ಬೆಂಗಳೂರು ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರೇಮ ವಿಫಲತೆಯಿಂದ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಅಭಿಷೇಕ್ (23) ಮೃತ ಯುವಕನಾಗಿದ್ದು, ಇತ್ತೀಚೆಗಷ್ಟೇ ಖಾಸಗಿ ಕಾಲೇಜಿನಲ್ಲಿ ಬಿಕಾಂ ಪೂರ್ಣಗೊಳಿಸಿದ್ದನು.
ಮಾಹಿತಿಯ ಪ್ರಕಾರ, ಅಭಿಷೇಕ್ ತನ್ನ ಸಹಪಾಠಿ ಯುವತಿಯೊಂದಿಗೆ ಕಳೆದ 6-7 ವರ್ಷಗಳಿಂದ ಪ್ರೀತಿಯಲ್ಲಿ ಇದ್ದನು. ಈ ವಿಷಯ ಯುವತಿಯ ಕುಟುಂಬಕ್ಕೂ ತಿಳಿದಿದ್ದು, ಮದುವೆಗೆ ಅವರು ನಿರಾಕರಿಸಿದ್ದರು. ಇದರಿಂದ ಯುವತಿ ಅಭಿಷೇಕ್‌ನಿಂದ ದೂರವಾಗಲು ಪ್ರಾರಂಭಿಸಿದ್ದಳು.
ಈ ಬೆಳವಣಿಗೆಯಿಂದ ಮನನೊಂದ ಅಭಿಷೇಕ್, ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಯಲಹಂಕ ನ್ಯೂಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
