Latest

ಪ್ರಧಾನಿ ಆಗಮನದ ವೇಳೆ ಯುವಕ ಬ್ಯಾರಿಕೇಡ್ ಜಂಪ್ – ಕ್ಷಣಿಕ ಆತಂಕ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಇಂದು ನಗರದ ಮೆಟ್ರೋ ಮೂರನೇ ಹಂತ ಹಾಗೂ ವಂದೇ ಭಾರತ್ ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಿಸಿ ಉದ್ಘಾಟನೆ ನೆರವೇರಿಸಿದರು. ಈ ವೇಳೆ, ಭದ್ರತಾ ವಲಯದಲ್ಲಿ ಒಂದು ಅಸಹಜ ಘಟನೆ ನಡೆದು ಕೆಲ ಕ್ಷಣ ಗೊಂದಲ ಉಂಟಾಯಿತು.

ಸೌತ್ ಎಂಡ್ ಸರ್ಕಲ್ ಬಳಿ ಪ್ರಧಾನಿಯ ವಾಹನದ ಪಥಸಂಚಲನ ಸಾಗುತ್ತಿರುವ ಸಮಯದಲ್ಲಿ, ಯುವಕನೊಬ್ಬ ಅಕಸ್ಮಾತ್ ಬ್ಯಾರಿಕೇಡ್ ಹಾರಿ ರಸ್ತೆಯತ್ತ ಓಡುವ ಪ್ರಯತ್ನ ಮಾಡಿದ. ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ಎಚ್ಚರಗೊಂಡು ಅವನನ್ನು ತಡೆದರು.

ಘಟನೆ ಸಂಭವಿಸುವ ವೇಳೆಗೆ ಪ್ರಧಾನಿಯ ವಾಹನ ಅಲ್ಲಿತೆರಳಿತ್ತು. ಆದರೆ, ಪ್ರಧಾನಿಯ ಆಗಮನದ ಸಮಯಕ್ಕೆ ಸಮೀಪವೇ ನಡೆದ ಈ ಘಟನೆ ಸ್ಥಳದಲ್ಲಿ ಕ್ಷಣಿಕ ಆತಂಕವನ್ನು ಉಂಟುಮಾಡಿತು. ಪೊಲೀಸರು ಯುವಕನನ್ನು ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಂಡಿದ್ದು, ಅವನು ಬ್ಯಾರಿಕೇಡ್ ಹಾರಿ ಹೋಗಲು ಯತ್ನಿಸಿದ ಕಾರಣವನ್ನು ತಿಳಿಯಲು ತನಿಖೆ ಮುಂದುವರಿಸಿದ್ದಾರೆ.

nazeer ahamad

Recent Posts

ಮೂಡಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಮತ್ತೊಂದು ಆರೋಪ: 2018 ರಿಂದ 2023 ರವರೆಗೆ ಮುಖ್ಯ ಶಿಕ್ಷಕಿಯ ಮೇಲೆ ಲೈಂಗಿಕ ದೌರ್ಜನ್ಯ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಸಂದೇಶ್…

9 hours ago

ರಾಜ್ಯದಲ್ಲಿ ಪಾರ್ಲೆ-ಜಿ ಉತ್ಪಾದನೆ ಸ್ಥಗಿತ, ಬಿಸ್ಕೆಟ್ ಅಭಾವದ ಆತಂಕ

Iran-Israel ಸಂಘರ್ಷದ ಪರೋಕ್ಷ ಪರಿಣಾಮವಾಗಿ ರಾಜ್ಯದಲ್ಲಿ ಬಿಸ್ಕೆಟ್ ಅಭಾವದ ಭೀತಿ ಎದುರಾಗಿದೆ. ವಿಶೇಷವಾಗಿ ಮಕ್ಕಳಿಗೆ ಹೆಚ್ಚು ಬಳಸುವ Parle-G ಬಿಸ್ಕೆಟ್‌ಗಳ…

11 hours ago

ನವಲಗುಂದದಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಮುಖ್ಯಶಿಕ್ಷಕ ಬಂಧನ

ಧಾರವಾಡ ಜಿಲ್ಲೆಯ Navalgund ತಾಲೂಕಿನ ಒಂದು ಗ್ರಾಮದಲ್ಲಿ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಶಾಲೆಯ ಮುಖ್ಯಶಿಕ್ಷಕನ ವಿರುದ್ಧ 10 ವರ್ಷದ…

22 hours ago

ಮೇಲಾಧಿಕಾರಿ ಕಿರುಕುಳ ಆರೋಪ: ಪಾವಗಡದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಆತ್ಮಹತ್ಯೆ

ತುಮಕೂರು ಜಿಲ್ಲೆಯ Pavagada ಪಟ್ಟಣದಲ್ಲಿ ಹೃದಯ ಕಲುಕುವ ಘಟನೆ ನಡೆದಿದೆ. ಮೇಲಾಧಿಕಾರಿಗಳ ಕಿರುಕುಳದಿಂದ ಮನನೊಂದು ಅಧಿಕಾರಿಯೊಬ್ಬರು ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು…

22 hours ago

14ರ ಬಾಲಕನಿಂದ ಇಬ್ಬರು ಅಪ್ರಾಪ್ತ ಬಾಲಕಿಯರು ಗರ್ಭಿಣಿ? ವೈರಲ್ ವಿಡಿಯೋಗೆ ಆಕ್ರೋಶ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. X ನಲ್ಲಿ ವೈರಲ್ ಆಗಿರುವ ಈ ವಿಡಿಯೋ…

22 hours ago

ಕೊನೆಗೂ 21 ದಿನಗಳ ಬಳಿಕ ಅಣುಸ್ಥಾವರದ ಮೇಲೆ ಅಮೆರಿಕ ದಾಳಿ! ಇರಾನ್ ಅಣು ಕೇಂದ್ರ ವಿಕಿರಣ ಸೋರಿಕೆ ಭೀತಿ ಹೆಚ್ಚಳ?

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿರುವ ಬೆನ್ನಲ್ಲೇ United States ಮತ್ತು Israel ಪಡೆಗಳು Iranನ ಅತ್ಯಂತ ಪ್ರಮುಖ ಪರಮಾಣು ಕೇಂದ್ರವಾದ Natanz…

23 hours ago