ಬಸವಕಲ್ಯಾಣಕ್ಕೆ ಹೋರಿಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದು ಪರಿಶೀಲಿಸಿದ ಘಟನೆಯೊಂದು ಶನಿವಾರ ಹುಲಸೂರ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ. ಗಡಿಗೌಡಗಾಂವ ಗ್ರಾಮದ ರೈತನಿಗೆ ಸೇರಿದ ಎನ್ನಲಾದ ಎರಡು ಹೋರಿಗಳನ್ನು ಸಾಗಿಸುತ್ತಿದ್ದ ವಾಹನವನ್ನು ಬೇಲೂರು ಗ್ರಾಮದ ಯುವಕರು ಮಧ್ಯದಲ್ಲಿ ತಡೆದು, ಶಂಕಿತವಾಗಿ ಪರಿಶೀಲನೆ ನಡೆಸಿದರು.

ಪಶುಗಳ ಆರೋಗ್ಯ ಸ್ಥಿತಿ ತಿಳಿಯಲು ಅವರು ಹುಲಸೂರ ಪಶು ಚಿಕಿತ್ಸಾಲಯಕ್ಕೆ ಕರೆದೊಯ್ದು ವೈದ್ಯರ ಪರಿಶೀಲನೆಗೆ ಒಳಪಡಿಸಿದರು. ಬಳಿಕ ಪ್ರಕರಣವನ್ನು ಹುಲಸೂರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿದ ಪಿಎಸ್‌ಐ ಶಿವಪ್ಪ ಮೇಟಿ ಅವರು, “ವಾಹನ ಹಾಗೂ ಹೋರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ. ರೈತರು ಸೂಕ್ತ ದಾಖಲೆಗಳನ್ನು ಸಲ್ಲಿಸಿದರೆ ಜಾನುವಾರುಗಳನ್ನು ಮರಳಿ ನೀಡಲಾಗುತ್ತದೆ. ದಾಖಲೆಗಳ ಕೊರತೆಯಿದ್ದಲ್ಲಿ ಕಾನೂನು ಕ್ರಮ ಕೈಗೊಂಡು ಗೋ ಶಾಲೆಗೆ ಜಾನುವಾರುಗಳನ್ನು ವರ್ಗಾಯಿಸಲಾಗುವುದು,” ಎಂದು ಸ್ಪಷ್ಟಪಡಿಸಿದರು.

ಈ ವೇಳೆ ತಡೆಪಡೆ ಕಾರ್ಯದಲ್ಲಿ ಭಾಗವಹಿಸಿದ್ದವರು – ಬೇಲೂರು ಗ್ರಾಮದ ಯುವಕರು ಆಕಾಶ ಬಿದ್ಮನೆ, ಪ್ರದೀಪ ಕವಳೆ, ಸಿದ್ದು ಪಾಟೀಲ್, ಮಲ್ಲಿಕಾರ್ಜುನ ಬರಗಲೆ, ರೇವಣಸಿದ್ದ ಬರಗಲೆ, ಶರಣು ತೋಗಲೂರೆ, ಜೊತೆಗೆ ಹುಲಸೂರ ಬಜರಂಗದಳ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ಮಂಗಾ, ವಿಜಯಸ್ವಾಮಿ, ಬಸವರಾಜ ರಗಟ್ಟೆ, ಅಜಯ ಚಾಕೋತೆ, ಅವಿನಾಶ ಮೇತ್ರೆ, ಪ್ರಜ್ವಲ್ ಸಜ್ಜನ್, ನಾಗೇಶ ಭರಮಶೇಟೆ, ಬಾಬು ವತಾರೆ, ಚನ್ನವೀರಸ್ವಾಮಿ ಹಾಗೂ ಮಲ್ಲಿಕಾರ್ಜುನ ಪಾರಶೇಟೆ ಉಪಸ್ಥಿತರಿದ್ದರು.

ಈ ಘಟನೆ ಹಿನ್ನೆಲೆಯಲ್ಲಿ ಸ್ಥಳೀಯರು ಜಾನುವಾರು ಸಾಗಾಣಿಕೆಯಲ್ಲಿ ಎಚ್ಚರತೆ ವಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.

Related News

error: Content is protected !!