ಜೈಪುರ: ರಾಜಸ್ಥಾನದ ಭರತ್‌ಪುರ ಜಿಲ್ಲೆಯ ರೂಪವಾಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 15 ವರ್ಷದ ಬಾಲಕಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ನಾಲ್ವರು ಯುವಕರ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಘಟನೆ ಜೂನ್ 9ರಂದು ನಡೆದಿದೆ. ಬಾಲಕಿ ಸ್ಥಳೀಯ ಮಾರುಕಟ್ಟೆ ಕಡೆ ತೆರಳುತ್ತಿದ್ದ ವೇಳೆ, ಆರೋಪಿತ ರೋಹಿತ್ ಹಾಗೂ ಆತನ ಸ್ನೇಹಿತರು ರಿಂಕು, ಬಬ್ಬಲ್ ಮತ್ತು ಬಬ್ಲು ಎಂಬುವವರು ಆಕೆಯನ್ನು ಬಲವಂತವಾಗಿ ಒಬ್ಬನ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ ಹೇಳಲಾಗಿದೆ.

ಬಾಲಕಿಯ ಬಾಯಿಗೆ ಆಕೆಯ ಸ್ಕಾರ್ಫ್‌ ಅನ್ನು ಕಟ್ಟಿದ ರೋಹಿತ್, ಆಕೆಯ ಮೇಲೆ ಅತ್ಯಾಚಾರ ಎಸಗಿದ ಎನ್ನಲಾಗಿದೆ. ಈ ವೇಳೆ ಉಳಿದ ಮೂವರು ಮನೆಯ ಬಾಗಿಲಿಗೆ ಬೀಗ ಹಾಕಿ ಹೊರಗಿನಿಂದ ಕಾವಲು ಕಾಯುತ್ತಿದ್ದರು. ಘಟನೆ ಬಗ್ಗೆ ಬಾಲಕಿಯ ತಂದೆ ಜೂನ್ 13ರಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ. ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

Related News

error: Content is protected !!