ಸೋಶಿಯಲ್‌ ಮೀಡಿಯಾದಲ್ಲಿ ಇತ್ತೀಚೆಗೆ ವೈರಲ್‌ ಆದ ಫೋಟೋ ಹಾಗೂ ವಿಡಿಯೋಗಳ ಹಿನ್ನೆಲೆ, ತಮಗೆ ಬ್ರೇಕಪ್‌ ಆಗಿದೆ ಎಂಬ ಸುದ್ದಿಗಳಿಗೆ ನಟಿ ಸೋನು ಗೌಡ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ವಿಡಿಯೋ ಮೂಲಕ ಮಾತನಾಡಿದ ಅವರು, “ನನಗೆ ಯಾವುದೇ ರೀತಿಯ ಬ್ರೇಕಪ್‌ ಆಗಿಲ್ಲ” ಎಂದು ಹೇಳಿದ್ದಾರೆ.

ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ ಸೋನು, “ನನ್ನ ಜೀವನದಲ್ಲಿ ನನ್ನ ಮನೆಯಲ್ಲಿರುವ ನಾಯಿಗಳು ನನಗೆ ತುಂಬ ಪ್ರಿಯ. ಬ್ರೇಕಪ್‌ ಆಯಿತಾ ಎಂದು ಸಾಕಷ್ಟು ಜನ ಕಾಮೆಂಟ್‌ ಮಾಡುತ್ತಿದ್ದಾರೆ. ಆದರೆ ಇದು ನಿಜವಲ್ಲ. ಅನಾರೋಗ್ಯದಿಂದ ನನ್ನ ಸ್ನೇಹಿತನೊಬ್ಬರು ಮೃತಪಟ್ಟಿದ್ದಾರೆ. ಅದರಿಂದ ನನಗೆ ತುಂಬ ದುಃಖವಾಗಿದೆ” ಎಂದು ತಿಳಿಸಿದ್ದಾರೆ.

ಅವರು ಮುಂದುವರೆದು, “ನಾಲ್ಕು ವರ್ಷಗಳ ಹಿಂದೆ ನಾವು ರಿಲೇಶನ್‌ಶಿಪ್‌ನಲ್ಲಿ ಇದ್ದೆವು. ನಂತರ ಕೆಲ ಕಾರಣಗಳಿಂದ ಬೇರ್ಪಟ್ಟೆವು. ಆ ನೆನಪುಗಳನ್ನು ಮರೆತೇ ಬಿಡಬೇಕು ಎಂದರೂ ಸಾಧ್ಯವಾಗುತ್ತಿಲ್ಲ. ಅವರು ನನ್ನನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನಿಸಿದ್ದರು. ಆದರೆ ನಾನು ಮಾತನಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಈಗ ಪಶ್ಚಾತ್ತಾಪವಾಗುತ್ತಿದೆ” ಎಂದು ಹೇಳಿದ್ದಾರೆ.

ಸೋನು ಗೌಡ ಅವರು ತಮ್ಮ ಭಾವನೆಗಳನ್ನು ಹಂಚಿಕೊಂಡು, “ಅವರು ನನಗೆ ಮೇಲ್‌ ಮಾಡಿದ್ದರು. ಆದರೆ ನಾನು ಸಾಮಾನ್ಯವಾಗಿ ಮೇಲ್‌ಗಳನ್ನು ಓದುವುದಿಲ್ಲ. ಹೀಗಾಗಿ ಅದು ಗಮನಕ್ಕೆ ಬಂದಿಲ್ಲ. ಈಗ ಅದನ್ನು ಓದಿದ ಮೇಲೆ ತುಂಬ ಬೇಸರವಾಗುತ್ತಿದೆ. ಇದು ಯಾವುದೇ ನಾಟಕವಲ್ಲ, ನಿಜವಾದ ಭಾವನೆ. ನೆಗೆಟಿವ್‌ ಕಾಮೆಂಟ್‌ಗಳ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ” ಎಂದು ಹೇಳಿದ್ದಾರೆ.

ಅವರ ಸ್ನೇಹಿತ ಕಳುಹಿಸಿದ್ದ ಕೊನೆಯ ಸಂದೇಶದ ಬಗ್ಗೆ ಮಾತನಾಡಿದ ಅವರು, “ನಾಳೆ ಬದುಕಿರುತ್ತೀನೋ ಇಲ್ಲವೋ ಗೊತ್ತಿಲ್ಲ. ನಿನಗೆ ಮಾತಾಡಬೇಕು ಅನ್ನಿಸುತ್ತಿದೆ, ಆದರೆ ಆಗುವುದಿಲ್ಲ ಅನಿಸುತ್ತಿದೆ. ನನಗೆ ಏನಾದರೂ ಆದರೆ ನೋಡಲು ಬರಬೇಡ, ದುಃಖಪಡಬೇಡ. ಮುಂದೆ ಜನ್ಮ ಇದ್ದರೆ ಮತ್ತೆ ಸಿಗು, ಮಿಸ್‌ ಯು” ಎಂದು ಮಾರ್ಚ್‌ 24ರಂದು ಮೇಲ್‌ ಮಾಡಿದ್ದರು. ಸಾವಿರ ಮೇಲ್‌ಗಳ ನಡುವೆ ಈ ಒಂದು ಮೇಲ್‌ ಈಗ ನನ್ನನ್ನು ಹೆಚ್ಚು ಕಾಡುತ್ತಿದೆ” ಎಂದು ತಿಳಿಸಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡದ್ದಕ್ಕೆ ಕೆಲವರು ನೆಗೆಟಿವ್‌ ಪ್ರತಿಕ್ರಿಯೆ ನೀಡುತ್ತಿರುವ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದರು. “ನಾಲ್ಕು ವರ್ಷ ಪ್ರೀತಿ ಮಾಡಿದ ವ್ಯಕ್ತಿ ಬಗ್ಗೆ ಫೀಲ್‌ ಆಗೋದು ತಪ್ಪೇನು? ನಾನು ದುಃಖದಲ್ಲಿದ್ದಾಗ ವಿಡಿಯೋ ಹಂಚಿಕೊಂಡರೆ ಅದನ್ನು ಸಿಂಪಥಿ ಎಂದು ಹೇಳುತ್ತಾರೆ. ಆದರೆ ಕೆಲವರು ಪಾಸಿಟಿವ್‌ ಆಗಿ ಮಾತನಾಡಿದ್ದು ಖುಷಿಯಾಗಿದೆ” ಎಂದು ಸೋನು ಗೌಡ ಹೇಳಿದ್ದಾರೆ.

Related News

error: Content is protected !!