ಕೊಡಗು: ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೊಂಡಂಗೇರಿ ಗ್ರಾಮದಲ್ಲಿ ಸೋಮವಾರ ಸಂಜೆ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಮನೆಯ ಬಳಿ ನೀರು ಕೇಳಿದ ನೆಪದಲ್ಲಿ ಬಂದಿದ್ದ ವ್ಯಕ್ತಿಯೊಬ್ಬನು ಅತ್ತೆ ಹಾಗೂ ಸೊಸೆಯ ಮೇಲೆ ಚಾಕು ದಾಳಿ ನಡೆಸಿ ಬೆಳ್ಳಿ ಸರಗಳನ್ನು ಲೂಟಿ ಮಾಡಿದ್ದಾನೆ.
ಪ್ರಾಥಮಿಕ ಮಾಹಿತಿಯಂತೆ, ಮನುಷ್ಯತ್ವ ಮರೆತ ಆರೋಪಿ ಮುನಾವರ್ ಎಂಬಾತ, ಮನೆಯವರಿಗೆ ನೀರು ಕೇಳಿ ಭರವಸೆ ಹುಟ್ಟುಹಾಕಿದ. ಮಹಿಳೆಯರು ನೀರು ತರಲು ಹೊರಟಂತೆಯೇ, ಮುನಾವರ್ ಆಕೆಯ ಮೇಲೆ ಏಕಾಏಕಿ ಚಾಕು ಇರಿದು ಬೆದರಿಕೆ ಹಾಕಿ ಗಲಭೆ ಸೃಷ್ಟಿಸಿ ಬೆಳ್ಳಿ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಆರೋಪಿಯ ಚಳನವಳಿಗಳನ್ನು ಅನುಮಾನಗೊಂಡ ಸ್ಥಳೀಯರು ತಕ್ಷಣ ಬೆನ್ನಟ್ಟಿ ಹೊಡೆದು ಹಿಡಿದು ಪೊಲೀಸರು ಬಾಗಿಲಿಗೆ ಒಪ್ಪಿಸಿದ್ದಾರೆ. ಈ ಘಟನೆಯ ನಂತರ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದು, ಮತ್ತಷ್ಟು ಮಾಹಿತಿಗಾಗಿ ವಿಚಾರಣೆ ಮುಂದುವರಿದಿದೆ.
ನ್ಯಾಯ ನೀಡುವಂತೆ ಗ್ರಾಮಸ್ಥರ ಒತ್ತಾಯ.
ಘಟನೆಯ ಬಳಿಕ ಗ್ರಾಮಸ್ಥರು ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರ ಬಳಿ ಒತ್ತಾಯಿಸಿದ್ದಾರೆ. ಮಹಿಳೆಯರ ಭದ್ರತೆಗಾಗಿ ನಿರಂತರ ಪಾರುಪತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಅವರ ಬೇಡಿಕೆ.
