
ಮಾರುಕಟ್ಟೆಯಿಂದ ಮನೆಗೆ ತೆರಳಲು ಖಾಸಗಿ ಬಸ್ ಹತ್ತಿದ್ದ ಯುವತಿಗೆ ಮಾರ್ಗಮಧ್ಯೆ ಕಿರುಕುಳ ನೀಡಿದ ಘಟನೆ ನಡೆದಿದೆ. ಬಸ್ ಚಲಿಸಲು ಆರಂಭಿಸಿದ ಬಳಿಕ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಯುವಕನೊಬ್ಬ ಯುವತಿಯನ್ನು ಪದೇಪದೇ ಅನುಚಿತವಾಗಿ ಮುಟ್ಟಿದ್ದಾನೆ ಎನ್ನಲಾಗಿದೆ.
ಯುವಕನ ಕೈಯಲ್ಲಿ ಐಫೋನ್ ಇದ್ದರೂ, ಆತನ ವರ್ತನೆ ಮಾತ್ರ ಅಸಭ್ಯವಾಗಿತ್ತು. ಕೆಲ ಬಾರಿ ಕಿರುಕುಳ ನೀಡಿದ ಬಳಿಕ ಯುವತಿ ಭಯಪಡದೆ ಧೈರ್ಯದಿಂದ ಘಟನೆಯನ್ನು ತನ್ನ ಮೊಬೈಲ್‌ನಲ್ಲಿ ದಾಖಲಿಸಿಕೊಂಡಿದ್ದಾರೆ.
ಸುಮಾರು 9 ಕಿಲೋಮೀಟರ್ ಪ್ರಯಾಣದ ಬಳಿಕ ಬಸ್ ನಿಲ್ದಾಣ ತಲುಪುತ್ತಿದ್ದಂತೆ ಯುವತಿ ನಡೆದ ಘಟನೆಯ ಬಗ್ಗೆ ಕಂಡಕ್ಟರ್‌ಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ತಕ್ಷಣ ಮಧ್ಯಪ್ರವೇಶಿಸಿದ ಕಂಡಕ್ಟರ್, ಯುವಕನನ್ನು ಬಸ್‌ನಿಂದ ಕೆಳಗಿಳಿಸಿದ್ದಾರೆ.
ಈ ವೇಳೆ ಕಂಡಕ್ಟರ್, ತಾವು ಸುಮಾರು 15 ವರ್ಷಗಳಿಂದ ಬಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಮಹಿಳೆಯರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದ್ದಾರೆ.
ಕೈಯಲ್ಲಿ ದುಬಾರಿ ಮೊಬೈಲ್ ಅಥವಾ ಯಾವುದೇ ವಸ್ತು ಇದ್ದ ಮಾತ್ರಕ್ಕೆ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ ಹಕ್ಕು ಯಾರಿಗೂ ಇರುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಗೌರವವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ.
ಇಂತಹ ಘಟನೆ ಎದುರಾದಾಗ ಸಾಧ್ಯವಾದಷ್ಟು ಸುರಕ್ಷಿತವಾಗಿ ಸಾಕ್ಷ್ಯ ದಾಖಲಿಸಿಕೊಂಡು, ಬಸ್ ಸಿಬ್ಬಂದಿ ಅಥವಾ ಪೊಲೀಸರಿಗೆ ತಕ್ಷಣ ಮಾಹಿತಿ ನೀಡುವುದು ಅಗತ್ಯ.






