ಹಳೇಬೀಡು ಹೋಬಳಿಯ ಯಲಹಂಕ ಗ್ರಾಮದಲ್ಲಿ ದೀರ್ಘ ಕಾಲದಿಂದ ಕಲ್ಲುಗಣಿಗಾರಿಕೆಯಲ್ಲಿ ತೊಡಗಿದ್ದ ಚಂದ್ರು ಎಂಬವರು, ತಮ್ಮ ಕಾನೂನುಬದ್ಧ ಗಣಿ ಚಟುವಟಿಕೆಗೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸೋಮವಾರ ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, “ನಾವು ಪಾರಂಪರಿಕವಾಗಿ ಕಲ್ಲುಗಣಿಗಾರಿಕೆ ಮಾಡುತ್ತಿದ್ದವರೆ. ಯಲಹಂಕ ಗ್ರಾಮದ ಸರ್ವೆ ನಂ.80ರಲ್ಲಿ ಕೆಲವು ವರ್ಷಗಳಿಂದ ಪಕ್ಕದ ಜಮೀನಿನ ಮಾಲೀಕರೊಬ್ಬರಿಗೆ ತಿಂಗಳಿಗೆ ₹7 ಸಾವಿರ ನೀಡುತ್ತಾ ಅಕ್ರಮವಾಗಿ ಗಣಿಕಾರಿಕೆ ಮಾಡುತ್ತಾ ಬಂದಿದ್ದೆವು. ಈಗ ಸರ್ಕಾರ ಈ ಜಾಗದಲ್ಲಿ ಅಧಿಕೃತ ಗಣಿಕಾರಿಕೆಗೆ ಅವಕಾಶ ನೀಡುತ್ತಿರುವ ಹಿನ್ನೆಲೆಯಲ್ಲಿ ನಾವು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಸಿದ್ದೇವೆ. 2 ಎಕರೆ ಜಮೀನಿನಲ್ಲಿ ಕಾನೂನಿಗೆ ಅನುಗುಣವಾಗಿ ಕೆಲಸ ಮಾಡಬೇಕೆಂಬ ಉದ್ದೇಶವಿದೆ” ಎಂದು ಹೇಳಿದರು.

ಆದರೆ ಈ ಹಿಂದೆ ಹಣ ಪಡೆದು ಅನುಮತಿಸಿದ್ದ ವ್ಯಕ್ತಿಯೇ ಈಗ ಜಮೀನಿನ ಮೇಲೆ ಹಕ್ಕು ಹುರಿತೊರೆಸಿ ಗಣಿ ಮಂಜೂರಿಗೆ ಅಡ್ಡಿಯಾಗುತ್ತಿದ್ದಾರೆ. “ಈ ತೊಂದರೆಯಿಂದಾಗಿ ಭೋವಿ ಜನಾಂಗದ ನಾವು ಬದುಕು ಸಾಗಿಸಲು ಕಷ್ಟಕ್ಕೆ ಗುರಿಯಾಗುತ್ತಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯದಲ್ಲಿ ನಮ್ಮಗೆ ನ್ಯಾಯ ಒದಗಿಸಬೇಕು” ಎಂದು ಅವರು ಮನವಿ ಮಾಡಿದರು.

 

Related News

error: Content is protected !!