ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ವಲಸೆ ನೀತಿಗಳ ವಿರುದ್ಧ ನಡೆದ ಪ್ರತಿಭಟನೆ ಗಲಭೆಯ ರೂಪ ಪಡೆದಿದ್ದು, ಪತ್ರಕರ್ತರ ಮೇಲೆ ಪೊಲೀಸರ ದೌರ್ಜನ್ಯ ನಡೆದಿದೆ. ಈ ಹಿನ್ನಲೆಯಲ್ಲಿ ಆಸ್ಟ್ರೇಲಿಯಾ ಮೂಲದ 9 ನ್ಯೂಸ್ ವಾಹಿನಿಯ ವರದಿಗಾರ್ತಿ ಲಾರೆನ್ ಟೊಮಾಸಿ ಅವರು ಲೈವ್ ವರದಿ ಮಾಡುತ್ತಿದ್ದಾಗ ಪೊಲೀಸರು ರಬ್ಬರ್ ಗುಂಡು ಹಾರಿಸಿದ್ದು, ಅವರು ನೆಲಕ್ಕೆ ಬಿದ್ದರು. ಈ ಘಟನೆ ನೇರ ಪ್ರಸಾರವಾಗುತ್ತಿದ್ದ ವೇಳೆಲೇ ನಡೆದಿದೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ತಕ್ಷಣವೇ ಪೊಲೀಸರು ಪತ್ರಕರ್ತೆಯ ಮೇಲೆ ಗುಂಡು ಹಾರಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಇಂಗ್ಲೆಂಡ್‌ನ 60 ವರ್ಷದ ಛಾಯಾಗ್ರಾಹಕ ನಿಕ್ ಸ್ಟರ್ನ್ ಅವರೂ ಗಾಯಗೊಂಡಿದ್ದಾರೆ. ಅವರು ಪತ್ರಕರ್ತ ಎಂದು ಗುರುತಿಸಿಕೊಂಡಿದ್ದರೂ ಕೂಡಾ, ಅವರ ಕಾಲಿಗೆ ರಬ್ಬರ್ ಗುಂಡು ತಗುಲಿ ಗಾಯವಾಗಿದೆ. “ಅದು ತುಂಬಾ ನೋವುಂಟುಮಾಡಿದ ಕ್ಷಣ. ನಾನು ತಕ್ಷಣ ನೆಲಕ್ಕೆ ಬಿದ್ದೆ,” ಎಂದು ಅವರು ತಿಳಿಸಿದ್ದಾರೆ.
ಲಾಸ್ ಏಂಜಲೀಸ್ ಪೊಲೀಸರು ಈ ಪ್ರತಿಭಟನೆ ತೀವ್ರ ಗದ್ದಲಕ್ಕೆ ಕಾರಣವಾಗಿದೆಯೆಂದು ಹೇಳಿದ್ದು, ಸಾರ್ವಜನಿಕ ಹಾಗೂ ಅಧಿಕಾರಿಗಳ ಸುರಕ್ಷತೆಗಾಗಿ ತಕ್ಷಣ ಕ್ರಮ ತೆಗೆದುಕೊಳ್ಳಲಾಗಿದೆಯೆಂದು ವಿವರಿಸಿದ್ದಾರೆ. ಗಲಭೆ ವೇಳೆ ಪ್ರತಿಭಟನಾಕಾರರು ಬಾಟಲಿ, ಪಟಾಕಿ ಹಾಗೂ ಕಾಂಕ್ರೀಟ್ ತುಂಡುಗಳನ್ನು ಎಸೆದ ಕಾರಣ ಪರಿಸ್ಥಿತಿ ನಿಯಂತ್ರಣಕ್ಕೆ ಬರುವುದು ಕಷ್ಟವಾಗಿತ್ತು ಎಂದು ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ವಿದೇಶಾಂಗ ಇಲಾಖೆ ಈ ಘಟನೆಗೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿ, “ಪತ್ರಕರ್ತರು ಭದ್ರತೆಯಿಂದ ತಮ್ಮ ಕೆಲಸ ನಿರ್ವಹಿಸಬೇಕೆಂಬುದು ಮುಖ್ಯ,” ಎಂದು ಹೇಳಿದೆ.
ಇದು ಪತ್ರಕರ್ತರ ಸುರಕ್ಷತೆ ಮತ್ತು ಸಂವಿಧಾನಾತ್ಮಕ ಹಕ್ಕುಗಳ ಕುರಿತಾಗಿ ಗಂಭೀರ ಚರ್ಚೆ ಆರಂಭಿಸಿರುವ ಘಟನೆ.
ಶಿಕ್ಷಣಕ್ಕೆ ಬೆಂಬಲ ನೀಡಿ ಪತ್ನಿಗೆ ಸರ್ಕಾರಿ ಉದ್ಯೋಗ ಸಿಗುವಂತೆ ಮಾಡಿದ ಗಂಡನೊಬ್ಬ, ನಂತರ ಪತ್ನಿಯ ನಿರ್ಲಕ್ಷ್ಯ ಮತ್ತು ಕಿರುಕುಳದಿಂದ ಮನನೊಂದು…
ಚಿಕ್ಕಮಗಳೂರು ಜಿಲ್ಲೆಯ ಕಳಸದಿಂದ ಬಾಳೆಹೊನ್ನೂರುವರೆಗೆ ಭದ್ರಾ ನದಿ ಪ್ರದೇಶದಲ್ಲಿ ಇತ್ತೀಚೆಗೆ ಕಡಿಮೆ ಎತ್ತರದಲ್ಲಿ ಹಾರಾಡುತ್ತಿದ್ದ ನಿಗೂಢ ವಿಮಾನ ಸಾರ್ವಜನಿಕರಲ್ಲಿ ಭೀತಿ…
ಧಾರವಾಡ ಜಿಲ್ಲೆಯ ರಾಮಾಪುರ ಅರಣ್ಯ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕ್ಷೇತ್ರದ…
ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಹತ್ವದ ಮಾಹಿತಿ ಬಹಿರಂಗವಾಗಿದೆ. ವಿಧಾನಸಭೆಯಲ್ಲಿ ಸಂಡೂರು ಕ್ಷೇತ್ರದ ಶಾಸಕ…
ಕರ್ನಾಟಕ ಸರ್ಕಾರವು ನಾಗರಿಕ ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಮಹತ್ವದ ಹೊಸ ನಿಯಮ ಜಾರಿಗೆ ತಂದಿದೆ. ಇನ್ಮುಂದೆ ಸರ್ಕಾರಿ ನೌಕರರು ಮುಂಬಡ್ತಿ…
ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಚಿತ್ರದ ಸದ್ದು ಭಾರತದ ಬಾಕ್ಸ್ ಆಫೀಸ್‌ನಲ್ಲಿ ಕೇಳಿಬರುತ್ತಿರುವಂತೆಯೇ, ಅದರ ಪ್ರಭಾವ…