ಚಿತ್ರದುರ್ಗ, ಜುಲೈ 19: ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ವಶದಲ್ಲಿರುವ ಅನೇಕ ವಾಹನಗಳನ್ನು ಜುಲೈ 23ರಂದು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
ಈಚೆಗೆ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ವಿವಿಧ ಪ್ರಕರಣಗಳ ತನಿಖೆಯ ಸಂದರ್ಭದಲ್ಲಿ ವಶಪಡಿಸಿಕೊಂಡಿದ್ದ ವಾಹನಗಳನ್ನು ಸಂಬಂಧಿತ ಮಾಲೀಕರು ಯಾವುದೇ ಹಕ್ಕು ಸಾಧನೆ ಮಾಡದೇ ಇದ್ದ ಕಾರಣದಿಂದಾಗಿ, ಮೋಟಾರ್ ವಾಹನ ಕಾಯ್ದೆಯ ನಿಯಮಾನುಸಾರ, ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 23 ಮೋಟಾರ್ ಸೈಕಲ್, 2 ಆಟೋ ರಿಕ್ಷಾ ಮತ್ತು 1 ಆಲ್ಟೋ ಕಾರು ಸೇರಿದಂತೆ ಒಟ್ಟು 26 ವಾಹನಗಳನ್ನು ಹರಾಜುಮಾಡಲಾಗುತ್ತದೆ.
ಈ ಹರಾಜಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಮೇಲಾಧಿಕಾರಿಗಳ ಅನುಮತಿ ಮತ್ತು ನ್ಯಾಯಾಲಯದ ಅನುಮೋದನೆ ಪಡೆದುಕೊಳ್ಳಲಾಗಿದೆ. ಹರಾಜು ಪ್ರಕ್ರಿಯೆ ಜುಲೈ 23 ಬುಧವಾರದಂದು ಪೊಲೀಸ್ ಠಾಣೆಯ ಆವರಣದಲ್ಲಿ ನಡೆಯಲಿದೆ.
ಹರಾಜಿನಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತರು ರೂ.10,000 ನಗದು ಮುಂಗಡವಾಗಿ ಪಾವತಿಸಿ ಟೋಕನ್ ಪಡೆದುಕೊಳ್ಳಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅವರನ್ನು ಈ ಕೆಳಗಿನ ಮೊಬೈಲ್ ಸಂಖ್ಯೆಗಳಲ್ಲಿ ಸಂಪರ್ಕಿಸಬಹುದು:
📱 94808 03131 / 94808 03148
ಈ ಅವಕಾಶವನ್ನು ಸಾರ್ವಜನಿಕರು ಬಳಸಿಕೊಳ್ಳುವಂತೆ ಗ್ರಾಮಾಂತರ ಪೊಲೀಸ್ ಇಲಾಖೆ ಮನವಿ ಮಾಡಿದೆ
