ರೈಲ್ವೇ ಕ್ಷೇತ್ರದಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಮಹತ್ವದ ಅವಕಾಶ ದೊರೆತಿದೆ. ರೈಲ್ವೇ ನೇಮಕಾತಿ ಮಂಡಳಿ (RRB) ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳ ನೇಮಕಾತಿಗಾಗಿ ಕಿರು ಅಧಿಸೂಚನೆ ಬಿಡುಗಡೆ ಮಾಡಿದ್ದು, ಒಟ್ಟು 11,127 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಈ ನೇಮಕಾತಿ ಬೆಂಗಳೂರು, ಸಿಕಂದರಾಬಾದ್, ಮುಂಬೈ, ಚೆನ್ನೈ ಸೇರಿದಂತೆ ದೇಶದ 21 ರೈಲ್ವೇ ಮಂಡಳಿಗಳ ವ್ಯಾಪ್ತಿಯಲ್ಲಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು 2026 ಮೇ 15ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2026 ಜೂನ್ 14 ಆಗಿದೆ.

ಪ್ರಮುಖ ದಿನಾಂಕಗಳು:

ಕಿರು ಅಧಿಸೂಚನೆ ಬಿಡುಗಡೆ: 16 ಮಾರ್ಚ್ 2026

ಅರ್ಜಿ ಪ್ರಾರಂಭ: 15 ಮೇ 2026 (ತಾತ್ಕಾಲಿಕ)

ಕೊನೆಯ ದಿನಾಂಕ: 14 ಜೂನ್ 2026 (ತಾತ್ಕಾಲಿಕ)

ಪರೀಕ್ಷೆ ದಿನಾಂಕ: ನಂತರ ಪ್ರಕಟಣೆ

ಅಡ್ಮಿಟ್ ಕಾರ್ಡ್: ಪರೀಕ್ಷೆಗೆ 4 ದಿನ ಮೊದಲು

ಅರ್ಜಿ ಶುಲ್ಕ:

ಸಾಮಾನ್ಯ / ಒಬಿಸಿ / ಇಡಬ್ಲ್ಯುಎಸ್: ₹500

ಎಸ್ಸಿ / ಎಸ್ಟಿ / ಪಿಡಬ್ಲ್ಯುಡಿ / ಮಾಜಿ ಸೈನಿಕರು: ₹250

ಪಾವತಿ: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಮೊಬೈಲ್ ವಾಲೆಟ್

ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಪಾಸಾಗಿರಬೇಕು. ಜೊತೆಗೆ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಅಥವಾ ಡಿಪ್ಲೊಮಾ / ಎಂಜಿನಿಯರಿಂಗ್ ಪದವಿ ಹೊಂದಿರಬೇಕು.

ವಯೋಮಿತಿ:
2026 ಜುಲೈ 1ರ ಪ್ರಕಾರ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ.

ಎಸ್ಸಿ / ಎಸ್ಟಿ: 5 ವರ್ಷ ಸಡಿಲಿಕೆ

ಒಬಿಸಿ: 3 ವರ್ಷ ಸಡಿಲಿಕೆ

ಆಯ್ಕೆ ವಿಧಾನ:
ಅಭ್ಯರ್ಥಿಗಳು ಕೆಳಗಿನ ಹಂತಗಳನ್ನು ಎದುರಿಸಬೇಕು:

CBT 1 (ಮೊದಲ ಹಂತದ ಲಿಖಿತ ಪರೀಕ್ಷೆ)

CBT 2 (ಎರಡನೇ ಹಂತದ ಪರೀಕ್ಷೆ)

ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್

ದಾಖಲೆ ಪರಿಶೀಲನೆ

ವೈದ್ಯಕೀಯ ಪರೀಕ್ಷೆ

ಈ ಎಲ್ಲಾ ಹಂತಗಳಲ್ಲಿ ಉತ್ತೀರ್ಣರಾದವರಿಗೆ ಅಂತಿಮವಾಗಿ ನೇಮಕಾತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸುವುದು ಸೂಕ್ತ.

Related News

error: Content is protected !!