ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್‌ ತೂಗುದೀಪ ಅವರ ಜಾಮೀನು ರದ್ದಾಗುವ ಸಾಧ್ಯತೆಗಳು ಚರ್ಚೆಗೆ ಬಂದಿರುವ ನಡುವೆ, ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಇದೀಗ ಭಾರೀ ಗದ್ದಲ ಸೃಷ್ಟಿಸಿದೆ.

ರಮ್ಯಾ, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಟ್ವೀಟ್‌ ಮಾಡುತ್ತಿದ್ದಂತೆಯೇ, ದರ್ಶನ್‌ ಅಭಿಮಾನಿಗಳಿಂದ ಅವಳಿಗೆ ನಿಂದನೆ ಹಾಗೂ ಅಪಮಾನಕಾರಿ ಸಂದೇಶಗಳ ಮಳೆಯೇ ಸುರಿಯಿತು. ‘ಅಮ್ಮ’, ‘ಅಕ್ಕ’ ಎನ್ನುವ ಪದಬಳಕೆಗಳ ಮೂಲಕ ಪರ್ಸನಲ್ ಟಿಕೆಟ್‌ ತೆಗೆದುಕೊಂಡ ಅಭಿಮಾನಿಗಳ ವಿಡಂಬನೆಗೆ ತುತ್ತಾದ ರಮ್ಯಾ, ತಾನು ಪಡೆದ ಹಲವಾರು ಮೆಸೇಜ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡು, “ನಾನು ಕೇಳಿದಂತಷ್ಟೆ, ರೇಣುಕಾಸ್ವಾಮಿ ಮತ್ತು ನನ್ನ ನಡುವೆನಾದರೂ ವ್ಯತ್ಯಾಸವಿದೆಯೆ?” ಎಂದು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ, ನಟಿ ರಕ್ಷಿತಾ ಪ್ರೇಮ್‌ ಕೂಡ ಈ ವಿಚಾರದ ಹಿನ್ನೆಲೆಯಲ್ಲಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ, ನಾನು ಏನನ್ನು ವೈರಲ್‌ ಆಗುವುದನ್ನು ನೋಡಲು ಇಚ್ಛಿಸುತ್ತೇನೆ ಗೊತ್ತಾ? ಕನಿಷ್ಟ ಮಾನವೀಯತೆʼ ಎಂಬ ಸಂದೇಶವಿರುವ ಸ್ಟೋರಿಯನ್ನು ಪೋಸ್ಟ್‌ ಮಾಡಿದ್ದು, ಅದು ಈಗ ಮತ್ತೊಂದು ಚರ್ಚೆಗೆ ತುತ್ತಾಗಿದೆ.

ಈ ಸ್ಟೋರಿ ರಮ್ಯಾಗೆ ನೀಡಿದ ಟಾಂಗ್‌ ಎಂದು ದರ್ಶನ್‌ ಅಭಿಮಾನಿಗಳು ಹೇಳಿಕೆ ನೀಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಅಭಿಪ್ರಾಯಗಳು ಹರಿದುಬರುತ್ತಿವೆ.

 

Related News

error: Content is protected !!