ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಚೌಡಹಳ್ಳಿಯಲ್ಲಿ ಇದ್ದ ಗುರುಮಲ್ಲೇಶ್ವರ ಶಾಖಾ ಮಠದಲ್ಲಿ ಭಾರಿ ವಿವಾದ ಸ್ಫೋಟವಾಗಿದೆ. ನಿಜಲಿಂಗಸ್ವಾಮೀಜಿ ಎಂಬ ಹೆಸರಿನಿಂದ ಮಠಾಧಿಪತಿಯಾಗಿ ಅಸ್ತಿತ್ವದಲ್ಲಿದ್ದ ವ್ಯಕ್ತಿ ವಾಸ್ತವದಲ್ಲಿ ಮೊಹಮ್ಮದ್ ನಿಸಾರ್ ಎಂಬ ಮೂಲತಃ ಶಹಪುರ (ಯಾದಗಿರಿ ಜಿಲ್ಲೆ) ಮೂಲದ ಮುಸ್ಲಿಂ ವ್ಯಕ್ತಿಯೆಂಬ ವಿಚಾರ ಇದೀಗ ಸಾರ್ವಜನಿಕರ ಗಮನಸೆಳೆದಿದೆ.
ಸ್ವಾಮೀಜಿ ಎಂಬ ನಾಮಧಾರಿಯ ಹಿಂದಿನ ಜೀವನ, ವಿಡಿಯೋ ಮತ್ತು ಫೋಟೋಗಳ ಮೂಲಕ ಬಹಿರಂಗವಾಗಿದ್ದು, ಮಠದ ಶ್ರದ್ಧಾಳುಗಳು ಹಾಗೂ ಗ್ರಾಮಸ್ಥರಲ್ಲಿ ಭಾರೀ ಆಘಾತ ಮೂಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ದೃಶ್ಯಾವಳಿಗಳ ಪ್ರಕಾರ, ನಿಜಲಿಂಗಸ್ವಾಮೀಜಿ ತಮ್ಮ ಮಠದ ಕೋಣೆಯಲ್ಲಿಯೇ ಮದ್ಯಪಾನ, ಮಾಂಸಾಹಾರ ಸೇವನೆ ಹಾಗೂ ಯುವಕರೊಂದಿಗೆ ಅಸಭ್ಯ ವರ್ತನೆ ನಡೆಸುತ್ತಿರುವುದು ದೃಢವಾಗಿರುವುದಾಗಿ ಹೇಳಲಾಗಿದೆ.
ನಿಜಲಿಂಗಸ್ವಾಮೀಜಿ ಎಂಬ ಹೆಸರು ಪಡೆದ ಮೊಹಮ್ಮದ್ ನಿಸಾರ್ ಮೂಲ ಧರ್ಮವನ್ನು ಮರೆಮಾಚಿಕೊಂಡು, ಬಸವಕಲ್ಯಾಣದ ಬಸವಪ್ರಭು ಸ್ವಾಮೀಜಿಯಿಂದ ಜಂಗಮದೀಕ್ಷೆ ಪಡೆದಿದ್ದೇನೆ ಎಂಬ ನಾಟಕವಾಡಿದ್ದನು. ಮಠಾಧಿಪತಿಯಾಗಿ ನಿರಂತರವಾಗಿ ಚಟುವಟಿಕೆ ನಡೆಸುತ್ತಿದ್ದ ಈ ವ್ಯಕ್ತಿ, ಮತಾಂತರವಾದ ಬಳಿಕವೂ ತನ್ನ ಹಿಂದಿನ ಹೆಸರು — ಮೊಹಮ್ಮದ್ ನಿಸಾರ್ — ಅನ್ನು ಅಧಿಕೃತ ದಾಖಲೆಗಳಲ್ಲಿ ಉಳಿಸಿಕೊಂಡಿದ್ದನು.
ಈ ಹಿನ್ನೆಲೆಯಲ್ಲಿ ಕೆಲ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾಗ, ಇತ್ತೀಚೆಗಷ್ಟೇ ಆನ್‌ಲೈನ್ ಮೂಲಕ ಮುಸ್ಲಿಂ ಧಾರ್ಮಿಕ ಪರಿಧಾನವಾದ ಟೋಪಿ ತರಿಸಿಕೊಂಡಿರುವುದೂ ಗೊತ್ತಾಗಿದ್ದು, ವಿಷಯ ಮತ್ತಷ್ಟು ಉದ್ವಿಗ್ನಗೊಂಡಿದೆ. ವಿಚಾರಣೆಗೆ ಒಳಗಾದಾಗ ನಿಜಲಿಂಗಸ್ವಾಮೀಜಿ ತನ್ನ ಹಿಂದಿನ ಧರ್ಮ ಮತ್ತು ಮತಾಂತರದ ವಿಚಾರವನ್ನು ಒಪ್ಪಿಕೊಂಡಿದ್ದಾನೆ.
ಸ್ಥಳೀಯ ಆಕ್ರೋಶದ ಬೆನ್ನಲ್ಲೇ, ನಿಜಲಿಂಗಸ್ವಾಮೀಜಿ ಮಠದಿಂದ ತನ್ನ ಬಳಿಯ ವಸ್ತುಗಳನ್ನು ಕೊಂಡೊಯ್ದು ಬೈಕ್‌ನಲ್ಲಿ ನಿಗೂಢವಾಗಿ ಪರಾರಿಯಾಗಿದ್ದಾನೆ. ಈಗ ನಿಸಾರ್ ಎಂಬ ಈ ವ್ಯಕ್ತಿ ಪೀಠವನ್ನು ತ್ಯಜಿಸಿರುವುದಾಗಿ ಹೇಳಿ, ಎಲ್ಲರ ಗಮನದಿಂದ ತಪ್ಪಿಸಿಕೊಂಡಿದ್ದಾನೆ.
ಈ ಘಟನೆಯಿಂದ ಚೌಡಹಳ್ಳಿ ಗ್ರಾಮದಲ್ಲಿ ಸಂಚಲನವೇಳಿ, ನಿಜಲಿಂಗಸ್ವಾಮೀಜಿ ಎಂಬ ನಾಮದಿಂದ ಮಠದ ಪ್ರಮುಖ ಸ್ಥಾನವನ್ನು ಪಡೆದಿದ್ದ ವ್ಯಕ್ತಿಯ ನಿಜ ಪರಿಚಯ ಬೆಳಕಿಗೆ ಬಂದು ಶ್ರದ್ಧಾಳುಗಳು ಹಾಗೂ ನಾಗರಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಕರಣ ‘ಧರ್ಮಕ್ಕೆ ದ್ರೋಹ’, ‘ಅಕ್ಷರ ದಾಸೋಹದ ಅವಮಾನ’ ಎಂಬಂತೆ ಟೀಕೆಗಳಿಗೆ ಕಾರಣವಾಗಿದೆ.
ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ಗ್ರಾಮಸ್ಥರಿಂದ ಕೇಳಿಬರುತ್ತಿದೆ.
***
ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯದ್ಯಂತ ವರದಿಗಾರರು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8088070392
ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…
ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…
ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…
ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…
ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…
ಪ್ರೇಯಸಿ ಫೋನ್ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…