ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಅಡವಿ ಸೋಮನಾಳ ಗ್ರಾಮದಲ್ಲಿರುವ ದ್ಯಾಮವ್ವನ ಗುಡಿ ಓಣಿಯ ಜನರಿಗೆ ಸುಮಾರು ಎಂಟು ದಿನಕ್ಕೆ ಒಮ್ಮೆ ಕುಡಿಯುವ ನೀರು ಬಿಡುತ್ತಾರೆ, ಜನರು ಹಳ್ಳದ ಕಲುಷಿತ ನೀರನ್ನು ಸೇವನೆ ಮಾಡುತ್ತಿದ್ದಾರೆ. ಇದರಿಂದ ರೋಗ ರುಜಿನಗಳಿಗೆ ತುತ್ತಾಗುವ ಸಾಧ್ಯತೆಗಳಿವೆ. ಓಣಿಯ ವೃದ್ಧ ಮಹಿಳೆಯೊಬ್ಬರು ಈ ವಿಚಾರದ ಬಗ್ಗೆ ಹೇಳಿದಾಗ ವಯಸ್ಸಾಗಿದೆ ಹಳ್ಳಕ್ಕೆ ಹೋಗಿ ನೀರು ತರಲು ಸಹ ಆಗುವುದಿಲ್ಲ ನಾನೇನು ಮಾಡಲಿ, ದಿನಗೂಲಿ ಕೆಲಸ ಮಾಡಿ ದುಡಿದು ಬಂದರು ನಾವೆಲ್ಲಾ ದಿನಾಲೂ ನೀರಿಗಾಗಿಯೇ ಪರದಾಡುವಂತಾಗಿದೆ ಎಂದರು. ಹಲವು ಬಾರಿ ಪಿಡಿಓ ರವರ ಗಮನಕ್ಕೆ ತಂದರು ಯಾವುದೇ ಪ್ರಯೋಜನವಿಲ್ಲ, ಕರೆ ಮಾಡಿದಾಗ ಯಾವಾಗಲೂ ಫೋನ್ ಸ್ವಿಚ್ ಆಫ್ ಇರುತ್ತದೆ. ಇದೇ ರೀತಿ ಮುಂದುವರೆದರೆ ನಾವೆಲ್ಲರೂ ಸೇರಿಕೊಂಡು ಗ್ರಾಮ ಪಂಚಾಯತಿಗೆ ಬೀಗ ಹಾಕಿ ಹೋರಾಟ ಮಾಡಬೇಕಾಗುತ್ತದೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿರುತ್ತಾರೆ.
15 ದಿನಗಳ ಹಿಂದೆ ಗ್ರಾಮಕ್ಕೆ ಆಗಮಿಸಿದ್ದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಮಿ ಚೌಧರಿ ರವರಿಗೆ ಗ್ರಾಮಸ್ಥರು ನೀರಿನ ಸಮಸ್ಯೆಯ ಬಗ್ಗೆ ತಿಳಿಸಿದಾಗ ಅಲ್ಲಿಯೇ ಇದ್ದ ಅಧಿಕಾರಿಗಳಿಗೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡು ಈ ಕೂಡಲೇ ಸರಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಆದರೆ ಅಧಿಕಾರಿಗಳು ಮಾತ್ರ ಇದರ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ. ಓಣಿಯ ಮಹಿಳೆಯರು ಸುಮಾರು ಎರಡು ದಿನಗಳಿಂದ ನೀರಿಲ್ಲದ ಕಾರಣ ಹಳ್ಳದ ಕೊಳಚೆ ನೀರನ್ನು ಸೇವನೆ ಮಾಡುತ್ತಿದ್ದಾರೆ. ಮಹಿಳಾ ಆಯೋಗದ ಅಧ್ಯಕ್ಷೆಯವರು ಸಹ ಸಮಸ್ಯೆ ಬಗೆ ಗಮನಹರಿಸಲು ಹೇಳಿ ಹದಿನೈದು ದಿನ ಕಳೆದು ಹೋದರು ಇಲ್ಲಿಯವರೆಗೂ ಕೆಲಸ ಆಗಿಲ್ಲ, ಇದರ ಬಗ್ಗೆ ಗ್ರಾಮ ಪಂಚಾಯತಿಯವರ ಗಮನಕ್ಕೆ ಬಂದರೂ ಸಹ ಇವರು ತಮ್ಮ ಕೆಲಸ ಮಾಡುತ್ತಿಲ್ಲ, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿರವರು ಸರಿ ಪಡಿಸಿ ಎಂದು ಹೇಳಿದರೂ ಸಹ ಅವರ ಮಾತಿಗೆ ಬೆಲೆ ಇಲ್ಲವಾ? ಗ್ರಾಮ ಅಭಿವೃದ್ಧಿಗಾಗಿಯೇ ನೇಮಿಸಿರುವ ಈ ಅಧಿಕಾರಿಯೂ ಗ್ರಾಮಾಭಿವೃದ್ಧಿ ಏಕೆ ಮಾಡುತ್ತಿಲ್ಲ?ಕುಡಿಯುವ ನೀರನ್ನೇ ಒದಗಿಸುವುದಕ್ಕೆ ಇವರಿಗೆ ಯೋಗ್ಯತೆ ಇಲ್ಲವೆಂದರೆ, ಬೇರೆ ಯಾವ ಅಭಿವೃದ್ಧಿ ಗ್ರಾಮದಲ್ಲಿ ಮಾಡುತ್ತಾರೆ? ಮೇಲಾಧಿಕಾರಿಗಳು ಇದರ ಬಗ್ಗೆ ಆದಷ್ಟು ಬೇಗ ಎಚ್ಚೆತ್ತುಕೊಳ್ಳಲಿಲ್ಲವೆಂದರೆ ಗ್ರಾಮಸ್ಥರು ಹೋರಾಟಕ್ಕೆ ಮುಂದಾಗುತ್ತೇವೆ ಎಂದಿದ್ದಾರೆ ಎಚ್ಚರ! ವರದಿ: ಸಂಗಪ್ಪ ಚಲವಾದಿ
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…