Latest

ಶೌಚಾಲಯ ಹಿಂಭಾಗದಲ್ಲಿ ಘೋರ ಕೃತ್ಯ – ಮಾನಸಿಕ ಅಸ್ವಸ್ಥೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ

ಕನಕಗಿರಿ ಪಟ್ಟಣದ ಬಸ್ ನಿಲ್ದಾಣದ ಬಳಿ ಮಾನಸಿಕ ಅಸ್ವಸ್ಥೆಯೊಬ್ಬಳನ್ನು ಕಾಮುಕನೊಬ್ಬ ಶೌಚಾಲಯದ ಹಿಂಭಾಗಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಭಯಾನಕ ಘಟನೆ ನಡೆದಿದೆ. ಈ ಕೃತ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ ಯುವಕರೊಬ್ಬರ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಬಸ್ ನಿಲ್ದಾಣದ ರಕ್ಷಣಾ ಗೋಡೆಯ ಒಳಗೆ ನಿರ್ಮಾಣವಾಗುತ್ತಿರುವ ಹೊಸ ಶೌಚಾಲಯದ ಹಿಂಭಾಗದಲ್ಲಿಯೇ ಈ ಕೃತ್ಯ ನಡೆದಿದ್ದು, ಯುವಕರೊಬ್ಬರು ತಪ್ಪದೇ ದೃಶ್ಯವನ್ನೆಲ್ಲಾ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ತಮ್ಮ ಕೃತ್ಯವನ್ನೂ ತಿದ್ದುತ್ತಿರುವುದು ಅರಿತ ಅಲ್ಲಿಂದ ತಕ್ಷಣವೇ ಪರಾರಿಯಾಗಿದ್ದಾನೆ.

ವಿಡಿಯೋ ವೈರಲ್ ಆದ ನಂತರ ಸ್ಥಳೀಯರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು, ಆರೋಪಿಯನ್ನು ಶೀಘ್ರ ಪತ್ತೆಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಪೊಲೀಸರಿಗೆ ಆಗ್ರಹಿಸುತ್ತಿದ್ದಾರೆ.

ಘಟನೆ ಸಾರ್ವಜನಿಕರ ಮನಸ್ಸಿನಲ್ಲಿ ಆಘಾತ ಮೂಡಿಸಿದ್ದು, ಮಾನಸಿಕ ಅಸ್ವಸ್ಥ ಮಹಿಳೆಯರ ರಕ್ಷಣೆಗೆ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂಬ ಮಾತುಗಳು ಮುಂದಾಗುತ್ತಿವೆ.

ಸ್ಥಳೀಯ ಪೊಲೀಸರ ಪ್ರತಿಕ್ರಿಯೆ ಇನ್ನೂ ಬರುವ ನಿರೀಕ್ಷೆಯಲ್ಲಿದ್ದು, ಈ ಪ್ರಕರಣಕ್ಕೆ ಗಂಭೀರ ವರ್ತನೆ ನೀಡುವುದು ಅವಶ್ಯಕವಾಗಿದೆ.

nazeer ahamad

Recent Posts

ಸಿದ್ದರಾಮಯ್ಯ ನಮ್ಮ ನಾಯಕ, 2028ಕ್ಕೆ ಡಿಕೆಶಿ ಸಿಎಂ ಆಗಲಿ: ಸತೀಶ್ ಜಾರಕಿಹೊಳಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…

15 hours ago

ಅಟ್ಟಿಕಾ ಗೋಲ್ಡ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ: 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಶೋಧ; ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ, ₹7.52 ಲಕ್ಷ ನಗದು ಜಪ್ತಿ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…

1 day ago

ಇಬ್ಬರು ಮಕ್ಕಳ ತಾಯಿಗೆ ವಂಚನೆ ಆರೋಪ: ಖಾಸಗಿ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್; ₹9 ಲಕ್ಷ ಪಡೆದ ಟ್ಯಾಟೂ ಆರ್ಟಿಸ್ಟ್ ಅರ್ಜುನ್? ಎಂದು ಮಹಿಳೆ ಆರೋಪ.

ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…

1 day ago

ಖಾಲಿ ಸೈಟ್ ಸ್ವಚ್ಛಗೊಳಿಸಲು ಹೋದಾಗ ಬಯಲಾಯ್ತು ಕೊಲೆ ರಹಸ್ಯ: ಪತ್ನಿಯನ್ನು ಕೊಂದು ಶವ ಎಸೆದಿದ್ದ ಪತಿ ಬಂಧನ

ಬೆಂಗಳೂರು: ಜಿಬಿಎ ನೋಟಿಸ್‌ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…

1 day ago

₹30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…

2 days ago

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

2 days ago