ಬೆಂಗಳೂರು, ಅಮೃತಹಳ್ಳಿ: ನಗರದ ಅಮೃತಹಳ್ಳಿಯಲ್ಲಿ ಮಹಿಳಾ ನೇತೃತ್ವದ ಗ್ಯಾಂಗ್ ಒಂದು ಸಲೂನ್‌ ಮೇಲೆ ದಾಳಿ ನಡೆಸಿ, ಮಾಲಿಕನಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಘಟನೆ ಸಂಬಂಧಿಸಿದಂತೆ ಪೋಲೀಸರು ಪ್ರಕರಣ ದಾಖಲಿಸಿ, ಮೂವರನ್ನು ಬಂಧಿಸಿದ್ದಾರೆ.

ಸಂಜು (40) ಎಂಬುವವರು ಹಿಂದೆ ಕೋಡಿಗೆಹಳ್ಳಿ ಬಳಿ ಇರುವ ‘ಸಾರಾ ಸ್ಪಾ’ಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಸ್ಪಾದಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳನ್ನು ವಿರೋಧಿಸಿದ ಕಾರಣ, ಅವರು ಕೆಲಸ ತೊರೆದು ಸ್ವತಂತ್ರವಾಗಿ ತಮ್ಮದೇ ಸಲೂನ್ ತೆರೆಯುತ್ತಾರೆ. ಇದರಿಂದ ಆಕ್ರೋಶಗೊಂಡ ‘ಸಾರಾ ಸ್ಪಾ’ ಮಾಲಕಿ ನಿಶಾ, ತನ್ನ ಸ್ನೇಹಿತೆ ಕಾವ್ಯಾ ಹಾಗೂ ಮತ್ತೊಬ್ಬನಾದ ಮೊಹಮ್ಮದ್ ಜೊತೆಯಲ್ಲಿ ಯೋಜಿತವಾಗಿ ದಾಳಿ ನಡೆಸಿದ್ದಾಳೆ.

ಘಟನೆಯಂದು ಈ ಮೂವರು ಸಲೂನ್‌ಗೆ ನುಗ್ಗಿ ಸಂಜುವಿಗೆ ದುಷ್ಕರ್ಮವಾಗಿ ಹಲ್ಲೆ ನಡೆಸಿದ್ದಾರೆ. ಬಳಿಕ ಕಾರಿನಲ್ಲಿ ಎತ್ತಿಕೊಂಡು ಕಿಡ್ನ್ಯಾಪ್ ಮಾಡುವ ತನಕ ಪ್ರಕರಣ ತೀವ್ರ ಸ್ವರೂಪ ಪಡೆದಿದೆ. ಸಂಜು ನಂತರ ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಅವರು ನೀಡಿದ ದೂರಿನಲ್ಲಿ, ಗ್ಯಾಂಗ್ ಸದಸ್ಯರು ಅವಾಚ್ಯ ಶಬ್ದಗಳಲ್ಲಿ ನಿಂದನೆ ಮಾಡಿದ್ದುದು, ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಬೆದರಿಕೆ ನೀಡಿದ ಮಾಹಿತಿ ಸಹ ಉಲ್ಲೇಖಿಸಿದ್ದಾರೆ.

ಅಮೃತಹಳ್ಳಿ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಈಗಾಗಲೇ ನಿಶಾ, ಕಾವ್ಯಾ ಮತ್ತು ಮೊಹಮ್ಮದ್ ಬಂಧಿತರಾಗಿದ್ದು, ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಯುತ್ತಿದೆ.

ಪೋಲೀಸರು ಪ್ರಕರಣವನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದ್ದು, ದಾಳಿಯ ಹಿಂದಿನ ಉದ್ದೇಶ ಹಾಗೂ ಇನ್ನಷ್ಟು ಆರೋಪಿಗಳ ಪಾತ್ರದ ಬಗ್ಗೆ ಗಂಭೀರ ತನಿಖೆ ಮುಂದುವರಿಸಿದ್ದಾರೆ.

error: Content is protected !!