ಉತ್ತರಾಖಂಡದ ಕಾಶಿಪುರದಲ್ಲಿ ನಡೆದ ಅಮಾನುಷ ಕೃತ್ಯದಿಂದ ಸ್ಥಳೀಯರು ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳ ಬಳಕೆದಾರರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಯುವಕನೊಬ್ಬ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಈ ಕ್ರೂರ ಘಟನೆ ಘಟಣಾ ಸ್ಥಳದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಹಸುವಿನ ಮಾಲೀಕ ಅಶ್ವನಿ ಕುಮಾರ್ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ ಅಮರ್ ಚಂದ್ ತಿಳಿಸಿದ್ದಾರೆ.
ಈ ಘಟನೆಯ ದೃಶ್ಯಾವಳಿ ವೈರಲ್ ಆಗುತ್ತಿರುವುದರಿಂದ ದೇಶದಾದ್ಯಂತ ಜನತೆ ಆಘಾತದಲ್ಲಿದ್ದಾರೆ. “ಮೂಕ ಪ್ರಾಣಿಗಳು ಕೂಡ ಇಂತಹ ಕೃತ್ಯಗಳಿಂದ ಸುರಕ್ಷಿತವಿಲ್ಲವೆಯೆ?” ಎಂಬ ಪ್ರಶ್ನೆ ಎತ್ತುತ್ತಾ, ಕೃತ್ಯ ಎಸಗಿದ ವ್ಯಕ್ತಿಗೆ ಕಠಿಣ ಶಿಕ್ಷೆ ನೀಡಬೇಕೆಂಬ ಆಗ್ರಹಗಳು ವ್ಯಾಪಕವಾಗಿ ವ್ಯಕ್ತವಾಗುತ್ತಿವೆ.
ಪಶುಪಾಲಕರಲ್ಲಿ ಈ ಘಟನೆಯಿಂದ ಭಯ ಮತ್ತು ಕಳವಳ ಮನೆಮಾಡಿದ್ದು, ಮುಕ್ತಾಯಕ್ಕೆ ಬರಬೇಕಾದಂತಹ ನೈತಿಕ ಕುಸಿತದ ಸ್ಥಿತಿಯನ್ನು ಈ ಘಟನೆ ಪ್ರತಿಬಿಂಬಿಸುತ್ತಿದೆ. ಮೇಲಿನ ಹಕ್ಕುಗಳನ್ನು ರಕ್ಷಿಸಲು ಹೆಚ್ಚು ಕಟ್ಟುನಿಟ್ಟಾದ ಕಾನೂನು ಕ್ರಮಗಳು ಅಗತ್ಯವೆಂಬ ಬೇಡಿಕೆ ಮತ್ತೆ ಕೇಳಿಬರುತ್ತಿದೆ.
