Latest

ಮರುಭೂಮಿಯಲ್ಲಿ ಚಿನ್ನ ತುಂಬಿದ ಹಡಗು

ಐನೂರು ವರ್ಷಗಳ ಹಿಂದೆ ಕಣ್ಮರೆಯಾದ ಹಡಗೊಂದು ನೈಋತ್ಯ ಆಫ್ರಿಕಾದ ಮರುಭೂಮಿಯಲ್ಲಿ ಪತ್ತೆಯಾಗಿದೆ. ಪುರಾತತ್ತ್ವ ಶಾಸ್ತ್ರದ ಸಂಶೋಧನೆಯಲ್ಲಿ ಈ ಹಡಗು ಕಂಡು ಬಂದಿದ್ದು, ವಿಶೇಷತೆ ಏನೆಂದರೆ ಹಡಗಿನಲ್ಲಿ ಸುಮಾರಷ್ಟು ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಬೊಮ್ ಜೀಸಸ್ (ದಿ ಗುಡ್ ಜೀಸಸ್) ಹಡಗು ಪೋರ್ಚುಗಲ್‌ನ ಲಿಸ್ಬನ್‌ನಿಂದ ಶುಕ್ರವಾರ, ಮಾರ್ಚ್ 7, 1533 ರಂದು ನೌಕಾಯಾನ ಮಾಡಿತ್ತು. ಅಂದರೆ ಸುಮಾರು ಐನೂರು ವರ್ಷಗಳ ಹಿಂದೆ ನೌಕಾಯಾನಕ್ಕೆ ಹೋಗಿದ್ದ ಹಡಗು ಕಣ್ಮರೆಯಾಗಿತ್ತು. ನಂತರ 2008ರಲ್ಲಿ ಅದರ ಅವಶೇಷಗಳು ನಮೀಬಿಯಾದ ಮರುಭೂಮಿಯಲ್ಲಿ ವಜ್ರ ಗಣಿಗಾರಿಕೆ ಕಾರ್ಯಾಚರಣೆಯ ಸಮಯದಲ್ಲಿ ಪತ್ತೆಯಾಗಿತ್ತು.
ಪ್ರಸ್ತುತ ಪೂರ್ತಿ ಹಡಗು ನೈಋತ್ಯ ಆಫ್ರಿಕಾದ ಮರುಭೂಮಿಯಲ್ಲಿ ಪತ್ತೆಯಾಗಿದೆ. ಭಾರತಕ್ಕೆ ಚಿನ್ನ ಮತ್ತು ತಾಮ್ರವನ್ನು ಈ ಹಡಗು ಹೊತ್ತು ಬರುತ್ತಿತ್ತು ಎನ್ನಲಾಗಿದೆ. ಆದರೆ ಭೀಕರ ಚಂಡಮಾರುತಕ್ಕೆ ತುತ್ತಾಗಿದ್ದ ಹಡಗು ನಾಪತ್ತೆಯಾಗಿತ್ತು.
ಈಗ ಮತ್ತೆ ಪತ್ತೆಯಾಗಿರುವ ಬೊಮ್ ಜೀಸಸ್‌ ಹಡಗಿನಲ್ಲಿ ಎರಡು ಸಾವಿರ ಶುದ್ಧ ಚಿನ್ನದ ನಾಣ್ಯಗಳು ಮತ್ತು ಹತ್ತಾರು ಸಾವಿರ ಪೌಂಡ್‌ಗಳ ತಾಮ್ರದ ಗಟ್ಟಿಗಳು ಕಂಡು ಬಂದಿವೆ. ಅಚ್ಚರಿ ಅಂದರೆ ಐನೂರು ವರ್ಷಗಳ ಹಿಂದಿನ ನಾಣ್ಯಗಳು ಸ್ವಲ್ಪವೂ ವಿರೂಪವಾಗದೇ ಹಾಗೆಯೇ ಇವೆ. ಈಗ ಕರಾವಳಿಯ ನೀರು ಕಡಿಮೆಯಾದ ಕಾರಣ ಬೊಮ್ ಜೀಸಸ್ ಮರುಭೂಮಿಯಲ್ಲಿ ಮತ್ತೆ ಕಾಣಿಸಿಕೊಂಡಿದೆ.
ಚಿನ್ನ ಸೇರಿ ಇತರೆ ಬೆಲೆಬಾಳುವ ಸರಕುಗಳು ಪತ್ತೆ. ದಕ್ಷಿಣ ಆಫ್ರಿಕಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾರಿಟೈಮ್ ಆರ್ಕಿಯಾಲಾಜಿಕಲ್ ರಿಸರ್ಚ್‌ನ ಮುಖ್ಯ ಪುರಾತತ್ವಶಾಸ್ತ್ರಜ್ಞ ಡಾ ನೋಲಿ, ದೇಶದ ಕರಾವಳಿಯು ಹಲವು ಚಂಡಮಾರುತಗಳಿಗೆ ಕಾರಣವಾಗಿದೆ. ಹೀಗಾಗಿ, ಹಡಗು ಹಾನಿ ಕಂಡುಬರುತ್ತಿರುವುದು ಅಷ್ಟೇನೂ ಆಶ್ಚರ್ಯಕರ ಬೆಳವಣಿಗೆಯಲ್ಲ ಎಂದು ಹೇಳಿದರು. ಉತ್ಖನನದ ಒಂದು ವಾರದ ನಂತರ, ಚಿನ್ನದಿಂದ ತುಂಬಿದ ನಿಧಿಯ ಪೆಟ್ಟಿಗೆಯು ಕಂಡುಬಂದಿದೆ, ಇದು ಚಿನ್ನದಿಂದ ತುಂಬಿದ ಹಡಗು ಎಂಬ ಪರಿಕಲ್ಪನೆಗೆ ಹೊಸ ಅರ್ಥವನ್ನು ಸೇರಿಸುತ್ತದೆ ಎಂದು ಡಾ ನೋಲಿ ಆಫ್ರೀಕಾದ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದರು.
ಚಿನ್ನ, ತಾಮ್ರದ ಜೊತೆ ಕಂಚಿನ ಬಟ್ಟಲುಗಳು, ಬೆಳ್ಳಿ ನಾಣ್ಯಗಳು ಮತ್ತು ಉದ್ದವಾದ ಲೋಹದ ಕಂಬಗಳು ಕಂಡು ಬಂದಿವೆ. ಹಾಗೆಯೇ ದಿಕ್ಸೂಚಿಗಳು, ಕತ್ತಿಗಳು, ಜ್ಯೋತಿಷ್ಯ ಉಪಕರಣಗಳು ಮತ್ತು ಸಮಯದ ಕ್ಯಾಪ್ಸುಲ್ ಹಡಗಿನಲ್ಲಿ ಪತ್ತೆಯಾಗಿವೆ ಎಂದು ವರದಿಗಳು ತಿಳಿಸಿವೆ.
ಆ ಕಾಲದ ಬಲಿಷ್ಠ ನೌಕೆ ಬೋಮ್ ಜೀಸಸ್‌ನ ಹಡಗಿನ ಇತಿಹಾಸದ ಬಗ್ಗೆ ಹೆಚ್ಚು ತಿಳಿದಿಲ್ಲವಾದರೂ, ಈ ಹಡಗು ಹಿಂದಿನ ಪೋರ್ಚುಗೀಸ್ ಮತ್ತು ಸ್ಪ್ಯಾನಿಷ್ ಹಡಗುಗಳಿಗಿಂತ ದೊಡ್ಡದಾದ, ಹೆಚ್ಚು ಪರಿಣಾಮಕಾರಿ ಮತ್ತು ಹೆಚ್ಚು ಬಾಳಿಕೆ ಬರುವ ನೌಕಾ ಹಡಗುಗಳ ಒಂದು ವರ್ಗದ ಭಾಗವಾಗಿದೆ ಎಂದು ಊಹಿಸಲಾಗಿದೆ. ಈ ಆವಿಷ್ಕಾರದ ಬಳಿಕ ಬೊಮ್ ಜೀಸಸ್ ಅನ್ನು ಉಪ-ಸಹಾರನ್ ಆಫ್ರಿಕಾದ ಪಶ್ಚಿಮ ಕರಾವಳಿಯಲ್ಲಿ ಪತ್ತೆಯಾದ ಅತ್ಯಂತ ಹಳೆಯ ಮತ್ತು ಅತ್ಯಮೂಲ್ಯವಾದ ಹಡಗು ಎನ್ನಲಾಗಿದೆ.
ಹಡಗು ಪತ್ತೆಯಾದ ಸ್ಥಿತಿಯನ್ನು ಗಮನಿಸಿದ ತಜ್ಞರು ಭೀಕರ ಚಂಡಮಾರುತಕ್ಕೆ ಸಿಕ್ಕಿ ಬಂಡೆಗೆ ಗುದ್ದಿದ ಪರಿಣಾಮ ಹಡಗು ದುರಂತ ಸಂಭವಿಸಿದೆ ಎಂದು ಊಹಿಸಿದ್ದಾರೆ. ಕೆಲವೇ ಕೆಲವು ಮಾನವ ಅವಶೇಷಗಳು ಕಂಡುಬಂದಿದ್ದು ದುರಂತದಲ್ಲಿ ಎಲ್ಲರೂ ಸಮುದ್ರಪಾಲಾಗಿರಬಹುದು ಅಥವಾ ಅಲ್ಲರೂ ಬಚಾಬ್‌ ಆಗಿರಬಹುದು ಎಂದು ತಜ್ಞರು ಹೇಳಿದ್ದಾರೆ. ಹಡಗಿನ ಅವಶೇಷಗಳು ಹಿಂದೆ ನಮೀಬಿಯಾದಲ್ಲಿ ಕಂಡುಬಂದಿದ್ದವು. ಹೆಚ್ಚಿನ ಗಣಿಗಾರಿಕೆ ನಡೆಯುತ್ತಿದ್ದ ಕಾರಣ ಸರ್ಕಾರ ಈ ಪ್ರದೇಶವನ್ನು “ನಿಷೇಧಿತ ಪ್ರದೇಶ” ಎಂದು ಗುರುತಿಸಿತು.

ಭ್ರಷ್ಟರ ಬೇಟೆ

Recent Posts

ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ; ಬೇಸತ್ತು ಚರಂಡಿ ಸ್ವಚ್ಛಗೊಳಿಸಿದ ಮಹಿಳೆ.

ಕೊಟ್ಟೂರು:- ತಾಲ್ಲೂಕಿನ ಕೆ. ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹರಾಳು ಗ್ರಾಮದ ದುಮ್ಮಾಡಿ ಕೆಂಚಮ್ಮ ಎಂಬ ಮಹಿಳೆಯೋರ್ವರು ತಮ್ಮ…

9 hours ago

ಬಸವನ ಬಾಗೇವಾಡಿಯಲ್ಲಿ ಅಕ್ರಮ LPG ರೀಫಿಲ್ಲಿಂಗ್ ಆರೋಪ: ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಆಕ್ರೋಶ

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ನಗರದಲ್ಲಿ ಗೃಹಬಳಕೆಯ LPG ಸಿಲಿಂಡರ್‌ಗಳಿಂದ ಆಟೋಗಳಿಗೆ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡಲಾಗುತ್ತಿದೆ ಎಂಬ ಆರೋಪ…

15 hours ago

ಸಿದ್ದರಾಮಯ್ಯ ನಮ್ಮ ನಾಯಕ, 2028ಕ್ಕೆ ಡಿಕೆಶಿ ಸಿಎಂ ಆಗಲಿ: ಸತೀಶ್ ಜಾರಕಿಹೊಳಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…

2 days ago

ಅಟ್ಟಿಕಾ ಗೋಲ್ಡ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ: 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಶೋಧ; ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ, ₹7.52 ಲಕ್ಷ ನಗದು ಜಪ್ತಿ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…

2 days ago

ಇಬ್ಬರು ಮಕ್ಕಳ ತಾಯಿಗೆ ವಂಚನೆ ಆರೋಪ: ಖಾಸಗಿ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್; ₹9 ಲಕ್ಷ ಪಡೆದ ಟ್ಯಾಟೂ ಆರ್ಟಿಸ್ಟ್ ಅರ್ಜುನ್? ಎಂದು ಮಹಿಳೆ ಆರೋಪ.

ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…

3 days ago

ಖಾಲಿ ಸೈಟ್ ಸ್ವಚ್ಛಗೊಳಿಸಲು ಹೋದಾಗ ಬಯಲಾಯ್ತು ಕೊಲೆ ರಹಸ್ಯ: ಪತ್ನಿಯನ್ನು ಕೊಂದು ಶವ ಎಸೆದಿದ್ದ ಪತಿ ಬಂಧನ

ಬೆಂಗಳೂರು: ಜಿಬಿಎ ನೋಟಿಸ್‌ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…

3 days ago