Latest

ಅಂತರಿಕ್ಷ ತೇಲಾಟದ ನೋಟ: ಗಗನಯಾತ್ರಿ ಶುಭಾಂಶು ಶುಕ್ಲಾದಿಂದ ವಿಶಿಷ್ಟ ವಿಡಿಯೋ ಹಂಚಿಕೆ”

ದೆಹಲಿ, ಜುಲೈ 20: ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ 20 ದಿನಗಳ ಕಾಲ ಕಳೆದಿದ್ದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ, ಭೂಮಿಗೆ ಹಿಂದಿರುಗಿದ ನಂತರ ತಮ್ಮ ಅಪರೂಪದ ಬಾಹ್ಯಾಕಾಶ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಗುರುತ್ವಾಕರ್ಷಣೆಯಿಲ್ಲದ ಪರಿಸರದಲ್ಲಿ ತೇಲುತ್ತಿರುವ ತಮ್ಮ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದು, ಅದರ ಜೊತೆಗೆ ಬರೆದುಿಟ್ಟ ಮನೋವೀಕ್ಷಣಾತ್ಮಕ ಶಬ್ದಗಳು ನೆಟ್ಟಿಗರ ಮನ ಗೆದ್ದಿವೆ.

“ಐಎಸ್‌ಎಸ್‌ನಲ್ಲಿ ನಾವು ಸಮಯವನ್ನು ಹೇಗೆ ಉಪಯೋಗಿಸುತ್ತೇವೆ, ಸಂಶೋಧನೆಗಳನ್ನು ಹೇಗೆ ಮುನ್ನಡೆಸುತ್ತೇವೆ ಎಂಬುದರತ್ತ ಸಂಪೂರ್ಣ ಗಮನ ನೀಡಲಾಗುತ್ತಿತ್ತು. ಶುರುವಾದಾಗ ಗುರುತ್ವಾಕರ್ಷಣೆಯಿಲ್ಲದ ಈ ಪ್ರಪಂಚದಲ್ಲಿ ತೇಲುವುದು ಮತ್ತು ಚಲನೆ ನಿಯಂತ್ರಿಸುವುದು ಅಸಾಧಾರಣ ಸವಾಲಾಗಿತ್ತು. ಆದರೆ ಅನುಭವದಿಂದ ನಿಯಂತ್ರಣ ಕಲಿತೆ. ಈ ವಿಡಿಯೋದಲ್ಲಿ ನಾನು ಹಿಡಿದಕೊಂಡ ನಿಯಂತ್ರಣದ ನಂತರದ ಕ್ಷಣಗಳನ್ನು ನೀವು ನೋಡಬಹುದು” ಎಂದು ಶುಭಾಂಶು ಬರೆದುಕೊಂಡಿದ್ದಾರೆ.

ಅವರು ಬರೆದ ಮತ್ತೊಂದು ಪ್ರಮುಖ ಭಾಗದಲ್ಲಿ, “ಅಂತರಿಕ್ಷದಲ್ಲಿ ಸ್ವಲ್ಪ ಹೊಚ್ಚು ಎತ್ತಿದರೆ ದೇಹ ಚಲನೆಗೆ ಬರುತ್ತದೆ. ಆದ್ದರಿಂದ ನಿಶ್ಚಲವಾಗಿರುವುದು ದೊಡ್ಡ ಸವಾಲು. ಇದು ಭೂಮಿಯ ಮೇಲೆ ನಮ್ಮ ಮನಸ್ಸನ್ನು ಶಾಂತಪಡಿಸಬೇಕಾದ ಅಗತ್ಯದಂತೆ. ಕೆಲವೊಮ್ಮೆ ವೇಗದ ನಡುವೆ ನಿಲ್ಲುವುದು, ನಿಧಾನಗೊಳ್ಳುವುದು ಎಷ್ಟು ಅಗತ್ಯವೋ, ಅದೇ ರೀತಿಯಲ್ಲಿ ಇಲ್ಲಿ ನಿಶ್ಚಲತೆಯೂ ಕೌಶಲ್ಯವೇ ಆಗಿದೆ. ಗುರುತ್ವಾಕರ್ಷಣೆ ಇದ್ದರೂ ಇಲ್ಲದಿದ್ದರೂ, ಒಳಜಗತ್ತನ್ನು ಸಮತೋಲದಲ್ಲಿಟ್ಟುಕೊಳ್ಳುವುದು ದೊಡ್ಡ ಪಾಠ” ಎಂದು ಅವರು ಹಂಚಿಕೊಂಡಿದ್ದಾರೆ.

 

nazeer ahamad

Recent Posts

ಸಾಲ ಮರುಪಾವತಿ ಪ್ರಕರಣ: ಶಿರಸಿಯ ರವೀಶ ಹೆಗಡೆ ಭಟ್ಕಳ ಪೊಲೀಸರ ವಶಕ್ಕೆ

ಭಟ್ಕಳ: ಸಾಲ ಪಡೆದ ಹಣವನ್ನು ಮರುಪಾವತಿಸದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಶಿರಸಿ ಮೂಲದ ರವೀಶ ವೆಂಕಟ್ರಮಣ ಹೆಗಡೆ ಅವರನ್ನು ಭಟ್ಕಳ…

12 hours ago

52ರಲ್ಲೂ ಮಲೈಕಾ ಅರೋರಾ ಲವ್ ಲೈಫ್‌ ಸದ್ದು: ನಬೀಲ್ ನದ್ಲವಿ ಜೊತೆ ಫೋಟೋ ವೈರಲ್, ಹೊಸ ಸಂಬಂಧದ ಗುಸುಗುಸು!

ಮುಂಬೈ: ಬಾಲಿವುಡ್‌ನ ಫಿಟ್ನೆಸ್ ಹಾಗೂ ಫ್ಯಾಷನ್ ಐಕಾನ್ ಮಲೈಕಾ ಅರೋರಾ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿಯೂ ಆಗಾಗ್ಗೆ ಸುದ್ದಿಯಾಗುತ್ತಾರೆ. ಇದೀಗ…

14 hours ago

ಬೈಕ್‌ಗೆ ಬೆಂಕಿ ಹಾಕಿದ್ದು ರಾಜಕೀಯ ದ್ವೇಷಕ್ಕಲ್ಲ; ಪತಿಯನ್ನೇ ಕೊಲ್ಲಲು ಪತ್ನಿಯ ಸಂಚು! 6 ಮಂದಿ ಬಂಧನ

ಚಂದ್ರಗಿರಿ (ತಿರುಪತಿ): ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಬೈಕ್‌ಗೆ ಬೆಂಕಿ ಹಚ್ಚಲಾಗಿದೆ ಎಂದು ಭಾವಿಸಲಾಗಿದ್ದ ಪ್ರಕರಣವೊಂದು ತನಿಖೆಯ ಬಳಿಕ ಬೇರೆಯದೇ ತಿರುವು…

14 hours ago

ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಯ ಪಾಲಿಗೆ ಯಮನಾದ: 6 ದಿನದ ಹಸುಗೂಸಿನೊಂದಿಗೆ ಪರಾರಿ!

ದಾವಣಗೆರೆ: ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಯ ಸಾವಿಗೆ ಕಾರಣನಾದ ಆರೋಪ ಕೇಳಿಬಂದಿದ್ದು, ಮೃತದೇಹವನ್ನು ಪೊಲೀಸ್ ಠಾಣೆ ಬಳಿಯ ರಸ್ತೆಯಲ್ಲಿ ಬಿಟ್ಟು…

14 hours ago

ಹಾಡಹಗಲೇ ಪಡಿತರ ಅಕ್ಕಿ ಸಾಗಾಟ: ಆಹಾರ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ..!

ಬಾಗಲಕೋಟೆ: ಬಡ ಹಾಗೂ ಅರ್ಹ ಫಲಾನುಭವಿಗಳಿಗೆ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು…

1 day ago

₹5 ಸಾವಿರಕ್ಕೆ ರೂಮ್‌ಗೆ ಬಂದ ಯುವತಿ; ಬಿಯರ್‌ನಲ್ಲಿ ಅಮಲು ಬೆರೆಸಿ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶಾಕ್!

ಪ್ರವಾಸಕ್ಕೆಂದು ಹೋಗಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೋಟೆಲ್‌ನಲ್ಲಿ ಯುವತಿಯೊಬ್ಬಳ ಮೋಸದ ಜಾಲಕ್ಕೆ ಸಿಲುಕಿ ಹಣ ಹಾಗೂ ಚಿನ್ನ ಕಳೆದುಕೊಂಡಿರುವ ಘಟನೆ…

2 days ago