Latest

ಸಾವಿನ ದವಡೆಯಲ್ಲಿ ನಿಂತು ವಿಡಿಯೋ ಮಾಡಿದ ಯುವಕ; ಮನಕಲಕುವಂತಿದೆ ದೃಶ್ಯ.

ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಅವಶೇಷಗಳಡಿ ಸಿಲುಕಿಕೊಂಡಿದ್ದ 17 ವರ್ಷದ ವಿದ್ಯಾರ್ಥಿಯು ಸೆರೆಹಿಡಿದಿರುವ ಭೀಕರ ಕ್ಷಣಗಳು ಟರ್ಕಿ ದೇಶದ ಜನರ ಹೃದಯವನ್ನು ಕರಗಿಸಿದೆ.
ವಿದ್ಯಾರ್ಥಿ ತಾಹಾ ಎರ್ಡೆಮ್ ಮತ್ತು ಅವರ ಕುಟುಂಬವು ಫೆ.6 ರ ಮುಂಜಾನೆ ಅವರ ತವರು ಆದಿಯಮಾನ್‌ನಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದಾಗ ಅವರು ವಾಸವಿದ್ದ ನಾಲ್ಕು ಅಂತಸ್ತಿನ ಅಪಾರ್ಟ್ಮೆಂಟ್ ಕಟ್ಟಡ ಭೂಕಂಪದಿಂದ ಕುಸಿದು ಬಿತ್ತು.
ಸೆಕೆಂಡುಗಳಲ್ಲಿ, ತಾಹಾ, ಅವನ ತಾಯಿ, ತಂದೆ ಮತ್ತು ಕಿರಿಯ ಸಹೋದರ ಮತ್ತು ಸಹೋದರಿ ಕಟ್ಟಡದೊಂದಿಗೆ ಕೆಳಕ್ಕೆ ಬಿದ್ದರು. ಟನ್‌ಗಟ್ಟಲೆ ಕಲ್ಲುಮಣ್ಣುಗಳ ಅಡಿಯಲ್ಲಿ ಅವರು ಸಿಕ್ಕಿಬಿದ್ದರು. ಈ ವೇಳೆ ತಾಹಾ ತನ್ನ ಸೆಲ್‌ಫೋನ್ ತೆಗೆದುಕೊಂಡು ಅಂತಿಮ ವಿದಾಯವನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದ್ದಾನೆ. ತನ್ನ ಮರಣದ ನಂತರ ಫೋನ್ ಪತ್ತೆಯಾಗುತ್ತದೆ ಎಂದು ಆಶಿಸಿ, “ಇದು ನಾನು ನಿಮಗಾಗಿ ಚಿತ್ರೀಕರಣ ಮಾಡುವ ಕೊನೆಯ ವೀಡಿಯೊ ಎಂದು ನಾನು ಭಾವಿಸುತ್ತೇನೆ” ಎಂದು ತನ್ನ ಸುತ್ತಮುತ್ತ ಕಟ್ಟಡದ ಅವಶೇಷ ಬಿದ್ದ ಕಿರಿದಾದ ಜಾಗದಲ್ಲಿ ತಾಹಾ ವಿಡಿಯೋ ರೆಕಾರ್ಡ್ ಮಾಡಿದ್ದಾನೆ
“ನಾನು ಪಶ್ಚಾತ್ತಾಪಪಡುವ ಅನೇಕ ವಿಷಯಗಳಿವೆ, ದೇವರು ನನ್ನ ಎಲ್ಲಾ ಪಾಪಗಳನ್ನು ಕ್ಷಮಿಸಲಿ, ನಾನು ಇಂದು ಜೀವಂತವಾಗಿ ಇಲ್ಲಿಂದ ಹೊರಬಂದರೆ ನಾನು ಮಾಡಲು ಬಯಸುವ ಅನೇಕ ಕೆಲಸಗಳಿವೆ, ನಾವು ಇನ್ನೂ ನಡುಗುತ್ತಿದ್ದೇವೆ, ನನ್ನ ಕೈ ಅಲುಗಾಡುತ್ತಿಲ್ಲ, ಇದು ಭೂಕಂಪವಾಗಿದೆ.” ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ಹಾಗೂ ವಿಡಿಯೋ ಕೊನೆಯಲ್ಲಿ ಅರೇಬಿಕ್ ಭಾಷೆಯಲ್ಲಿ ದೇವರನ್ನು ಜಪಿಸುತ್ತಾನೆ.
ಕೈ ಕಾಲನ್ನೂ ಆಡಿಸಲಾಗದೇ ಬದುಕಿಗಾಗಿ ಹಾತೊರೆಯುತ್ತಾ ನಡುಗುತ್ತಿದ್ದ ಕಟ್ಟಡದ ಅವಶೇಷಗಳ ಮಧ್ಯೆ ವಿಡಿಯೋ ಮಾಡಿದ್ದು ಇದೀಗ ಅದು ವೈರಲ್ ಆಗ್ತಿದೆ. ನಾಶವಾದ ಕಟ್ಟಡದಿಂದ ತಾಹಾ ನನ್ನು ರಕ್ಷಿಸಲಾಗಿದೆ ಹಾಗೂ ಕೆಲವು ಗಂಟೆಗಳ ಬಳಿಕ ಅವರ ಕುಟುಂಬದವರನ್ನು ರಕ್ಷಿಸಿದ್ದು ಸಾವಿನ ದವಡೆಯಿಂದ ಪಾರಾದ ಕುಟುಂಬ ಈಗ ಮತ್ತೆ ಒಂದಾಗಿದೆ.

ಭ್ರಷ್ಟರ ಬೇಟೆ

Recent Posts

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

4 hours ago

ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ 24 ಕಬ್ಬಿಣದ ಗೇಟು ಕಳವು; ₹2.40 ಲಕ್ಷ ನಷ್ಟ

ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…

8 hours ago

ಮದ್ದೂರಿನಲ್ಲಿ ನಿವೃತ್ತ BCM ಹಾಸ್ಟೆಲ್ ವಾರ್ಡನ್ ಮನೆ ಮೇಲೆ ಲೋಕಾಯುಕ್ತ ದಾಳಿ: ಮಿನಿ ಬಾರ್, ಚಿನ್ನಾಭರಣ ಹಾಗೂ ಹಾಸ್ಟೆಲ್ ಸಾಮಗ್ರಿಗಳ ರಾಶಿ ಪತ್ತೆ

ಮಂಡ್ಯ: ಮದ್ದೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಹಾಸ್ಟೆಲ್ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್…

2 days ago

ಸಿಂಧನೂರಿನಲ್ಲಿ ಮಗುವಿನ ಎದುರೇ ತಾಯಿ ಬರ್ಬರ ಹತ್ಯೆ ಪ್ರಕರಣ: ಪ್ರಿಯಕರ ಶುಭಮ್ ಬಂಧನ, ಪತಿಯ ವಿಚಾರಣೆ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೊರವಲಯದಲ್ಲಿ ಒಂದೂವರೆ ವರ್ಷದ ಕಂದಮ್ಮನ ಎದುರೇ 26 ವರ್ಷದ ಗೃಹಿಣಿ ಸ್ನೇಹಾ ಎಂಬಾಕೆಯ ಬರ್ಬರ…

2 days ago

ಬಿಹಾರದಲ್ಲಿ ಬೆಚ್ಚಿಬೀಳಿಸುವ ಕೃತ್ಯ: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯಶಿಕ್ಷಕನ ಬಂಧನ, ಪೋಕ್ಸೊ ಕೇಸ್ ದಾಖಲು

ಬಿಹಾರದ ನವಾಡಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮುಖ್ಯಶಿಕ್ಷಕನೊಬ್ಬ 8ನೇ ತರಗತಿಯ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ…

2 days ago

ಕಲಬುರಗಿಯಲ್ಲಿ ಜೆಸ್ಕಾಂ AEE ರಾಜೇಶ್ವರಿ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಕಲಬುರಗಿ: ನಿಗದಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ರಾಜೇಶ್ವರಿ ಅವರ…

2 days ago