗೆ ಬಿದ್ದ ಹೋಟೆಲ್ ಉದ್ಯಮಿ! ಮದುವೆಯ ಆಮಿಷವೊಡ್ಡಿ ₹5 ಕೋಟಿ ಲೂಟಿ ಆರೋಪ; ಮಹಿಳಾ ಡಿಎಸ್‌ಪಿ ಅಮಾನತು!

ಛತ್ತೀಸ್‌ಗಢ: ಮೋಹಕ ರೂಪದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಪ್ರೀತಿಯ ಬಲೆಗೆ ಬಿದ್ದ ಹೋಟೆಲ್ ಉದ್ಯಮಿಯೊಬ್ಬರು ಕೋಟ್ಯಂತರ ರೂಪಾಯಿ ಕಳೆದುಕೊಂಡಿರುವ ಆರೋಪ…

2 days ago

ಮೂವರು ಮಕ್ಕಳ ತಾಯಿಯ ಕೊಲೆ! ಹಣಕಾಸಿನ ವಿಚಾರಕ್ಕೆ ಪ್ರಿಯಕರನಿಂದಲೇ ಭೀಕರ ಕೃತ್ಯ; 28 ವರ್ಷದ ಆರೋಪಿ ಅರೆಸ್ಟ್!

ತಮಿಳುನಾಡು: ಮೂವರು ಮಕ್ಕಳ ತಾಯಿಯಾಗಿದ್ದ 24 ವರ್ಷದ ಮಹಿಳೆಯೊಬ್ಬರನ್ನು ಪ್ರಿಯಕರನೇ ಹ*ತ್ಯೆ ಮಾಡಿರುವ ಆಘಾತಕಾರಿ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ…

2 days ago

ಚಕ್ರದ ನಟ್ ಕಳಚಿ ಹೊಲಕ್ಕೆ ನುಗ್ಗಿದ ಸಾರಿಗೆ ಬಸ್: 40ಕ್ಕೂ ಹೆಚ್ಚು ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು!

ಕೊಪ್ಪಳ: ಸಾರಿಗೆ ಬಸ್‌ನ ಮುಂಭಾಗದ ಚಕ್ರದ ಕಮಾನ್ ಸ್ಪ್ರಿಂಗ್ ಪಟ್ಟಿಯ ನಟ್ ಕಳಚಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್…

2 days ago

ಸಾಗುವಾನಿ ಮರದ ಅಕ್ರಮ ಸಾಗಾಟ ಪತ್ತೆ: ಮೂರು ಬೊಲೆರೋ ವಾಹನಗಳ ಸಹಿತ ಲಕ್ಷಾಂತರ ಮೌಲ್ಯದ ಮರ ಜಪ್ತಿ

ಲಿಂಗಸುಗೂರು: ಅರಣ್ಯ ಸಂಪತ್ತಾದ ಸಾಗುವಾನಿ ಮರವನ್ನು ಅಕ್ರಮವಾಗಿ ಕಡಿದು ಸಾಗಿಸುತ್ತಿದ್ದ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದು, ಮೂರು ಬೊಲೆರೋ ಗೂಡ್ಸ್ ವಾಹನಗಳ…

3 days ago

12 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಖಂಡಿಸಿ ನಾಳೆ ಮುಂಡಗೋಡ ಬಂದ್‌ಗೆ ಕರೆ!

ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ಮುಂಡಗೋಡ: 12 ವರ್ಷದ ಬಾಲಕಿಯ ಮೇಲೆ ನಡೆದಿರುವ ಅಮಾನವೀಯ…

3 days ago