ನವದೆಹಲಿ, ಆಗಸ್ಟ್ 17: ದೆಹಲಿಯ ಹೌಝ್‌ಕ್ವಾಝಿ ಪ್ರದೇಶದಲ್ಲಿ ನಡೆದಿರುವ ಅಮಾನುಷ ಘಟನೆ ನಾಗರೀಕ ಸಮಾಜವನ್ನೇ ಬೆಚ್ಚಿ ಬೀಳಿಸಿದೆ. 39 ವರ್ಷದ ಯುವಕನು ಸ್ವಂತ ತಾಯಿಯ ಮೇಲೆಯೇ ಎರಡು ಬಾರಿ ದೌರ್ಜನ್ಯ ಎಸಗಿರುವ ಆರೋಪ ಹೊರಬಿದ್ದಿದೆ.
ಪೊಲೀಸರ ಮಾಹಿತಿಯಂತೆ, 65 ವರ್ಷದ ಮಹಿಳೆ ತನ್ನ ಪತಿ ಮತ್ತು ಕಿರಿಯ ಮಗಳೊಂದಿಗೆ ಜುಲೈ 17ರಂದು ಧಾರ್ಮಿಕ ಪ್ರವಾಸಕ್ಕಾಗಿ ಸೌದಿ ಅರೇಬಿಯಾ ತೆರಳಿದ್ದರು. ಈ ವೇಳೆಯಲ್ಲಿ ಮನೆಯಲ್ಲಿ ಇದ್ದ ಮಗ ಸತತವಾಗಿ ತಂದೆಗೆ ಕರೆ ಮಾಡಿ ತಕ್ಷಣ ಮನೆಗೆ ಮರಳುವಂತೆ ಒತ್ತಾಯಿಸಿದ್ದ. ತಾಯಿಗೆ ಅಕ್ರಮ ಸಂಬಂಧವಿದೆ ಎಂಬ ಗಂಭೀರ ಆರೋಪವನ್ನೂ ತಂದೆಯ ಮುಂದೆ ಮಾಡಿದ್ದ. ಇದರಿಂದ ತಕ್ಷಣವೇ ಕುಟುಂಬ ಭಾರತಕ್ಕೆ ಮರಳಿತ್ತು.
ಮನೆಗೆ ಬಂದು ಕೂಡಲೇ ಗಲಾಟೆ ಶುರುವಾಯಿತು. ತಂದೆ ಮಾತಿನ ಮೂಲಕ ಮಗನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಅವನು ಯಾರ ಮಾತನ್ನೂ ಕೇಳಲಿಲ್ಲ. ತಾಯಿಗೆ ಡಿವೋರ್ಸ್ ಕೊಡಿಸುವಂತೆ ತಂದೆಯನ್ನು ಒತ್ತಾಯಿಸುತ್ತಾ ಕುಟುಂಬದ ಮೇಲೆ ಒತ್ತಡ ಹೇರುತ್ತಿದ್ದ.
ಆಗಸ್ಟ್ 11ರಂದು, ತಾಯಿಯೊಂದಿಗೆ ಮಾತನಾಡಬೇಕಿದೆ, ಕೆಲವು ಪ್ರಶ್ನೆಗಳಿವೆ ಎಂದು ಹೇಳಿ, ಕೋಣೆಯೊಳಗೆ ಕೂಡಿ ಹಾಕಿ ಹಲ್ಲೆ ನಡೆಸಿದ್ದಾನೆ. ಬಳಿಕ ಬಲವಂತವಾಗಿ ಬುರ್ಖಾ ತೆಗೆಯಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. “ನಾನು ನಿನ್ನ ತಾಯಿ” ಎಂದು ಅಳುತ್ತ ಬೇಡಿಕೊಂಡರೂ ಮಗ ವಿಕೃತಿ ಮೆರೆದಿದ್ದಾನೆಂದು ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.
ಘಟನೆಯ ನಂತರ ಹಿರಿಯ ಮಗಳ ಮನೆಗೆ ತೆರಳಿದ್ದ ಮಹಿಳೆ ಆಗಸ್ಟ್ 14ರಂದು ಮನೆಗೆ ಹಿಂತಿರುಗಿದಾಗ ಮತ್ತೊಮ್ಮೆ ಮಗ ಅವಳ ಮೇಲೆಯೇ ದೌರ್ಜನ್ಯ ಎಸಗಿದ್ದಾನೆ. ಇದರಿಂದ ತತ್ತರಿಸಿದ ತಾಯಿ ಕೊನೆಗೂ ಕಿರಿಯ ಮಗಳೊಂದಿಗೆ ಪೊಲೀಸರ ಶರಣಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಹೌಝ್‌ಕ್ವಾಝಿ ಪೊಲೀಸರು ಆರೋಪಿ ಮಗನನ್ನು ವಶಕ್ಕೆ ಪಡೆಯಲು ತೀವ್ರ ಶೋಧ ನಡೆಸುತ್ತಿದ್ದಾರೆ.
***
ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392
ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…
ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…
ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…
ಪ್ರೇಯಸಿ ಫೋನ್ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…
ಚಿತ್ರದುರ್ಗ: ತಾಲ್ಲೂಕಿನ ಚಿಕ್ಕಗೊಂಡನಹಳ್ಳಿ ಗ್ರಾಮದ ಹತ್ತಿರ ನಡೆದ ವಿಶಿಷ್ಟ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಸಾಧುಗಳ ವೇಷ ತಾಳಿ ರೈತರ…
ಭೋಪಾಲ್ : ಪ್ರೀತಿಯನ್ನು ನಿರಾಕರಿಸಿದ ಶಿಕ್ಷಕಿಯ ಮೇಲೆ ಹದಿಹರೆಯದ ವಿದ್ಯಾರ್ಥಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದ ನರಸಿಂಹಪುರದಲ್ಲಿ…