ಮಂಡ್ಯ: ಜಿಲ್ಲೆಯ ಮದ್ದೂರು ಪಟ್ಟಣದ ಹಳೆಯ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಇತ್ತೀಚೆಗೆ ಕಳ್ಳತನದ ಘಟನೆ ನಡೆದಿದೆ. ತಡರಾತ್ರಿ ವೇಳೆ ಖದೀಮರು ರಸ್ತೆ ಬದಿಯ ಟೀ ಸ್ಟಾಲ್ ಮತ್ತು ಹೋಟೆಲ್‌ಗೆ ಬೀಗ ಮುರಿದು ನುಗ್ಗಿದ್ದು, ಹಲವು ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ಅಕುಲ್ ಟೀ ಸ್ಟಾಲ್ ಹಾಗೂ ಸಮೀಪದ ಹೋಟೆಲ್‌ಗಾಗಿ ಗುರಿಯಾಗಿಸಿದ ಕಳ್ಳರು, ಗಲ್ಲಾ ಪೆಟ್ಟಿಗೆಯಲ್ಲಿದ್ದ ನಗದು ಹಣ, ಸಿಗರೇಟ್ ಪ್ಯಾಕೆಟ್‌ಗಳು ಹಾಗೂ ಚಾಕೊಲೇಟ್‌ಗಳನ್ನು ಎತ್ತಿಕೊಂಡು ಹೋಗಿದ್ದಾರೆ. ಆಶ್ಚರ್ಯಕರವಾಗಿ, ಹೋಟೆಲ್‌ ಒಳಗೆ ನುಗ್ಗಿದ ಖದೀಮರು ಅಡುಗೆ ಮಾಡಿ ಊಟ ಮಾಡಿ ಹೋಗಿರುವುದು ಗಮನ ಸೆಳೆದಿದೆ.

ಘಟನೆಯ ಮಾಹಿತಿ ಪಡೆದ ಮದ್ದೂರು ಟೌನ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಆಧಾರದಲ್ಲಿ ತನಿಖೆ ಮುಂದುವರೆಸಿದ್ದಾರೆ. ಸ್ಥಳೀಯ ವ್ಯಾಪಾರಿಗಳು ಈ ಪ್ರಕರಣದಿಂದ ಆತಂಕಕ್ಕೊಳಗಾಗಿದ್ದು, ರಾತ್ರಿಯ ವೇಳೆ ಪೊಲೀಸ್ ಪೇಟ್ರೋಲಿಂಗ್ ಹೆಚ್ಚಿಸಬೇಕೆಂಬ ಬೇಡಿಕೆ ವ್ಯಕ್ತಪಡಿಸಿದ್ದಾರೆ.

error: Content is protected !!