ಗದಗ ಜಿಲ್ಲೆ ಗದಗ ತಾಲೂಕಿನ ಅಸುಂಡಿ ಗ್ರಾಮದಲ್ಲಿ ಮದುವೆ ಸಂಭ್ರಮಕ್ಕೆ ಮುನ್ನವೇ ಘಟಿಸಿದ విషಾದಾತ್ಮಕ ಘಟನೆ ಎಲ್ಲರ ಮನಸ್ಸನ್ನು ಕದ್ದಿದೆ. ಸಾಯಿರಾಬಾನು ನದಾಫ್ (29) ಎಂಬ ಯುವತಿ ಕಿರುಕುಳದಿಂದ ಬೇಸತ್ತುಕೊಂಡು ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೇ 8ರಂದು ಸಾಯಿರಾಬಾನು ಮದುವೆ ನಿಗದಿಯಾಗಿತ್ತು. ಮನೆಮಠದಲ್ಲಿ ಸಂತಸದ ವಾತಾವರಣವಿದ್ದರೂ, ಹಳೆಯ ಪ್ರೇಮ ಸಂಬಂಧದ ಯುವಕನ ಕಿರುಕುಳ ಆಕೆನನ್ನು ಸಾವಿನ ದಾರಿಗೆ ಒಯ್ಯಿತು. ದೆತ್ ನೋಟೊಂದನ್ನು ಬರೆದಿಟ್ಟುಕೊಂಡು ಆಕೆ ತನ್ನ ಜೀವನ ಅಂತ್ಯಗೊಳಿಸಿದ್ದಾರೆ.

ಮಾಹಿತಿಯ ಪ್ರಕಾರ, ಐದು ವರ್ಷಗಳ ಹಿಂದೆ ಮೈಲಾರಿ ಎಂಬ ಯುವಕನೊಂದಿಗೆ ಸಾಯಿರಾಬಾನುಗೆ ಪ್ರೇಮ ಸಂಬಂಧವಿತ್ತು. ನಂತರ ಅವರಿಬ್ಬರೂ ದೂರವಿದ್ದರು. ಆದರೆ ಬ್ರೇಕಪ್ ಆದರೂ ಮೈಲಾರಿ ಆಕೆಯನ್ನು ಪೀಡಿಸುತ್ತಿದ್ದ. ಮದುವೆ ಮಾಡದಂತೆ ಬಲವಂತ ಮಾಡುತ್ತಾ, “ನಿನ್ನ ಫೋಟೋ ಮತ್ತು ವೀಡಿಯೋ ವೈರಲ್ ಮಾಡುತ್ತೇನೆ” ಎಂದು ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.

ಈ ನಿರಂತರ ಕಿರುಕುಳ ಹಾಗೂ ಮಾನಸಿಕ ಒತ್ತಡಕ್ಕೆ ತತ್ತರಿಸಿದ ಸಾಯಿರಾಬಾನು, ಮದುವೆಗೂ ಕೆಲವೇ ದಿನಗಳು ಬಾಕಿ ಇರುವಾಗ ಆತ್ಮಹತ್ಯೆಗೆ ಶರಣಾಗಿರುವುದು ಶೋಕಾನ್ವಿತ ಸಂಗತಿಯಾಗಿದೆ.

ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾಯಿರಾಬಾನು ಬರೆದ ಡೆತ್ ನೋಟದ ಆಧಾರದ ಮೇಲೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

 

error: Content is protected !!