ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಪೇಟೆಯಲ್ಲಿ ಗೋವು ಕಳವು ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿ ಮಹತ್ವದ ವಿಜಯ ಸಾಧಿಸಿದ್ದಾರೆ. ಮಂಜುನಾಥ ಹೊಟೇಲ್ ಎದುರು ಖಾಲಿ ಜಾಗದಲ್ಲಿ ಮಲಗಿದ್ದ ಗೋವುಗಳನ್ನು ಕದ್ದ ಪ್ರಕರಣಕ್ಕೆ ಸಂಬಂಧಿಸಿ ಶ್ರೀಧರ ಬಿಜೂರು ಎಂಬುವವರು ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ಆರಂಭಿಸಿದ್ದರು.

ಈ ಪ್ರಕರಣದಲ್ಲಿ ಕುಂದಾಪುರದ ಕೋಡಿ ಕಸಬಾ ನಿವಾಸಿಗಳಾದ ಅಬ್ದುಲ್ ಸಮಾದ್ (27) ಮತ್ತು ಅಬ್ದುಲ್ ರೆಹಮಾನ್ (25) ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಹಾಲಾಡಿ ರಸ್ತೆಯ ಕೊಟೇಶ್ವರದಲ್ಲಿರುವ ಸನ್‌ರೈಸ್ ಫ್ಯಾಕ್ಟರಿಯ ಬಳಿ ಕಾರ್ಯಾಚರಣೆ ನಡೆಸಿ ಬೈಂದೂರು ಪೊಲೀಸರು ವಶಕ್ಕೆ ಪಡೆದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಅರುಣ್ ಕೆ. ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್‌ಪಿ ಎಸ್.ಟಿ. ಸಿದ್ದಲಿಂಗಪ್ಪ, ಕುಂದಾಪುರ ಉಪವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಕೆ.ಯು., ಬೈಂದೂರು ವೃತ್ತ ನಿರೀಕ್ಷಕ ಸವೀತ್ರ ತೇಜ್, ಪಿಎಸ್‌ಐ ತಿಮ್ಮೇಶ್ ಬಿ.ಎನ್., ಎಎಸ್‌ಐ ಸೂರ ನಾಯ್ಕ ಹಾಗೂ ಪೊಲೀಸ್ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಆರೋಪಿಗಳಿಂದ ಕೃತ್ಯದಲ್ಲಿ ಬಳಸಿದ ಎರಡು ಕಾರುಗಳು, ಮೊಬೈಲ್‌ಗಳು ಹಾಗೂ ಚೂರಿ ವಶಪಡಿಸಿಕೊಳ್ಳಲಾಗಿದೆ. ಘಟನೆಯ ಕುರಿತಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ.

error: Content is protected !!