ಮಂಗಳೂರು: ಮುಡಿಪು ಮಾರ್ಗವಾಗಿ ಸಾಗುತ್ತಿದ್ದ ಕೆಎಸ್ಆರ್ಟಿಸಿ ಬಸ್ದಲ್ಲಿ ನಿದ್ದೆಹೋಗಿದ್ದ ಯುವತಿಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಬಸ್ ನಿರ್ವಾಹಕನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನು ಬಾಗಲಕೋಟೆ ಜಿಲ್ಲೆ ಮೂಲದ ಪ್ರದೀಪ್ ಎಂಬಾತನೆಂಬ ಮಾಹಿತಿ ಲಭ್ಯವಾಗಿದೆ. ಬುಧವಾರ ರಾತ್ರಿ ಮುಡಿಪುವಿನಿಂದ ಮಂಗಳೂರಿಗೆ ಬರುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಯುವತಿ ಬಸ್ನಲ್ಲೇ ನಿದ್ದೆಮಗ್ನವಾಗಿದ್ದ ವೇಳೆ, ನಿರ್ವಾಹಕ ಆಕೆಯ ಖಾಸಗಿ ಅಂಗಾಂಗಗಳನ್ನು ಸ್ಪರ್ಶಿಸಲು ಯತ್ನಿಸಿದ. ಈ ಕೃತ್ಯವನ್ನು ಗಮನಿಸಿದ್ದ ಮತ್ತೊಬ್ಬ ಪ್ರಯಾಣಿಕನು ಮೊಬೈಲ್ ಫೋನ್ನಲ್ಲಿ ಈ ದೃಶ್ಯವನ್ನು ದಾಖಲಿಸಿ, , ವಿಡಿಯೋ ವೈರಲ್ ಮಾಡಿದ್ದಾರೆ.
ವೀಡಿಯೋ ವೈರಲ್ ಆದ ತಕ್ಷಣ ಪೊಲೀಸರು ಸ್ಪಂದಿಸಿ ಪ್ರದೀಪ್ ಎಂಬ ನಿರ್ವಾಹಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ಬಗ್ಗೆ ಮುಂದಿನ ತನಿಖೆ ಜಾರಿಯಲ್ಲಿದೆ.
ಸರ್ಕಾರಿ ಬಸ್ನಲ್ಲಿ ಈ ರೀತಿ ನಡೆದಿರುವ ಅಸಭ್ಯ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸಂಬಂಧಿತ ಇಲಾಖೆ ನಿರ್ವಾಹಕನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…
ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…
ಹುಬ್ಬಳ್ಳಿ: ಮೂತ್ರ ವಿಸರ್ಜನೆಗೆಂದು ಹೊರಟಿದ್ದ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ದುರ್ಘಟನೆ ಹುಬ್ಬಳ್ಳಿಯ ಚನ್ನಪೇಟೆ…
ಹಾವೇರಿ: ಹಾನಗಲ್ ಸರ್ಕಲ್ ಇನ್ಸ್ಪೆಕ್ಟರ್ (ಸಿಪಿಐ) ಆಂಜನೇಯ ಎನ್.ಎಚ್. ಅವರನ್ನು ಸೇವೆಯಿಂದ ಅಮಾನತುಗೊಳಿಸುವ ಕ್ರಮ ಜರುಗಿದ್ದು, ಇದಕ್ಕೆ ಕಾರಣವಾಗಿರುವುದು ಸಮುದಾಯದ…
ಬೆಂಗಳೂರು ನಗರದಲ್ಲಿ ಮಕ್ಕಳ ಸುರಕ್ಷತೆಗಾಗಿ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಮದ್ಯಪಾನ ಮಾಡಿಕೊಂಡು…