ಪಟ್ಟಣದಲ್ಲಿ ಹುಚ್ಚುನಾಯಿ ಹಾವಳಿಯಿಂದಾಗಿ 13 ಜನಕ್ಕೆ ಕಚ್ಚಿ ಪಟ್ಟಣವನ್ನು ಬೆಚ್ಚಿ ಬೀಳಿಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಜಮ್ಮಾ ಮಸೀದಿ, ಮುದಕನಕಟ್ಟಿ, ತೇರು ಬಯಲು, ಮುಖ್ಯ ರಸ್ತೆ ಗಳಲ್ಲಿ, ಈ ನಾಯಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ವಿಪರೀತ ಸಮಸ್ಯೆ ಉಂಟುಮಾಡಿ ಓಡಾಡಲು ಭಯಭೀತರಾಗುವಂತೆ ಮಾಡಲಾಗಿದೆ.
ಹುಚ್ಚು ನಾಯಿ ಕಡಿತದಿಂದಾಗಿ ಪ್ರಥಮ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆ ತೆರಳಿದ ಗಾಯಾಳುಗಳಿಗೆ ಅಲ್ಲಿನ ವ್ಯಂಟರ್ ರೇಬಿಸ್,ಟಿ.ಟಿ.ಅಂತಹ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ ಎಂದು ಹೇಳಲಾಗಿದೆ ಸಂಬಂಧ ಪಟ್ಟ ಇಲಾಖೆಯವರು ನಾಯಿಗಳನ್ನು ನಿಯಂತ್ರಣದಲ್ಲಿ ಇಡುವಂತೆ ಸಾರ್ವಜನಿಕರ ಒತ್ತಾಯ ವಾಗಿದೆ.
ವರದಿ :ಮಣಿಕಂಠ ಬಿ
***
ನಾಯಿಗಳನ್ನು ಸುರಕ್ಷಿತವಾಗಿ ಇಡಲು ಮತ್ತು ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ
ಸಮಸ್ಯೆ ಆಗದಂತೆ ಕ್ರಮ ವಹಿಸುವಂತೆ ಸುಪ್ರೀಂ ಕೋರ್ಟ್ ಆದೇಶ ಇದ್ದರೂ ಸಹ ನಾಯಿಗಳ ಬಗ್ಗೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ವರ್ಗದವರು ಮುಂಜಾಗ್ರತವಾಗಿ ಯಾವುದೆ ಕ್ರಮ ಕೈಗೊಂಡಿಲ್ಲ ಹಾಗೇ ಸರ್ಕಾರಿ ಆಸ್ಪತ್ರೆಯಲ್ಲಿ ಇದರ ಸಂಬಂಧ ಸರಿಯಾದ ಚಿಕಿತ್ಸೆ ಸಹ ಇಲ್ಲದೆ ಇರುವುದು ತುಂಬಾ ಬೇಸರದ ವಿಚಾರ
-ಸಂದೀಪ
ವಕೀಲರು.
***
ಇದು ಹುಚ್ಚುನಾಯಿ ಅಥವಾ ಸಾಮಾನ್ಯ ನಾಯಿ ಅಂತ ಹೇಳಲು ಆಗುವುದಿಲ್ಲ ಇದು ನಿನ್ನೆ ರಾತ್ರಿ ಏಕಾಏಕಿ ಸಾರ್ವಜನಿಕರ ಮೇಲೆ ದಾಳಿ ಮಾಡಿದೆ ತಕ್ಷಣ ಆ ನಾಯಿಯನ್ನು ಹಿಡಿದು ಮುಂದೆ ಆಗುವ ಅನಾಹುತವನ್ನು ತಪ್ಪಿಸಲಾಗಿದೆ ತೊಂದರೆಯಾದ ಗಾಯಾಳುಗಳಿಗೆ ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
-ಅನುಷಾ
ಪ.ಪಂ.ಕಿರಿಯ ಆರೋಗ್ಯ ನಿರೀಕ್ಷಕರು.
