ಭಾರಿ ಗಾತ್ರದ ಹೆಬ್ಬಾವು ಒಂದು 54 ವರ್ಷ ಮಹಿಳೆಯೊಬ್ಬಳನ್ನು ಜೀವಂತವಾಗಿ ನುಂಗಿರುವ ಭಯಾನಕ ಘಟನೆ ಇಂಡೋನೇಷ್ಯಾದಲ್ಲಿ ನಡೆದಿರುವುದಾಗಿ ಮಂಗಳವಾರ ವರದಿಯಾಗಿದೆ.
ಮೃತ ಮಹಿಳೆಯನ್ನು ಜಹ್ರಾಹ್ (54) ಎಂದು ಗುರುತಿಸಲಾಗಿದೆ.
ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ನಾಪತ್ತೆಯಾದಾಗ, ಆಕೆಯನ್ನು ಕುಟುಂಬಸ್ಥರು ಹುಡುಕಲು ಮುಂದಾದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಮೃತ ಜಹ್ರಾಹ್ ಶುಕ್ರವಾರ ಜಾಂಬಿ ಪ್ರಾಂತ್ಯದ ತೋಟದಲ್ಲಿ ರಬ್ಬರ್ ಸಂಗ್ರಹಿಸುವಾಗ ನಾಪತ್ತೆಯಾಗಿದ್ದರು. ತುಂಬಾ ಹೊತ್ತಾದರೂ ಜಹ್ರಾಹ್ ಮನೆಗೆ ಬಾರದಿದ್ದಾಗ, ಚಿಂತೆಗೀಡಾದ ಕುಟುಂಬ, ಹುಡುಕಲು ಮುಂದಾದರು. ಎರಡು ದಿನಗಳ ಬಳಿಕ ಅವರ ಕಣ್ಣಿಗೆ ಹೊಟ್ಟೆ 22 ಅಡಿ ಉದ್ದದ ಒಂದು ಬೃಹತ್ ಹೆಬ್ಬಾವು ಕಣ್ಣಿಗೆ ಬಿದ್ದಿತು. ಗಾಬರಿಗೊಂಡ ಸ್ಥಳೀಯರು ಅದರ ಹೊಟ್ಟೆಯಲ್ಲಿ ದೊಡ್ಡ ಉಬ್ಬುವಿಕೆಯನ್ನು ಗಮನಿಸಿದರು ಮತ್ತು ಹೊಟ್ಟೆಯನ್ನು ಸೀಳಿದಾಗ ಒಳಗೆ ಜಹ್ರಾಹ್ ಮೃತದೇಹ ಪತ್ತೆಯಾಗಿದೆ.
ಇದಾದ ಬಳಿಕ ಆಕ್ರೋಶಗೊಂಡ ಸ್ಥಳೀಯರು ಹೆಬ್ಬಾವಿನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…